ಬೆಂಗಳೂರು:ಸಂಘ ಪರಿವಾರವು ಮರಾಠಾ ಪೇಶ್ವೆ ಸಮುದಾಯಕ್ಕೆ ಸೇರಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯನ್ನು ಸಿಎಂ ಮಾಡಲು ನಿರ್ಧರಿಸಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದು, ಇದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ದಾಸರಹಳ್ಳಿಯಲ್ಲಿ ಪಂಚರತ್ನ ಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು, ಜೋಶಿ ನಮ್ಮ ಹಳೆಯ ಕಾಲದ ಬ್ರಾಹ್ಮಣರಲ್ಲ. ಬ್ರಾಹ್ಮಣರಲ್ಲಿ ಎರಡು ಮೂರು ವಿಧಗಳಿವೆ. ಶೃಂಗೇರಿ ಮಠ ಒಡೆದ ಬ್ರಾಹ್ಮಣ ವರ್ಗ ಜೋಶಿ ಅವರದ್ದು. ಮಹಾತ್ಮ ಗಾಂಧಿ ಅವರನ್ನು ಕೊಂದ ಬ್ರಾಹ್ಮಣ ವರ್ಗದವರು. ಅವರು ಶೃಂಗೇರಿ ಮಠಕ್ಕೆ ಸೇರಿದವರಲ್ಲ. ಮರಾಠಾ ಪೇಶ್ವೆ ಸಮುದಾಯಕ್ಕೆ ಸೇರಿದವರು.
ನಮ್ಮ ಭಾಗದ ಹಳೇ ಬ್ರಾಹ್ಮಣರು ಸರ್ವೆಜನೋ ಸುಖಿನೋ ಭವಂತು ಎನ್ನುವವರು. ಸರ್ವ ಜನರ ಕ್ಷೇಮ ಬಯಸುವವರು. ಆದರೆ ಇವರು ದೇಶ ಒಡೆಯುವ, ದೇಶಕ್ಕೆ ಕೊಡುಗೆ ನೀಡಿದವರನ್ನು ಹತ್ಯೆ ಮಾಡಿದ ವರ್ಗಕ್ಕೆ ಸೇರಿದವರು ಎಂದು ಪ್ರಲ್ಹಾದ್ ಜೋಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ಪ್ರಲ್ಹಾದ್ ಜೋಶಿ ಅವರನ್ನು ಸಿಎಂ ಮಾಡಲು ಹಾಗೂ ಎಂಟು ಜನ ಉಪ ಮುಖ್ಯಮಂತ್ರಿ ಮಾಡುವ ಸಭೆ ಮಾಡಿದ್ದಾರೆ. ಅದು ನನ್ನ ಗಮನಕ್ಕೆ ಬಂದಿದೆ. ಎಂಟು ಜನ ಯಾರು ಎಂಬ ವಿವರವನ್ನು ಬೇಕಾದರೂ ನಾನು ಕೊಡುತ್ತೇನೆ ಎಂದು ಹೇಳಿದರು.
ಬಿಜೆಪಿಯ ಹುನ್ನಾರ, ಕುತಂತ್ರಕ್ಕೆ ಬಲಿಯಾಗಬೇಡಿ. ಇವರು ದೇಶವನ್ನು ಹಾಳು ಮಾಡುತ್ತಾರೆ. ಪಂಚರತ್ನ ಯೋಜನೆಗೆ ಸಿಗುತ್ತಿರುವ ಜನಸ್ಪಂದನೆ ನೋಡಿ ಅವರು ಹೆದರಿ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು. ಸ್ಯಾಂಟ್ರೋ ರವಿ ಬಂಧನ ಮಾಡಿದ್ದಾರೆ. ಆದರೂ ಯಾರೊಬ್ಬರ ಹೆಸರೂ ಹೊರಗೆ ಬರುವುದಿಲ್ಲ. ನಮ್ಮ ಸರ್ಕಾರ ಬಂದರೆ ಕಳ್ಳರು, ಸುಳ್ಳರನ್ನು ಒಳಗೆ ಹಾಕಿಸುತ್ತೇನೆ ಎಂದು ಗುಡುಗಿದರು.
ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 3ನೇ ಸ್ಥಾನಕ್ಕೆ ತಳ್ಳಲ್ಪಡಲಿದೆ. ಕಾಂಗ್ರೆಸ್​ಗೆ 40 ಸ್ಥಾನ ಬರುವುದೂ ಕಷ್ಟವಾಗಲಿದೆ. ಕಾಂಗ್ರೆಸ್​ನವರು ಬಿಜೆಪಿಯ ಚಿಕ್ಕಪ್ಪನ ಮಕ್ಕಳು. ಈ ಎರಡು ಪಕ್ಷಗಳ ಅಧಿಕಾರ ನೋಡಿ ಬೇಸತ್ತಿರುವ ಜನರು ಜೆಡಿಎಸ್​ಅನ್ನು ಅಧಿಕಾರಕ್ಕೆ ತರಲಿದ್ದಾರೆ. 12 ಜನರ ಸಿಡಿ ಹೊರಗೆ ಬರಬೇಕು.
|ಸಿ.ಎಂ.ಇಬ್ರಾಹಿಂಜೆಡಿಎಸ್ ರಾಜ್ಯಾಧ್ಯಕ್ಷ
ನಮ್ಮ ಪಕ್ಷದ ಬಗ್ಗೆ ಯೋಚನೆ ಮಾಡುವ ಅಗತ್ಯ ಕುಮಾರಸ್ವಾಮಿಯವರಿಗೆ ಇಲ್ಲ. ಅವರು ತಮ್ಮ ಪಕ್ಷ ನೋಡಿಕೊಂಡರೆ ಸಾಕು. ವೈಯಕ್ತಿಕ ಆರೋಪಕ್ಕೆ ಜನ ತಲೆ ಕೆಡಿಸಿಕೊಳ್ಳುವುದಿಲ್ಲ. ಕುಮಾರಣ್ಣಂಗೆ ಈ ಮಾಹಿತಿ ಎಲ್ಲಿಂದ ಬರುತ್ತೆ ಗೊತ್ತಿಲ್ಲ (ಸಿಎಂ ಬದಲು ವಿಚಾರ).
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಬೆಂಗಳೂರು:ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಜಾತಿ, ಉಪಜಾತಿ ಎತ್ತಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಪು್ಪ ಮಾಹಿತಿ ನೀಡುವ ಜತೆಗೆ ಬ್ರಾಹ್ಮಣ ಸಮುದಾಯವನ್ನು ಅಪಮಾನಿಸಿರುವುದು ಖಂಡಿಸುವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಎಚ್​ಡಿಕೆ ಸ್ವಜಾತಿ ಕೂಪ ಮಂಡೂಕ ಯೋಚನೆಗಳು, ತಮ್ಮ ಕುಟುಂಬ ಹಾಗೂ ಮನೆ ಬಿಟ್ಟು ಹೊರಗೆ ಬರಲಿದೆ ಎಂದು ತಿವಿದರು. ಜೆಡಿಎಸ್ ಪಂಚರತ್ನವಲ್ಲ ನವಗ್ರಹ ಯಾತ್ರೆ ಮಾಡಬೇಕು ಎಂದು ಜೋಶಿಯವರು ಸತ್ಯವನ್ನೇ ಹೇಳಿದ್ದು, ಅಷ್ಟಕ್ಕೇ ಎಚ್​ಡಿಕೆಗೆ ಸಿಟ್ಟು ಬಂದಿದೆ. ಸ್ಮಾರ್ಥ ಹಾಗೂ ಪೇಶ್ವೆ ಬ್ರಾಹ್ಮಣರೆಂದು ಮಹಾರಾಷ್ಟ್ರದಲ್ಲಿದ್ದು, ರಾಜ್ಯದಲ್ಲಿ ಇಲ್ಲ. ಆ ವಿಷಯದಲ್ಲಿ ಎಚ್​ಡಿಕೆ ಪಿಎಚ್​ಡಿ ಮಾಡಿದ್ದಾರೆಯೆ? ಎಂದು ರವಿಕುಮಾರ್ ಕೇಳಿದರು. ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಭಯದಿಂದ ಇಂತಹ ಹೇಳಿಕೆ ನೀಡಿದ್ದಾರೆ. ಅವರ ಕಿರುಕುಳಕ್ಕೆ ವೈ.ಎಸ್.ವಿ.ದತ್ತಾ ಜೆಡಿಎಸ್ ತೊರೆದು ಹೋಗಿದ್ದಾರೆ ಎಂದು ಕುಟುಕಿದರು. ಎಚ್​ಡಿಕೆ ಬಗ್ಗೆ ಸಿಡಿ, ತಾಜ್​ವೆಸ್ಟ್ಂಡ್ ಹೋಟೆಲ್, ತೋಟದ ಮನೆ ಇವೆಲ್ಲ ಪ್ರಕರಣಗಳು ನಮಗೂ ಗೊತ್ತಿದೆ ಎಂದು ಎನ್.ರವಿಕುಮಾರ್ ಎಚ್ಚರಿಕೆ ದಾಟಿಯಲ್ಲಿ ಹೇಳಿದರು. ಅವರೇನು ಸತ್ಯಹರಿಶ್ಚಂದ್ರರಲ್ಲ, ನಾವೂ ರಾಜಕಾರಣ ಮಾಡಲು ಬಂದವರು. ಅವರು ಇದೇ ರೀತಿ ಮುಂದುವರಿದರೆ ನಾವೂ ಮಾತನಾಡುತ್ತೇವೆ. ರಾಜ್ಯದ ಅತ್ಯಂತ ಸ್ವಾರ್ಥಿ ರಾಜಕಾರಣಿ ಕುಮಾರಸ್ವಾಮಿ. ರಾಜ್ಯದಲ್ಲಿ ಯಾರಿಗೂ ಬಹುಮತ ಬರಬಾರದು. ನಮ್ಮ ಮನೆ ಬಾಗಿಲಿಗೆ ಬರಬೇಕು ಅಂದುಕೊಂಡಿದ್ದಾರೆ ಎಂದು ಎನ್.ರವಿಕುಮಾರ್ ಕುಟುಕಿದರು.
ಸಚ್ಚಿದಾನಂದಮೂರ್ತಿ ತಿರುಗೇಟು:ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರ ಬಗ್ಗೆ ಟೀಕೆ ಮಾಡುವ ಭರಾಟೆಯಲ್ಲಿ ಸರಳ, ಸಜ್ಜನ ರಾಜಕಾರಣಿ, ಇದುವರೆಗೂ ಯಾವುದೇ ರೀತಿಯ ಆಪಾದನೆ ಅಥವಾ ಕಪ್ಪು ಚುಕ್ಕೆ ಇಲ್ಲದ ಸಚಿವ ಪ್ರಲ್ಹಾದ್ ಜೋಶಿ ಬಗ್ಗೆ ಲಘುವಾಗಿ ಮತ್ತು ಸತ್ಯಕ್ಕೆ ದೂರವಾದ ಹೇಳಿಕೆ ನೀಡಿದ್ದಾರೆ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಟಿಎಮ್​ನಿಂದ ವಿಚಿತ್ರ ರೀತಿಯಲ್ಲಿ ಕಳವಾದ ಹಣ; ಬ್ಯಾಂಕ್​ನವರಿಗೆ ತಲೆನೋವಾಗಿರುವ ಖದೀಮರು!

ವರ್ಕೌಟ್​ ಆದ 50% ಆಫರ್​: ಮೂರನೇ ದಿನವೂ ಕೋಟಿಗಟ್ಟಲೆ ಟ್ರಾಫಿಕ್​ ಫೈನ್​ ಸಂಗ್ರಹ; ಒಟ್ಟು ಮೊತ್ತವೆಷ್ಟು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
