ಹರಿಹರ:ಕೋವಿಡ್ ನಿಯಮ ಉಲ್ಲಂಘಿಸಿ ಎಣ್ಣೆ ಪಾರ್ಟಿ ಮಾಡಿದ ಆರೋಪದ ಮೇಲೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿಖಿಲ್ ಕೊಂಡಜ್ಜಿ ಹಾಗೂ ಇತರೆ ಏಳು ಜನರ ಮೇಲೆ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಮೇ 18ರ ಸಂಜೆ 4.30ಕ್ಕೆ ತಾಲೂಕಿನ ಕೊಂಡಜ್ಜಿ ಗ್ರಾಮ ಸಮೀಪದ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅತಿಥಿ ಗೃಹದಲ್ಲಿ ನಿಖಿಲ್ ಕೊಂಡಜ್ಜಿ ಹಾಗೂ ಅವರ ಸ್ನೇಹಿತರು ಇದ್ದರು. ಈ ವೇಳೆ ಅವರು ಮಾಸ್ಕ್ ಧರಿಸಿರಲಿಲ್ಲ, ಪರಸ್ಪರ ಅಂತರ ಕಾಪಾಡಿಕೊಂಡಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹುಬ್ಬಳ್ಳಿಯ ಸುಹಾಸ್, ದಾವಣಗೆರೆಯ ಅಚಲ್, ಡಾ.ಹಿತಾ, ಡಾ.ಸಿಮ್ರಾನ್, ಬೆಳಗಾವಿಯ ಮೈನಾಲ್ ಹಾಗೂ ಇವರಿಗೆ ಅತಿಥಿ ಗೃಹದ ಒಳ ಬರಲು ಸಹಕರಿಸಿದ ವಾರ್ಡನ್ ಮಂಜಪ್ಪ, ಕಾವಲುಗಾರ ಚಂದ್ರಪ್ಪ ಅವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ-2020ರ ಕಲಂ 5 (1)ರನ್ವಯ ಪಿಎಸ್‌ಐ ಡಿ.ರವಿಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!
ಈ ಪ್ರಕರಣದಲ್ಲಿ ಆರೋಪಿಯಾಗಿರುವ ನಿಖಿಲ್ ಕೊಂಡಜ್ಜಿ ಅವರು ವಿಧಾನ ಪರಿಷತ್‌ ಸದಸ್ಯ ಮೋಹನ್‌ ಕೊಂಡಜ್ಜಿಯವರ ಸಹೋದರನ ಮಗ. ಇವರಿಗೆ ಇತ್ತೀಚೆಗಷ್ಟೇ ವಿವಾಹವಾಗಿತ್ತು. ಯುವತಿಯರೂ ಪಾಲ್ಗೊಂಡಿದ್ದ ಈ ಎಣ್ಣೆ ಪಾರ್ಟಿ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಲಾಕ್‌ಡೌನ್‌ ಸಂಕಷ್ಟದಲ್ಲಿ ಶ್ರೀಮಂತರ ಮಕ್ಕಳ ಮೋಜಿನಾಟ ನಡೆಯುತ್ತಿದ್ದರೂ ಅದನ್ನು ಕೇಳುವವರು ಇಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಇವರು ಎಣ್ಣೆ ಪಾರ್ಟಿ ಮಾಡಿರುವಂಥದ್ದು ರಾಜ್ಯ ಮಾತ್ರವಲ್ಲದೇ ದೇಶದ ಹಲವು ಸ್ಕೌಟ್‌ ಮತ್ತು ಗೈಡ್‌ ಶಿಬಿರ ನಡೆದ ಸ್ಥಳವಾಗಿದೆ. ಅಲ್ಲದೆ ಇದಕ್ಕೆ ಹತ್ತಿರದಲ್ಲೇ ಕೇಂದ್ರದ ಮಾಜಿ ಸಚಿವ ಕೊಂಡಜ್ಜಿ ಬಸಪ್ಪನವರ ಸಮಾಧಿ ಸ್ಥಳವೂ ಇದೆ. ಈ ಪಾರ್ಟಿಯ ದೃಶ್ಯಗಳನ್ನು ಸ್ಥಳೀಯರು ವಿಡಿಯೋ ಮಾಡಿದ್ದು ಅದರಲ್ಲಿ ನಿಖಿಲ್‌ ಕೊಂಡಜ್ಜಿ ಇರುವ ದೃಶ್ಯವೂ ಸೆರೆಯಾಗಿದೆ.
ಇದನ್ನೂ ಓದಿ:ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…
ಪಾರ್ಟಿ ನಡೆಯುತ್ತಿದ್ದಾಗ ಸ್ಥಳೀಯ ಕೆಲವು ಯುವಕರು ವಿರೋಧ ವ್ಯಕ್ತಪಡಿಸಿದ್ದಕ್ಕೆ, ಯಾರನ್ನು ಕರೆಸುತ್ತೀಯೋ ಕರೆಸೋ ಎಂದು ನಿಖಿಲ್ ಮತ್ತು ಸ್ನೇಹಿತರು ಗದರಿದ್ದರು ಎನ್ನಲಾಗಿದೆ. ಈ ಕುರಿತು ಸ್ಥಳೀಯರು ದೂರು ದಾಖಲಿಸಿದ್ದರಿಂದ ಪೊಲೀಸರು ಅಂದು ಸ್ಥಳಕ್ಕೆ ಭೇಟಿ ನೀಡಿದ್ದರೂ ಪ್ರಕರಣ ದಾಖಲಾಗಿರಲಿಲ್ಲ. ಯಾರ ವಿರುದ್ಧವೂ ಕ್ರಮ ಜರುಗಿರಲಿಲ್ಲ. ಈ ಬಗ್ಗೆಯೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ಇದೀಗ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಐದಾರು ಹಳ್ಳಿಗಳ ಜನರು ಕರೊನಾ ಲಸಿಕೆ ತೆಗೆದುಕೊಳ್ಳಲಿಕ್ಕೇ ಹೆದರುತ್ತಿದ್ದಾರೆ!; ಇವರು ಹೇಳುತ್ತಿರುವ ಕಾರಣವೇ ಭಯಾನಕ!

ಕೋವಿಡ್​ನಿಂದ ಗುಣವಾದ ಮೇಲೆ ಕಾಡುತ್ತದೆಯಂತೆ ನಿತ್ರಾಣ!; ಆರು ತಿಂಗಳಾದರೂ ಸುಸ್ತೋ ಸುಸ್ತು!

500 ರೂಪಾಯಿಗೆ ಲಸಿಕೆ ಮಾರಿ ಸಿಕ್ಕಿಬಿದ್ದ ವೈದ್ಯೆ; ಕೋವಿಡ್​ ವ್ಯಾಕ್ಸಿನ್ ಅಕ್ರಮವಾಗಿ ಮಾರುತ್ತಿದ್ದ ಇಬ್ಬರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 20 =
Remember me
