ಬೆಂಗಳೂರು :ಅಶ್ಲೀಲ ವಿಡಿಯೋ ಕರೆ ಮಾಡಿದ ಬಳಿಕ ಅದರ ಸ್ಕ್ರೀನ್ ಶಾಟ್​ ಕಳುಹಿಸಿ ದುಡ್ಡು ಕೊಡು ಅಂತ ಇನ್​ಸ್ಪೆಕ್ಟರ್ ಒಬ್ಬರನ್ನು ಬ್ಲ್ಯಾಕ್​ಮೇಲ್ ಮಾಡೋದಕ್ಕೆ ಶುರುಮಾಡಿದಳಾಕೆ. ಗುರುತುಪರಿಚಯವಿರದ ಮಹಿಳೆಯ ಈ ಕಾಟಕ್ಕೆ ಬೆಚ್ಚಿ ಬಿದ್ದು ಅವರು ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಇನ್​ಸ್ಪೆಕ್ಟರ್ ಸಿ.ದಯಾನಂದ ಈ ಕುರಿತು ದೂರು ದಾಖಲಿಸಿದವರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮೊಬೈಲ್ ನಂಬರ್ ಆಧರಿಸಿ ತನಿಖೆ ಕೈಗೊಂಡಿರುವುದಾಗಿ ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಜನತೆಗೆ ಸಾರಿಗೆ ಸಂಕಷ್ಟ: ಸರ್ಕಾರಿ ಸಿಬ್ಬಂದಿಯಾಗಿ ಪರಿಗಣಿಸಲು ನೌಕರರ ಬಿಗಿಪಟ್ಟು, ರಾಜ್ಯಕ್ಕೆ ಮತ್ತೆ ಬಂದ್ ಬಿಸಿ
ಡಿಸೆಂಬರ್ 8ರ ರಾತ್ರಿ 8.30ರಲ್ಲಿ ಅಪರಿಚಿತ ಮೊಬೈಲ್ ನಂಬರ್​ನಿಂದ ಇನ್​ಸ್ಪೆಕ್ಟರ್ ವಾಟ್ಸ್​ಆಪ್​ನಲ್ಲಿ ವಿಡಿಯೋ ಕಾಲ್ ಬಂದಿದ್ದು, ಅದನ್ನು ಸ್ವೀಕರಿಸಿದ್ದಾರೆ. ಅದರಲ್ಲಿ ಮಹಿಳೆ ಅಶ್ಲೀಲ ವಿಡಿಯೋವನ್ನು ತೋರಿಸುತ್ತಿದ್ದು, ತಕ್ಷಣ ದಯಾನಂದ್ ಕರೆಯನ್ನು ಕಟ್ ಮಾಡಿದ್ದಾರೆ. ಆದರೆ, ಕೆಲವೇ ನಿಮಿಷಗಳಲ್ಲಿ ಆಕೆ ಆ ವಿಡಿಯೋ ಕರೆಯ ಸ್ಕ್ರೀನ್ ಶಾಟ್ ತೆಗೆದು ಇನ್​ಸ್ಪೆಕ್ಟರ್ ಮೊಬೈಲ್​ಗೆ ವಾಟ್ಸ್​ಆಪ್​ನಲ್ಲಿ ಕಳುಹಿಸಿದ್ದು, 11 ಸಾವಿರ ರೂ. ನೀಡುವಂತೆ ಬೇಡಿಕೆ ಒಡ್ಡಿದ್ದಾರೆ. ಇಲ್ಲವಾದರೆ, ಫೇಸ್​ಬುಕ್​ನಲ್ಲಿ ಅಪ್​ಲೋಡ್ ಮಾಡಿ ಸ್ನೇಹಿತರಿಗೆ ಕಳುಹಿಸಿ ಮರ್ಯಾದೆ ತೆಗೆಯುವುದಾಗಿ ಬ್ಲ್ಯಾಕ್​ಮೇಲ್​ ಮಾಡಿದ್ದಾರೆ ಎಂಬುದು ದೂರಿನ ಸಾರಾಂಶ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ನರ್ಸ್​ಗಳ ಬೆತ್ತಲೆ ವಿಡಿಯೋ ಚಿತ್ರೀಕರಿಸಿ ಪ್ರಿಯಕರನಿಗೆ ಕಳುಹಿಸುತ್ತಿದ್ದಳಾಕೆ: ಮೊಬೈಲಲ್ಲಿದ್ದವು ನೂರಾರು ವಿಡಿಯೋ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 6 =
Remember me
