| ಕೀರ್ತಿನಾರಾಯಣ ಸಿ. ಬೆಂಗಳೂರು
ರಾಜ್ಯದಲ್ಲಿ 591 ಮಂದಿ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಎಸ್​ಸಿ-ಎಸ್​ಟಿ ವರ್ಗಕ್ಕೆ ಮೀಸಲಿಟ್ಟಿದ್ದ ಸರ್ಕಾರಿ ಸೌಲಭ್ಯ ಅನುಭವಿಸುತ್ತಿರುವ ವಿಚಾರವನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್​ಇ) ಬಯಲಿಗೆಳೆದಿದೆ. ಅಕ್ರಮ ಎಸಗಿರುವವರಲ್ಲಿ ಕೇಂದ್ರ ಹಾಗೂ ರಾಜ್ಯದ 276 ಸರ್ಕಾರಿ ಉದ್ಯೋಗಿಗಳೂ ಸೇರಿದ್ದು, ಸೂಕ್ತ ಕಾನೂನು ಕ್ರಮವಾದಲ್ಲಿ ಇವರೆಲ್ಲ ವಜಾಗೊಳ್ಳುವುದರ ಜತೆಗೆ ಜೈಲು ಸೇರಲಿದ್ದಾರೆ.
ಈ ಅಕ್ರಮದಲ್ಲಿ ತಹಸೀಲ್ದಾರ್​ಗಳೇ ಭಾಗಿಯಾಗಿರುವುದು ಸಾಬೀತಾಗಿದೆ. ಇಂಥ ತಹಸೀಲ್ದಾರ್​ಗಳು ಮತ್ತು ಇತರ ಅಧಿಕಾರಿಗಳ ವಿರುದ್ಧ 153 ಪ್ರಕರಣ ದಾಖಲಿಸಿ, ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ಅಧಿನಿಯಮ (ನೇಮಕಾತಿ ಮತ್ತು ಮೀಸಲಾತಿ) 1990ರ ಅನ್ವಯ ಕ್ರಮ ಕೈಗೊಳ್ಳಲು ಡಿಸಿಆರ್​ಇ ಶಿಫಾರಸು ಮಾಡಿದೆ. 591 ಪ್ರಕರಣಗಳ ಪೈಕಿ ಕೇಂದ್ರ/ರಾಜ್ಯ ಸರ್ಕಾರಿ ಇಲಾಖೆಗಳಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧದ 307 ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಳಿಸಲಾಗಿದೆ.
ಜಿಲ್ಲಾಧಿಕಾರಿಗಳು 14 ಕೇಸ್​ಗಳಲ್ಲಿ ಸಿಂಧುತ್ವ ಪ್ರಮಾಣಪತ್ರ ತಿರಸ್ಕರಿಸಿದ್ದಾರೆ. 5 ಪ್ರಕರಣ ಮುಕ್ತಾಯಗೊಳಿಸಲಾಗಿದೆ. 12 ಮಂದಿ ನಿವೃತ್ತಿಯಾಗಿದ್ದು, ಇನ್ನೂ 276 ಅಧಿಕಾರಿ ಮತ್ತು ಸಿಬ್ಬಂದಿ ಸೇವೆಯಲ್ಲಿ ಮುಂದು ವರಿದಿದ್ದಾರೆ. ಇಂತಹವರಿಗೆ ಮುಂಬಡ್ತಿ ಸ್ಥಗಿತಗೊಳಿಸಿ, ನಿವೃತ್ತಿ ಅಂಚಿನಲ್ಲಿರುವವರಿಗೆ ನಿವೃತ್ತಿ ನಂತರದ ಆರ್ಥಿಕ ಸೌಲಭ್ಯ ತಡೆಹಿಡಿಯುವಂತೆ ನೇಮಕಾತಿ ಪ್ರಾಧಿಕಾರಗಳಿಗೆ ಪತ್ರ ಬರೆಯಲಾಗಿದೆ.ಇದನ್ನೂ ಓದಿ:ಮೊದಲ ಪಂದ್ಯದಲ್ಲೇ ಹೈದರಾಬಾದ್​ ತಂಡಕ್ಕೆ ಸವಾಲಿನ ಗುರಿ ನೀಡಿದ ಆರ್​ಸಿಬಿ
ಕ್ರಿಮಿನಲ್ ಕೇಸಾದ್ರೂ ರಕ್ಷೆ:ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿರುವುದು ದೃಢಪಟ್ಟರೆ ಸಂಬಂಧಪಟ್ಟ ಜಾತಿ ಪರಿಶೀಲನಾ ಸಮಿತಿ ಸಿಂಧುತ್ವ ರದ್ದುಪಡಿಸಿದ ನಂತರ ವಜಾಗೊಳಿಸಬೇಕೆಂದು ಈಗಾಗಲೇ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ನಕಲಿ ಪ್ರಮಾಣಪತ್ರ ಸಲ್ಲಿಸಿರುವುದು ಸಾಬೀತಾದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ, ಬಿಎಸ್ಸೆನ್ಸೆಲ್, ಕೆಎಸ್ಸಾರ್ಟಿಸಿ/ಬಿಎಂಟಿಸಿ, ರೈಲ್ವೆ, ಕಾಲೇಜು ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳ 27 ನೌಕರರ ವಿರುದ್ಧ ಈಗಾಗಲೇ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದಾಗ್ಯೂ ಅವರನ್ನು ವಜಾಗೊಳಿಸದೆ ಮುಂದುವರಿಸಿರುವ ಕ್ರಮಕ್ಕೆ ಡಿಸಿಆರ್​ಇ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ತಹಸೀಲ್ದಾರ್​ಗಳಿಗೂ ಸಂಕಷ್ಟ:ಕೆಲ ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳು ಲಂಚದಾಸೆಗೆ ನಕಲಿ ಜಾತಿ ಪ್ರಮಾಣಪತ್ರ ವಿತರಿಸಿದ್ದಾರೆ. 153 ಕೇಸ್​ಗಳಲ್ಲಿ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದೆ. ಅದರಂತೆ ಬೆಂಗಳೂರು ನಗರ-1, ತುಮಕೂರು-2, ಮೈಸೂರು-7, ಮಂಡ್ಯ-3, ಚಾಮರಾಜನಗರ-2, ಹಾಸನ-1, ದಾವಣಗೆರೆ-1, ಹಾವೇರಿ-4, ಶಿವಮೊಗ್ಗ-5, ಬೆಳಗಾವಿ-12, ಧಾರವಾಡ-3, ವಿಜಯಪುರ-1, ಬಾಗಲಕೋಟೆ-5, ಗದಗ-2, ಉತ್ತರ ಕನ್ನಡ-38, ಚಿಕ್ಕಮಗಳೂರು-1, ದಕ್ಷಿಣ ಕನ್ನಡ-1, ಕಲಬುರಗಿ-25, ಬೀದರ್-20, ರಾಯಚೂರು-2, ಕೊಪ್ಪಳದಲ್ಲಿ 8 ಪ್ರಕರಣಗಳು ದಾಖಲಾಗಿವೆ.ಇದನ್ನೂ ಓದಿ:ಡ್ಯಾನ್ಸರ್ ಕಿಶೋರ್ ಜತೆ ಸಂಪರ್ಕ; ಇಬ್ಬರು ಯುವತಿಯರು ಸಿಸಿಬಿ ವಶಕ್ಕೆ
ಪರಿಶಿಷ್ಟ ಜಾತಿ ಮತ್ತು ಪಂಗಡದ ಸೌಲಭ್ಯ ವಂಚಿತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಡಿಸಿಆರ್​ಇ ಘಟಕ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ. ಬೇರ್ಯಾವ ರಾಜ್ಯಗಳಲ್ಲೂ ಎಸ್ಸಿ-ಎಸ್ಟಿ ವರ್ಗಕ್ಕಾಗಿ ಪ್ರತ್ಯೇಕ ಘಟಕ ಸ್ಥಾಪಿಸಿಲ್ಲ. ಇತ್ತೀಚೆಗೆ ಆಂಧ್ರಪ್ರದೇಶದ ಅಧಿಕಾರಿಗಳ ತಂಡ ಇಲ್ಲಿಗೆ ಭೇಟಿ ಕೊಟ್ಟು ಮಾಹಿತಿ ಪಡೆದಿದೆ.
ಬೆಂಗಳೂರು ನಗರ, ಕೋಲಾರ, ಮೈಸೂರು, ಕೊಡಗು, ಬೆಳಗಾವಿ, ಗದಗ, ವಿಜಯಪುರ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಕರ್ನಾಟಕ ಎಸ್ಸಿ-ಎಸ್ಟಿ ಮತ್ತು ಹಿಂದಳಿದ ವರ್ಗಗಳ ಅಧಿನಿಯಮ 1992ರ ಅನ್ವಯ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿರುವ ಬಗ್ಗೆ ವರದಿ ಸ್ವೀಕೃತವಾದ 1 ತಿಂಗಳಲ್ಲಿ ಅಂತಿಮ ತೀರ್ಮಾನ ಕೈಗೊಂಡು ಆರೋಪಿತ ನೌಕರನನ್ನು ವಜಾ ಮಾಡಬೇಕು. ಆದರೆ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗಳು ಐದು ವರ್ಷಕ್ಕಿಂತ ಅಧಿಕ ಸಮಯದಿಂದಲೂ ಇತ್ಯರ್ಥಕ್ಕೆ ಬಾಕಿ ಉಳಿಸಿಕೊಂಡಿರುವುದು ಡಿಸಿಆರ್​ಇ ವಿಚಾರಣೆಯಲ್ಲಿ ಬಹಿರಂಗವಾಗಿದೆ. ಈ ಕೂಡಲೇ ವಜಾಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ಕೊಟ್ಟಿದೆ.
ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿರುವ 591 ಪ್ರಕರಣ ಪತ್ತೆಯಾಗಿದ್ದು, ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ. ಜಿಲ್ಲಾಧಿಕಾರಿ, ತಹಸೀಲ್ದಾರ್, ಆಪಾದಿತರ ಜಾತಿ ಪ್ರಮಾಣ ಪತ್ರ ಸಿಂಧುತ್ವ ತಿರಸ್ಕರಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಲಾಗುತ್ತದೆ. ಕೋವಿಡ್ ಕಾರಣಕ್ಕೆ ಕ್ರಮ ತೆಗೆದುಕೊಳ್ಳು ವುದು ವಿಳಂಬವಾಗುತ್ತಿದೆ. ಡಿಸಿಗಳ ಬಳಿ ನಾನೇ ಮಾತ ನಾಡಿ ಗಮನಕ್ಕೆ ತರುತ್ತಿದ್ದೇನೆ. ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಸೌಲಭ್ಯ ಪಡೆದಿರುವುದು ಗಮನಕ್ಕೆ ಬಂದರೆ ಯಾರು ಬೇಕಾದರೂ ನಮ್ಮ ಕಚೇರಿಗೆ ದೂರು ಸಲ್ಲಿಸಬಹುದು.
| ಡಾ.ಕೆ.ರಾಮಚಂದ್ರ ರಾವ್ಎಡಿಜಿಪಿ, ಡಿಸಿಆರ್​ಇ
ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ ಕೇಂದ್ರ ಸರ್ಕಾರದ ಅಧೀನದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್)ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ಜನಾರ್ದನ ಎಂಬುವರನ್ನು ಡಿಸಿಆರ್​ಇ ಶಿಫಾರಸು ಪತ್ರದ ಮೇರೆಗೆ ಇತ್ತೀಚೆಗೆ ವಜಾಗೊಳಿಸಲಾಗಿದೆ. ಈವರೆಗೆ 86 ನೌಕರರನ್ನು ಡಿಸ್ಮಿಸ್ ಮಾಡಲಾಗಿದೆ.
‘ನನ್ನ ಮಗ ಈ ಮಣ್ಣಿನ ಕೆಳಗೆ ಮಲಗಿದ್ದಾನೆ’: 45 ದಿನಗಳಿಂದ ಪೆಟ್ಟಿಮುಡಿಯಲ್ಲಿ ಶವ ಹುಡುಕುತ್ತಿರುವ ಅಪ್ಪನ ಕಣ್ಣೀರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + nineteen =
Remember me
