ಮಂಗಳೂರು:ಕರಾವಳಿಯ ಗೋಡಂಬಿ ಉದ್ಯಮಕ್ಕೆ ಪರೋಕ್ಷವಾಗಿ ಕರೊನಾ ಹೊಡೆತ ಬೀಳುವ ಸಾಧ್ಯತೆ ಗೋಚರಿಸಿದೆ. ವಿಯೆಟ್ನಾಂನ ಗೋಡಂಬಿಗೆ ಅತಿ ದೊಡ್ಡ ಮಾರುಕಟ್ಟೆಯಾಗಿದ್ದುದು ಚೀನಾ. ಆದರೀಗ ಕೊರೊನಾದಿಂದ ಗೋಡಂಬಿ ಚೀನಾ ಪ್ರವೇಶಿಸದೆ ದೊಡ್ಡ ಪ್ರಮಾಣದಲ್ಲಿ ವಿಯೆಟ್ನಾಂನಲ್ಲೇ ಸ್ಟಾಕ್ ಉಳಿಯುತ್ತಿದೆ. ಅದರ ವಿಲೇವಾರಿಗಾಗಿ ವಿಯೆಟ್ನಾಂ ಈಗ ಜಗತ್ತಿನ ಇತರ ರಾಷ್ಟ್ರಗಳಿಗೆ ಕಡಿಮೆ ದರದಲ್ಲಿ ರಫ್ತು ಮಾಡುತ್ತಿದೆ.
ವಿಯೆಟ್ನಾಂ ಈ ಕ್ರಮದಿಂದಾಗಿ ಮುಖ್ಯವಾಗಿ ಕರಾವಳಿ ಕರ್ನಾಟಕದ ಗೋಡಂಬಿ ಉದ್ಯಮಗಳು ನಷ್ಟದ ಭೀತಿ ಎದುರಿಸುತ್ತಿವೆ. ಈಗಾಗಲೇ ಅಧಿಕ ದರದಲ್ಲಿ ದೊಡ್ಡ ಪ್ರಮಾಣದಲ್ಲಿ ಆಫ್ರಿಕನ್ ರಾಷ್ಟ್ರಗಳಿಂದ ಕಚ್ಚಾ ಗೇರುಬೀಜ ಆಮದು ಮಾಡಿಕೊಂಡು, ದಾಸ್ತಾನಿರಿಸಿಕೊಂಡಿರುವ ಉದ್ಯಮಿಗಳು ಖರೀದಿ ದರಕ್ಕಿಂತ ಕಡಿಮೆ ಬೆಲೆಗೆ ಸಂಸ್ಕರಿತ ಗೋಡಂಬಿಯನ್ನು ಮಾರಾಟ, ರಫ್ತು ಮಾಡುವಂತಿಲ್ಲ.
ಹಾಗಾದ ಪಕ್ಷದಲ್ಲಿ ಉದ್ಯಮಕ್ಕೆ ನಷ್ಟ ಎನ್ನುತ್ತಾರೆ ಸಿಐಐ ಮಂಗಳೂರು ಚಾಪ್ಟರ್ ಅಧ್ಯಕ್ಷ ಹಾಗೂ ಗೋಡಂಬಿ ಉದ್ಯಮಿ ಪ್ರಕಾಶ್ ಕಲ್ಬಾವಿ. ಅಂತಾರಾಷ್ಟ್ರೀಯ ಗೋಡಂಬಿ ಮಾರುಕಟ್ಟೆಯಲ್ಲಿ ವಿಯೆಟ್ನಾಂ ಹಾಗೂ ಭಾರತ ಪ್ರಬಲ ಸ್ಪರ್ಧಿಗಳು. ಪ್ರತಿವರ್ಷ ಪೂರ್ವ ಹಾಗೂ ಪಶ್ಚಿಮ ಆಫ್ರಿಕಾ ದೇಶಗಳಿಂದ 10 ಲಕ್ಷ ಟನ್ ಕಚ್ಚಾ ಗೇರುಬೀಜ ಆಮದು ಮಾಡಿಕೊಳ್ಳುತ್ತವೆ.
ಭಾರತದಲ್ಲಿ ದೇಶೀಯ ಬೇಡಿಕೆ ಹೆಚ್ಚಿದೆ, ಆದರೂ ರಫ್ತು ಮಾಡಲಾಗುತ್ತದೆ. ವಿಯೆಟ್ನಾಂ ಪ್ರಮುಖವಾಗಿ ರಫ್ತನ್ನೇ ನೆಚ್ಚಿಕೊಂಡಿದೆ. ಗೋಡಂಬಿ ದರ ಕುಸಿತ ಆದ ಬೆನ್ನಲ್ಲೇ ಕಚ್ಚಾ ಗೇರುಬೀಜದ ದರವೂ ಪ್ರತಿ ಟನ್​ಗೆ 1500 ಡಾಲರ್​ನಿಂದ 1200 ಡಾಲರ್​ಗೆ ಕುಸಿದಿದೆ.
ಕರ್ನಾಟಕದ್ದು ದೊಡ್ಡ ಪಾಲು
ಭಾರತದಲ್ಲಿ 6 ಲಕ್ಷ ಟನ್ ಗೇರುಬೀಜ ಬೆಳೆಯ ಲಾಗುತ್ತದೆ. ಅದರಲ್ಲಿ ದೊಡ್ಡ ಪಾಲು ಕರ್ನಾಟಕ ಹಾಗೂ ಕೇರಳದ್ದು. ಉಳಿದಂತೆ ಗೋವಾ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರದಲ್ಲೂ ಉತ್ಪಾದನೆಯಿದೆ. ಗೋಡಂಬಿ ಉದ್ದಿಮೆಗಳ ಒಟ್ಟು ವಾರ್ಷಿಕ ಬೇಡಿಕೆ 17 ಲಕ್ಷ ಟನ್​ನಷ್ಟು. ದೇಶದಲ್ಲಿ ಉತ್ಪಾದನೆಯಾಗಿ ಬಾಕಿ ಉಳಿಯುವ ಸುಮಾರು 11 ಲಕ್ಷ ಟನ್​ಕಚ್ಚಾಗೇರುಬೀಜವನ್ನು ಪೂರ್ವ ಮತ್ತು ಪಶ್ಚಿಮ ಆಫ್ರಿಕಾ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಗೇರುಬೀಜದ ಸಿಪ್ಪೆ ತೆಗೆದಾಗ ಉಳಿವ ಗೋಡಂಬಿ ಸಂಸ್ಕರಿಸಿದಾಗ ವಾರ್ಷಿಕ 3-3.5 ಲಕ್ಷ ಟನ್ ಉಳಿಯುತ್ತದೆ(ಶೇ.70 ಭಾಗ ಸಿಪ್ಪೆಯದ್ದೇ). ಇದರ ಶೇ.75 ಭಾರತದಲ್ಲೇ ಖರ್ಚಾದರೆ ಶೇ.25ರಷ್ಟು ರಫ್ತಾಗುತ್ತದೆ.
ನಷ್ಟದ ಭೀತಿ ಇರುವುದು ನಿಜ. ಆದರೂ ಕರೊನಾ ನಿಯಂತ್ರಣಕ್ಕೆ ಬಂದ ಬಳಿಕ ಪರಿಸ್ಥಿತಿ ಉತ್ತಮಗೊಳ್ಳುವ ನಿರೀಕ್ಷೆಯಲ್ಲಿದ್ದೇವೆ, ಆಗ ದೇಶೀಯ ಮಾರುಕಟ್ಟೆಯೂ ಚುರುಕುಗೊಳ್ಳಬಹುದು.
| ಪ್ರಕಾಶ್ ಕಲ್ಬಾವಿ ಗೋಡಂಬಿ ಉದ್ಯಮಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
