ತುಮಕೂರು:ಕುಣಿಗಲ್ ಕ್ಷೇತ್ರಕ್ಕೆ ಹೊರಜಿಲ್ಲೆಗಳಿಂದ ಬಂದು ಪ್ರಚಾರ ಮಾಡುತ್ತಿರುವ ಆರೋಪ ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಡಾ.ರಂಗನಾಥ್ ಮೇಲೆ ಬಿದ್ದಿದೆ.
ಕುಣಿಗಲ್ ತಾಲ್ಲೂಕಿನ ಕಗ್ಗೆರೆಯಲ್ಲಿ ಎರಡು ಬಸ್ ಸೀಜ್ ಆಗಿದ್ದು ಆ ಬಸ್ ಗಳಲ್ಲಿ ಬಂದ 200ಕ್ಕೂ ಹೆಚ್ಚು ಜನರನ್ನು ಬಿಜೆಪಿ ಕಾರ್ಯಕರ್ತರು ಹಿಡಿದಿಟ್ಟಿದ್ದಾರೆ. ಕಾಂಗ್ರೆಸ್​ನ ಗ್ಯಾರಂಟಿ ಕಾರ್ಡ್, 16 ಬಾಕ್ಸ್​ಗಳು, 50 ಮಾದರಿ ಮತಯಂತ್ರಗಳು ಜತೆಯೇ ಸೀಜ್ ಆಗಿದೆ. ಈ ವೇಳೆಯಲ್ಲೇ ಡಾ.ರಂಗನಾಥ್ ಭಾವಚಿತ್ರವುಳ್ಳ ಕಾರ್ಡ್​ಗಳೂ ಸೀಜ್ ಆಗಿವೆ.
ಮತದಾರರಿಗೆ ಗ್ಯಾರಂಟಿ ಕಾರ್ಡ್ ನೀಡಿ, 1000 ಹಣ ನೀಡುತ್ತಿರೋ ಆರೋಪವನ್ನೂ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಹೊರಿಸಲಾಗಿದ್ದು ಈ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಬಿಜೆಪಿ ಕಾರ್ಯಕರ್ತರು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ.ರಂಗನಾಥ್ ಸೇರಿ 11 ಜನರ ವಿರುದ್ದ ಚುನಾವಣಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಸದ್ಯ ಈ ಪ್ರಕರಣ ಅಮೃತ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + one =
Remember me
