ಬೆಂಗಳೂರು:ನಾನು ಕೊಟ್ಟ ಜಾತಿಗಣತಿ ವರದಿ ನೈಜವಾಗಿದೆ, ವೈಜ್ಞಾನಿಕವಾಗಿಯೇ ಇದೆ ಎಂದು ಜಾತಿಗಣತಿ ಸಿದ್ಧ ಮಾಡಿದ್ದ ಆಯೋಗದ ಅಧ್ಯಕ್ಷ ಕಾಂತರಾಜು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಕೊಟ್ಟ ವರದಿ ನೈಜವಾಗಿದೆ, ವೈಜ್ಞಾನಿಕವಾಗಿದೆ. ವರದಿ ನೋಡದೇ ವರದಿ ಅವೈಜ್ಞಾನಿಕ ಅನ್ನೋದು ಸರಿಯಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
40 ದಿನ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಲಾಗಿದೆ. ಜಾತಿ, ಲಿಂಗ, ಧರ್ಮ, ಅಸ್ತಿ-ಪಾಸ್ತಿ ಎಲ್ಲವೂ ಸೇರಿ ‌55 ಪ್ರಶ್ನೆ ಕೇಳಿದ್ದೇವೆ. ಸಮೀಕ್ಷೆಯಾದ ಮೇಲೆ ಕೂಲಂಕಷವಾಗಿ ಅಂಕಿಅಂಶಗಳ ಸಮೇತ ವರದಿ ಸಿದ್ಧ ಮಾಡಲಾಗಿದೆ. ವರದಿ ಈಗ ಸರ್ಕಾರದ ಆಸ್ತಿ. ಸರ್ಕಾರ ವರದಿ ನೋಡಿದ ಬಳಿಕ ಮುಂದಿನ ತೀರ್ಮಾನ ಮಾಡಲಿ ಎಂದು ತಿಳಿಸಿದ್ದಾರೆ.
ವರದಿಗೆ ಒಕ್ಕಲಿಗರು, ಲಿಂಗಾಯತ ಎರಡು ಸಮುದಾಯಗಳು ವಿರೋಧ ಮಾಡಬಹುದು‌. ಆದರೆ ವರದಿ ಮೊದಲು ನೋಡಲಿ. ಆಮೇಲೆ ಅದು ಸರಿಯಿಲ್ಲ ಎಂದರೆ ವಿರೋಧ ಮಾಡಲಿ. ವರದಿ ನೋಡಿ ಅದರಲ್ಲಿ ಏನಾದರು ತಪ್ಪು ಇದ್ದರೆ ನಾನು ಒಪ್ಪಿಕೊಳ್ಳುತ್ತೇನೆ. ಆಯೋಗದಲ್ಲಿ ಕಷ್ಟ ಪಟ್ಟು ವರದಿ ಮಾಡೋ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ವರದಿಗೆ ಕಾರ್ಯದರ್ಶಿ ಸಹಿ ಇಲ್ಲ ಅನ್ನೋದು ಸರಿಯಲ್ಲ. ವರದಿಯಲ್ಲಿ ತುಂಬಾ ವಾಲ್ಯೂಮ್‌ಗಳು ಇವೆ. ಆದರೆ ಒಂದು ವಾಲ್ಯೂಮ್‌ಗೆ ಕಾರ್ಯದರ್ಶಿ ಸಹಿ ಹಾಕಿಲ್ಲ ಅಷ್ಟೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮೂಲ ಪ್ರತಿ ಕಾಣೆಯಾಗಿದೆ ಅನ್ನೋದು ನನಗೆ ಗೊತ್ತಿಲ್ಲ. ನಾನು ವರದಿ ಕೊಟ್ಟಿದ್ದು 2019ರಲ್ಲಿ. ನಾನು ಇದ್ದಾಗ ಮೂಲ ಪ್ರತಿ ಇತ್ತು. ಈಗ ಇಲ್ಲ ಅನ್ನೋದು ನನಗೆ ಗೊತ್ತಿಲ್ಲ. ಈಗ ನಾನು ಹೊರಗೆ ಇದ್ದು ಮಾತಾಡೋದು‌ ಸರಿಯಲ್ಲ ಎಂದು ಹೇಳಿದ್ದಾರೆ.
ಇದು ಜಾತಿಗಣತಿ ಅಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಅಂತ ಸ್ಪಷ್ಟಪಡಿಸಿದರು. ನಾನು ವರದಿ ಕೊಟ್ಟಿದ್ದೇನೆ. ಯಾರು ಬೇಕಾದರೂ ಅಭಿಪ್ರಾಯ ಹೇಳಬಹುದು. ರಿಜೆಕ್ಟ್ ಮಾಡಿ ಅಂತ ಹೇಳಬಹುದು. ಆದರೆ ಮೊದಲು ವರದಿ ನೋಡಲಿ, ಆಮೇಲೆ ಯಾರು ಏನು ಬೇಕಾದ್ರು ಹೇಳಲಿ. ವರದಿ ನೋಡದೇ ಸರಿಯಿಲ್ಲ ಅನ್ನೋದು‌ ಸರಿಯಲ್ಲ ಎಂದರು.
ಡೇಟಾ ಮಿಸ್ ಆಗಿಲ್ಲ, ತಪ್ಪು ತಿಳುವಳಿಕೆ ಮೂಡಿಸುವುದು ಬೇಡ: ಜಯಪ್ರಕಾಶ್ ಹೆಗ್ಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
