ಬೆಂಗಳೂರು:ಪತಿಯ ರಾಸಲೀಲೆ ಪ್ರಶ್ನಿಸಿದ ಪತ್ನಿಗೆ ಟಾರ್ಚರ್​ಕೊಟ್ಟ ಸಿನಿಮಾ ನಿರ್ಮಾಪಕ ದಿನಕರ್​ ವಿರುದ್ಧ ಕೇಸ್​ ದಾಖಲಾಗಿದೆ.
ದಿನಕರ್​ ಮಲಯಾಳಂ ಸಿನಿಮಾ ನಿರ್ಮಾಪಕ. ಇವರ ಪತ್ನಿ ರೋಷಿಣಿ ಜತೆಗೆ ಮತ್ತೊಬ್ಬ ಮಹಿಳೆ ದಿನಕರ್​ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ರೋಷಿಣಿ ನಿರ್ದೇಶಕಿ ಹಾಗೂ ಫಿಲ್ಮಿ ಫ್ಯಾಷನ್ ಡಿಸೈನರ್. ಇವರ ಗಂಡ ದಿನಕರ್ ಹಲವು ಮಹಿಳೆಯರಿಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದ. ಅಲ್ಲದೆ ಹೊಸ ಚಿತ್ರ ನಿರ್ಮಾಣ ಮಾಡ್ತಿದ್ದೀನಿ, ನಿಮಗೆ ಅವಕಾಶ ಕೊಡ್ತೀನಿ ಅಂತ ಹಲವು ಯುವತಿಯರನ್ನ ಫೇಸ್ಬುಕ್, ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯ ಮಾಡಿಕೊಂಡು ಅವರಿಗೆ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ. ಅಲ್ಲದೆ ಕೆಲವರೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾನಂತೆ. ಇದನ್ನು ಪ್ರಶ್ನಿಸಿದ್ದಕ್ಕೆ ಟಾರ್ಚ​ರ್​ ಕೊಟ್ಟಿದ್ದಾನೆ ಎಂದು ಆರೋಪಿಸುರುವ ಪತ್ನಿ, ಗಂಡನ ರಾಸಲೀಲೆ ಬಗ್ಗೆ ದೂರಿನಲ್ಲಿ ವಿವರಿಸಿದ್ದಾರೆ.ಇದನ್ನೂ ಓದಿರಿಗ್ರಾಪಂ ಚುನಾವಣಾ ಅಖಾಡಕ್ಕೆ ‘ಪುಟ್ಟಗೌರಿ’ ಧಾರಾವಾಹಿ ನಟಿ ಎಂಟ್ರಿ, ಮೊದಲ ದಿನದ ಪ್ರಚಾರ ಹೇಗಿತ್ತು?
ರೋಷಿಣಿಗೆ ತಿಳಿಯದಂತೆ ಮಾರತ್ತಹಳ್ಳಿಯ ಮಹಿಳೆ ಜತೆ ಸಲುಗೆ ಬೆಳೆಸಿಕೊಂಡಿದ್ದ ದಿನಕರ್, ಆಕೆಗೆ ಪದೇಪದೆ ಅಶ್ಲೀಲ ಮೆಸೇಜ್ ಮಾಡಿ ಟಾರ್ಚರ್ ಕೊಡುತ್ತಿದ್ದ. ಹಾಗಾಗಿ ರೋಷಿಣಿ ಮನೆಗೆ ಬಂದ ಸಂತ್ರಸ್ತೆ ಅಳಲು ತೋಡಿಕೊಂಡಿದ್ದಳು. ಈ ವೇಳೆ ದಿನಕರ್ ಮೊಬೈಲ್ ಅನ್ನು ರೋಷಿಣಿ ಚೆಕ್ ಮಾಡಿದಾಗ ಆತನ ರಾಸಲೀಲೆ ಬೆಳಕಿಗೆ ಬಂದಿತ್ತು. ಇದನ್ನು ಪ್ರಶ್ನಿಸಿದ ಪತ್ನಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಸಂತ್ರಸ್ತ ಮಹಿಳೆ ಹಾಗೂ ದಿನಕರ್ ಪತ್ನಿ ಇಬ್ಬರಿಂದಲೂ ಮಾರತ್ತಹಳ್ಳಿ ಠಾಣೆಯಲ್ಲಿ ದಿನಕರ್ ವಿರುದ್ಧ ದೂರು ದಾಖಲಾಗಿದೆ.ಇದನ್ನೂ ಓದಿರಿಮಹಿಳಾ ಸಹೋದ್ಯೋಗಿಗಳ ಅಶ್ಲೀಲ ದೃಶ್ಯವನ್ನು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದ ಪ್ರೇಯಸಿ! ಮುಂದೇನಾಯ್ತು?
ದಿನಕರ್ ಮೂಲತಃ ಮಲಯಾಳಿ ಆದರೂ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ರೋಷಿಣಿ ಕೊಡಗಿನವರು. 2006ರಲ್ಲಿ ದಿನಕರ್ ಹಾಗೂ ರೋಷಿಣಿ ಮದುವೆ ಆಗಿದ್ದರು. ಮದುವೆ ನಂತರ ದಂಪತಿ ಬೆಂಗಳೂರಿನಲ್ಲೇ ವಾಸವಿದೆ. ಇಬ್ಬರೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿನಕರ್ ಮಲಯಾಳಂನ ‘ಮೈ ಸ್ಟೋರಿ’ ಚಿತ್ರ ನಿರ್ಮಾಣ ಮಾಡಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಹಾಗೂ ಪಾರ್ವತಿ ಮೆನನ್ ಅಭಿನಯದ ಚಿತ್ರ 2018ರಲ್ಲಿ ತೆರೆ ಕಂಡಿತ್ತು. ರೋಷಿಣಿ ‘ಮೈ ಸ್ಟೋರಿ’ ಚಿತ್ರ ನಿರ್ದೇಶನ ಮಾಡಿದ್ದರು. ಕನ್ನಡ, ತಮಿಳು, ಮಲಯಾಳಂ ಸೇರಿ ಸೌತ್ ಇಂಡಿಯಾದ 70ಕ್ಕೂ ಹೆಚ್ಚು ಸಿನಿಮಾಗಳಿಗೆ ರೋಷಿಣಿ ವಸ್ತ್ರ ವಿನ್ಯಾಸಕಿ ಆಗಿದ್ದಾರೆ.
ಕನ್ನಡದ ಕಲ್ಲರಳಿ ಹೂವಾಗಿ, ಮುಂಗಾರು ಮಳೆ-2 ಹಾಗೂ ದರ್ಶನ್ ಅಭಿನಯದ ರಾಜವೀರ, ಮದಕರಿ ನಾಯಕ ಸಿನಿಮಾಗಳಿಗೂ ವಸ್ತ್ರ ವಿನ್ಯಾಸಕಿ ರೋಷಿಣಿ. ದಿನಕರ್-ರೋಷಿಣಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.(ದಿಗ್ವಿಜಯ ನ್ಯೂಸ್​)
ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ

ಬೈಕ್​ನಲ್ಲಿ ಕುಳಿತು ನಿದ್ರೆಗೆ ಜಾರಿದ ತಾಯಿ-ಮಕ್ಕಳು ತರಗೆಲೆಯಂತೆ ರಸ್ತೆಗೆ ಉರುಳಿದರು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 1 =
Remember me
