ಬಾಗಲಕೋಟೆ:ಬಹುಭಾಷಾ ನಟ ಪ್ರಕಾಶ್​ ರಾಜ್​ ಚಂದ್ರಯಾನ 3 ಮಿಷನ್ ಕುರಿತು ಮಾಡಿದ ಟ್ವೀಟ್​ಗೆ ಭಾರೀ ವಿರೋಧಗಳು ವ್ಯಕ್ತವಾಗಿತ್ತು. ಇದೀಗ ನಟನ ವಿರುದ್ಧ ಹಿಂದೂ ಸಂಘಟನೆಯ ಮುಖಂಡ ನಂದು ಗಾಯಕವಾಡ ಹಾಗೂ ಇತರರು ಬಾಗಲಕೋಟೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಮೂಲಕ ಶೀಘ್ರವೇ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:Zameer Ahmed Reacts To HDK’s Allegations | ಕುಮಾರಸ್ವಾಮಿ ಆರೋಪಕ್ಕೆ ಜಮೀರ್ ಅಹ್ಮದ್ ರಿಯಾಕ್ಷನ್ | BENGALURU
ಆಗಸ್ಟ್ 20 ರಂದು, ಪ್ರಕಾಶ್​ ರಾಜ್​ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ “ಇದೀಗ ಬಂದ ಸುದ್ದಿ, ಚಂದ್ರನಿಂದ ಬಂದ ಮೊದಲ ಚಿತ್ರ” ಎಂದು ಚಾಯ್​ವಾಲಾ ಫೋಟೋ ಪೋಸ್ಟ್​ ಮಾಡುವ ಮೂಲಕ ವ್ಯಂಗ್ಯವಾಡಿದ್ದರು. ಸದ್ಯ ಈ ವಿಚಾರವಾಗಿ ಭುಗಿಲೆದ್ದ ಆಕ್ರೋಶದ ಬೆನ್ನಲ್ಲೇ ಇದೀಗ ನಟನ ವಿರುದ್ಧ ದೂರು ದಾಖಲಾಗಿದೆ. ಭಾರತದ ಮಹತ್ವಾಕಾಂಕ್ಷೆಯ ಚಂದ್ರನ ಕಾರ್ಯಾಚರಣೆಯನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಹಲವರು ತೀವ್ರವಾಗಿ ಟ್ವೀಟ್​ನ ಖಂಡಿಸಿದ್ದಾರೆ.
Hate sees only Hate.. i was referring to a joke of#Armstrongtimes .. celebrating our kerala Chaiwala .. which Chaiwala did the TROLLS see ?? .. if you dont get a joke then the joke is on you .. GROW UP#justaskinghttps://t.co/NFHkqJy532
— Prakash Raj (@prakashraaj)August 21, 2023

ತಮ್ಮ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನಲೆ ಪ್ರತಿಕ್ರಿಯೆ ನೀಡಿದ ಪ್ರಕಾಶ್​ ರಾಜ್​, “ಹೇಟ್ ಸೀಸ್ ಓನ್ಲಿ ಹೇಟ್..ನಾನು ಆರ್ಮ್‌ಸ್ಟ್ರಾಂಗ್ ಕಾಲದ ಜೋಕ್ ಅನ್ನು ಉಲ್ಲೇಖಿಸುತ್ತಿದ್ದೆ. ನಮ್ಮ ಕೇರಳದ ಚಾಯ್‌ವಾಲಾವನ್ನು ಸಂಭ್ರಮಿಸುತ್ತಿದೆ. ಆದ್ರೆ, ಟ್ರೋಲಿಗರು ಯಾವ ಚಾಯ್‌ವಾಲಾ ಅನ್ನು ನೋಡಿದ್ದಾರೆ? ನಿಮಗೆ ಜೋಕ್ ಸಿಗದಿದ್ದರೆ, ಆ ಜೋಕ್ ನಿಮ್ಮ ಮೇಲಿದೆ. ಗ್ರೋ ಅಪ್”​ ಎಂದು ರಿ-ಟ್ವೀಟ್​ ಮಾಡುವ ಮೂಲಕ ತಮ್ಮ ಟ್ವೀಟ್​ ಅನ್ನು ಸಮರ್ಥಿಸಿಕೊಂಡಿದ್ದಾರೆ.
ಈ ವಾರ ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ತೆರೆ ಕಾಣಲಿವೆ ಈ ಸಿನಿಮಾಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 3 =
Remember me
