ಬೆಂಗಳೂರು:ಸೈಕಲ್​ ಜಾಥಾ ನೆಪದಲ್ಲಿ ಸಾರ್ವಜನಿಕರಿಗೆ ಟ್ರಾಫಿಕ್​ ಕಿರಿಕಿರಿ ಉಂಟು ಮಾಡಿದ್ದಲ್ಲದೆ, ಕರೊನಾ ನಿಯಮ ಉಲ್ಲಂಘಿಸಿ ಸಾವಿರಾರು ಸಂಖ್ಯೆಯಲ್ಲಿ ಒಂದೆಡೆ ಸೇರಿದ್ದ ಕಾಂಗ್ರೆಸ್​ ಮುಖಂಡರಿಗೆ ಕಾನೂನಿನ ಬಿಸಿ ಮುಟ್ಟಿಸಲು ಡಿಸಿಪಿ ಚೇತನ್ ಸಿಂಗ್ ರಾಠೋರ್ ಸಜ್ಜಾಗಿದ್ದಾರೆ.
ಪಕ್ಷದ ವಿರುದ್ಧ ಕೇಸ್ ದಾಖಲಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಡಗಡೆಯ ಆಫೀಸು ಏನು ಮಾಡ್ತಿದೆ? ಬಲಗಡೆಯ ಆಫೀಸ್ ಏನು ಮಾಡ್ತಿದೆ ಎಂಬುದು ಗೊತ್ತಿದೆ. ಇವರ ಕೇಸ್​ಗಳಿಗೆ ಹೆದರಿ ಕೂತರೆ ನಾನು ಈ ಸ್ಥಾನಕ್ಕೆ ಅರ್ಹನಾಗುವುದಿಲ್ಲ. ಡಿಸಿಪಿ ಯಾವ ಕೇಸ್ ಬೇಕಾದ್ರೂ ಹಾಕಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿರಿಕರೊನಾ ಹಾಟ್ ಸ್ಪಾಟ್ ಆಯ್ತು ಕೆಪಿಸಿಸಿ, ಅಂತರವಿಲ್ಲದೆ ಇದೆಂಥಾ ಅವಾಂತರ?
ಸಾಮಾನ್ಯ ಜನರ ಬದುಕು ಉಳಿಸುವ ಕೆಲಸಕ್ಕಾಗಿ ಹೋರಾಡುತ್ತಿದ್ದೇವೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಿಂದಲೇ ಸಾಮಾನ್ಯ ಜನರನ್ನು ಸುಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಡಿಕೆಶಿ, ಇಂದಿನ ಪ್ರತಿಭಟನೆ ಕುರಿತಾಗಿ ಯಾವ ಕೇಸ್​ ಬೇಕಾದರೂ ದಾಖಲಿಸಿಕೊಳ್ಳಲಿ ಎಂದಿದ್ದಾರೆ.
ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ವಿಧಾನಸೌಧದ ಬಳಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ಅಂಗವಾಗಿ ಪಕ್ಷದ ಮುಖಂಡರು ಸೈಕಲ್​ ಜಾಥಾ ನಡೆಸಿದರು. ಈ ಜಾಥಾ ನೆಪದಲ್ಲಿ ಕೆಪಿಸಿಸಿ ಕಚೇರಿ ಬಳಿ ಸೇರಿದ್ದ ಜನಜಾತ್ರೆ ಕರೊನಾ ಹಾಟ್​ ಸ್ಪಾಟ್​ನಂತೆ ಕಂಡುಬಂತು. ದಾರಿಯುದ್ದಕ್ಕೂ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿಯನ್ನೂ ತಂದೊಡ್ಡಿತ್ತು.
‘ಕೈ’ ಮುಖಂಡರಿಂದಲೇ ರೂಲ್ಸ್​ ಬ್ರೇಕ್​ ಆಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ಚೇತನ್ ಸಿಂಗ್ ರಾಠೋರ್, ಸೈಕಲ್ ಜಾಥಾ ನಡೆಸಲು ಕಾಂಗ್ರೆಸ್ ಕಾರ್ಯದರ್ಶಿಯಿಂದ ಮನವಿ ಬಂದಿತ್ತು. ಈ ಸಮಯದಲ್ಲಿ ಜಾಥಾ ಮಾಡಲು ಅನುಮತಿ ನೀಡಿಲ್ಲ. ಜಾಥಾ ನಡೆಸದಂತೆ ಕಾಂಗ್ರೆಸ್​ಗೆ ನೋಟಿಸ್ ಕೂಡ ನೀಡಲಾಗಿದೆ. ಇದನ್ನು ಉಲ್ಲಂಘಿಸಿ ಜಾಥ ನಡೆಸಿದ್ದಾರೆ. ಈ ಸಂಬಂಧ ಕಾನೂನು ತಜ್ಞರೊಂದಿಗೆ ಚರ್ಚಿಸಿ ಕೇಸ್ ದಾಖಲಿಸುತ್ತೇವೆ ಎಂದು ತಿಳಿದ್ದಾರೆ.
video/ ಕಾರು ಬಿಟ್ಟು ಸೈಕಲ್​ನಲ್ಲೇ ಬಂದ ಸಿದ್ದರಾಮಯ್ಯ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:15 − 4 =
Remember me
