ಬೆಂಗಳೂರು:ಸಮಾಜವಾದಿ ಆಂದೋಲನ ಹುಟ್ಟಿದ್ದೇ ಜಾತಿ ವಿನಾಶಕ್ಕೆ. ಆದರೆ, ದೇಶ ಮುಂದುವರಿದಂತೆ ಹಾಗೂ ಹೆಚ್ಚು ವಿದ್ಯಾವಂತರಾದಂತೆ ಜಾತಿ ವ್ಯವಸ್ಥೆ ಇನ್ನಷ್ಟು ಬಲಗೊಂಡಿದೆ. ಜಾತಿಯ ಕಬಂಧಬಾಹುಗಳು ನಮ್ಮನ್ನು ಕಟ್ಟಿ ಹಾಕಿವೆ. ಇದರಿಂದ ಹೊರಬರಲು ನಾವೆಲ್ಲರೂ ಚಡಪಡಿಸುತ್ತಿದ್ದೇವೆ ಎಂದು ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೀ ಭವತಾರಣಿ ಪ್ರಕಾಶನ, ಗಾಂಧಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ಎಸ್​.ಗುರುಮೂರ್ತಿ ಬರೆದಿರುವ ಸಮಾಜವಾದದ ಹರಿಕಾರ ಜನನಾಯಕ ಭಾರತ ರತ್ನ “ಕರ್ಪೂರಿ ಠಾಕೂರ್​’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಹಸಿವಿಯೆ ಬಾಣೆಲೆಯಲ್ಲಿ ಸುಟ್ಟು ಕರಕಲಾಗಿ ಮತ್ತೆ ಜನಿಸಿದಂತಹ ಶ್ರೇಷ್ಠ ಕ್ರಾಂತಿವಾದಿ ಕರ್ಪೂರಿ ಠಾಕೂರ್​. ಎಲ್ಲ ಕಾಲಕ್ಕೂ ಪ್ರಸ್ತುತವಾಗಿರುವ ಇವರ ಆದರ್ಶಗಳನ್ನು, ಮನೆ&ಮನಗಳನ್ನು ತಲುಪಿಸುವ ಕೆಲಸವಾಗಬೇಕಿದೆ. ಮುಖ್ಯವಾಗಿ ಇಂತಹ ವಿಷಯಗಳಲ್ಲಿ ಅನಕ್ಷರಸ್ಥರಾಗಿರುವ ನಮ್ಮ ರಾಜಕಾರಣಿಗಳು ಈ ಪುಸ್ತಕವನ್ನು ಓದಬೇಕು ಎಂದು ವೀರಪ್ಪ ಮೊಯ್ಲಿ ಸಲಹೆ ನೀಡಿದರು.
ಜಗತ್ತಿನಲ್ಲಿ ಹ್ಯಾಪಿನೆಸ್​ ಇಂಡೆಕ್ಸ್​ (ಸೂಚ್ಯಾಂಕ) ಎಂಬುದು ಇದೆ. ಇದರಲ್ಲಿ 136 ರಾಷ್ಟ್ರಗಳ ಪೈಕಿ ಭಾರತದ 126ನೇ ಸ್ಥಾನದಲ್ಲಿದೆ. ಜಾತಿ ಮತ್ತು ಲಿಂಗ ತಾರತಮ್ಯ ಇರುವವರೆಗೂ ನಮ್ಮ ದೇಶ ಸಂತೋಷದಿಂದ ಇರಲ್ಲ. ಇವುಗಳು ನಾಶವಾದ ಹೊರತು ಎಷ್ಟೇ ಕಾರ್ಯಕ್ರಮ ರೂಪಿಸಿದರೂ ದೇಶದಲ್ಲಿ ಬಡತನ ನಿಮೂರ್ಲನೆಯಾಗಲ್ಲ. ಜಾತಿ ನಿಮೂರ್ಲನೆಗೆ ಕಾಸ್ಮೆಟಿಕ್​ ಸರ್ಜರಿ ಸಾಲದು, ದೊಡ್ಡ ಸರ್ಜಿಕಲ್​ ಸರ್ಜರಿಯಾಗಬೇಕು. ಇಲ್ಲದಿದ್ದರೆ ನಮಗೆಲ್ಲ ಸಮಾಜವಾದಿಗಳು, ಪ್ರಜ್ಞಾಪ್ರಭುತ್ವವಾದಿಗಳು, ಸಂವಿಧಾನದಲ್ಲಿ ನಿಷ್ಠೆ ಇದೆ ಎಂದುಕೊಳ್ಳುವ ಅರ್ಹತೆ, ಯೋಗ್ಯತೆಯೇ ಇಲ್ಲ. ಈ ಬಗ್ಗೆ ರಾಜಕಾರಣಿಗಳು, ಆಡಳಿತಗಾರರು, ವಿದ್ವಾಂಸರು ಅರ್ಥೈಸಿಕೊಳ್ಳುವುದಿಲ್ಲವೊ, ಅಲ್ಲಿವರೆಗೂ ನಾನು ಅವರನ್ನು ಅನಕ್ಷರಸ್ಥರು ಎಂದೇ ಕರೆಯುತ್ತೇನೆ ಎಂದು ಪ್ರತಿಪಾದಿಸಿದರು.ರಾಜ್ಯಸಭೆ ಮಾಜಿ ಸದಸ್ಯ ಡಾ. ಎಲ್​.ಹನುಮಂತಯ್ಯ, ರಾಜ್ಯ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್​. ದ್ವಾರಕಾನಾಥ್​, ಲೇಖಜ ಎಸ್​.ಕೆ. ಶೇಷಚಂದ್ರಿಕ ಮತ್ತಿತರರಿದ್ದರು.
ರಾಜ್ಯಾದ್ಯಂತ ವಾಡಿಕೆಗಿಂತ ಅಧಿಕ ಮಳೆ:ನಾಳೆ ಆರು ಜಿಲ್ಲೆಗಳಿಗೆ ಆರೆಂಜ್​ ಅಲರ್ಟ್
ಜಾತಿ ವಿನಾಶ ಆಂದೋಲನವಾಗಲಿ:ನಾನು ಸಮಾಜವಾದಿ, ಪ್ರಜಾಪ್ರಭುತ್ವವಾದಿಯಾಗಿದ್ದೇನೆ. ಭಾರತದ ಬಡತನ, ಅಸಮಾನತೆಯನ್ನು ನಿಮೂರ್ಲನೆಯಾಗಬೇಕಾದರೆ ಸಮಗ್ರ ಸಮಾಜವಾದಿ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ನೆಹರು ೂಷಣೆ ಮಾಡಿದ್ದರು. ಎಲ್ಲಿಯವರೆಗೂ ಕಾಂಗ್ರೆಸ್​ ಈ ತತ್ವವನ್ನು ನಂಬುತ್ತದೆ ಮತ್ತು ಪಾಲಿಸುತ್ತದೆಯೋ ಅಲ್ಲಿವರೆಗೂ ಬಲ ಹೊಂದಿರುತ್ತದೆ. ಇದು ಕಡಿಮೆಯಾದರೆ ಕಾಂಗ್ರೆಸ್​ ಬಲ ಕುಗ್ಗುತ್ತದೆ. ಗಾಂಧಿಯಿಂದ ಪ್ರೇರಿತರಾದ ಸಮಾಜವಾದಿಗಳು ಜಾತಿ ವ್ಯವಸ್ಥೆ, ಲಿಂಗ ತಾರತಮ್ಯದ ವಿರುದ್ಧ ಸಂಟಿತ ಹೋರಾಟ ರೂಪಿಸಬೇಕು. ದೇಶದ ಮೂಲಭೂತ ತತ್ವದಲ್ಲಿ ಮತ್ತು ಭಾರತೀಯತೆಯಲ್ಲಿ ಆಸಕ್ತಿ ಇರುವವರು ವೈಯಕ್ತಿಕವಾಗಿ, ಸಾಮೂಹಿಕವಾಗಿ ಜಾತಿ ವಿನಾಶ ಆಂದೋಲನಕ್ಕೆ ಮುಂದಾಗಬೇಕು ಎಂದು ಮೊಯ್ಲಿ ಸಲಹೆ ನೀಡಿದರು.
ಜಾತಿ ಪದ್ಧತಿ ನಿಮೂರ್ಲನೆ ಹುಟ್ಟಿದ್ದೆ ಸಮಾಜವಾದಿ ಸಿದ್ಧಾಂತ. ಅಂದು ಕಮ್ಯುನಿಷ್ಟರು ಜಾತಿ ಸಮಸ್ಯೆ ಪ್ರಮುಖವೇನು ಅಲ್ಲ,ಆರ್ಥಿಕ ಸಮಾನತೆ ಬಂದರೆ ಸರಿ ಹೋಗುತ್ತದೆ ಎಂದಿದ್ದರು. ಆದರೆ, ಜಾತಿ ವ್ಯವಸ್ಥೆ ಏನು ಎಂಬುದು ಅವರ ಅರಿವಿಗೆ ಈಗ ಬಂದಿದೆ. ದೇಶದಲ್ಲಿ ಪುರೋಹಿತಶಾಹಿ,ಚಾತುರ್ವಣ ವ್ಯವಸ್ಥೆ ತರಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇಂತವರ ವಿರುದ್ಧ ಕರ್ಪೂರಿ ಠಾಕೂರ್​, ಲೋಹಿಯಾ ಹಾದಿಯಲ್ಲಿ ಹೋರಾಟ ನಡೆಯಬೇಕಿದೆ.>ಬಿ.ಆರ್​.ಪಾಟೀಲ್​, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × five =
Remember me
