ಚಾಮರಾಜನಗರ:ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಾತಿವಾರು ಸಮೀಕ್ಷಾ ವರದಿ ಸಿದ್ಧವಾಗಿತ್ತು. ಆದರೆ ಅಂದಿನ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ವರದಿಯನ್ನು ಬಿಡುಗಡೆ ಮಾಡದಂತೆ ಹೆದರಿಸಿದ್ದರು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೊಸ ಬಾಂಬ್ ಸಿಡಿಸಿದ್ದಾರೆ.
ಆ ವೇಳೆ ಪುಟ್ಟರಂಗಶೆಟ್ಟಿ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದರು. ಇದೀಗ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸ್ವಗ್ರಾಮ ಉಪ್ಪಿನಮೋಳೆಯಲ್ಲಿ ಭಾನುವಾರ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ, ನಾನು ಸಚಿವನಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಜಾತಿವಾರು ಸಮೀಕ್ಷೆ ಮಾಡಿಸಿ ವರದಿ ಮಂಡಿಸಲು ಹೊರಟಿದ್ದೆ. ಆದರೆ ಕುಮಾರಸ್ವಾಮಿ ಕರೆ ಮಾಡಿ ವರದಿಯನ್ನು ಬಿಡುಗಡೆ ಮಾಡದೆ ರದ್ದುಗೊಳಿಸುವಂತೆ ಬೆದರಿಕೆ ಹಾಕಿದ್ದರು ಎಂದರು.ಇದನ್ನೂ ಓದಿರಿಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ನಿನಗೆ ಗೊತ್ತಾ? ಸುಮ್ನೆ ಚಿಕನ್​ ತಿನ್ಲಾ: ಸಿದ್ದರಾಮಯ್ಯ
ಆ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಹಾಗೂ ಸದಸ್ಯರಾಗಿದ್ದ ಲಿಂಗಪ್ಪ ಅವರ ನೇತೃತ್ವದಲ್ಲಿ ಜಾತಿವಾರು ಸಮೀಕ್ಷೆ ಪೂರ್ಣಗೊಂಡಿತ್ತು. ಆದರೆ ಅದರ ಮಾಹಿತಿ ತಿಳಿದುಕೊಳ್ಳುವಷ್ಟರಲ್ಲಿ ಎಚ್​ಡಿಕೆ ತಡೆದರು. ಈಗಲೂ ಆ ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಪುಟ್ಟರಂಗಶೆಟ್ಟಿ ಹೇಳಿದರು.
ಜಾತಿವಾರು ಸಮೀಕ್ಷಾ ವರದಿಯನ್ನು ಮಂಡಿಸು. ಅದನ್ನು ಹೆಚ್ಚು ಪ್ರಚಾರಪಡಿಸಿ, ಜನಸಂಖ್ಯೆಗನುಗುಣವಾಗಿ ಅನುದಾನ ಬಿಡುಗಡೆ ಮಾಡಿಸಲು ಸಹಾಯವಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಅದಕ್ಕೆ ಎಚ್​ಡಿಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವರದಿ ಮಂಡನೆ ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಲಿಂಗಾಯತರು ಒಂದೂವರೆ ಕೋಟಿ ಜನಸಂಖ್ಯೆ ಇದ್ದೀವಿ, ಒಕ್ಕಲಿಗರು ಒಂದು ಕೋಟಿ ಇದ್ದೀವಿ, ಉಪ್ಪಾರರು 30 ಲಕ್ಷ ಇದ್ದೀವಿ ಅಂಥ ಹೇಳುತ್ತಿರುವುದೆಲ್ಲ ಸುಳ್ಳು. ಲಿಂಗಾಯತರು ಇರುವುದೇ 65 ಲಕ್ಷ ಜನಸಂಖ್ಯೆ. ಅಂತೆಯೆ, ಉಪ್ಪಾರರು 14 ಲಕ್ಷ ಇದ್ದೀವಿ. ಒಕ್ಕಲಿಗರು ಅಂದಾಜು 48 ಲಕ್ಷ ಇರಬಹುದು. ಎಲ್ಲಕ್ಕಿಂತ ಮುಸ್ಲಿಂ ಸಮುದಾಯದ ಜನಸಂಖ್ಯೆಯೇ ಹೆಚ್ಚು ಎಂದು ತಿಳಿಸಿದರು.
ಜಾತಿವಾರು ಸಮೀಕ್ಷೆಯ ವರದಿ ಸಿದ್ಧಪಡಿಸಿ, ಮಂಡನೆಗೆ ಮುಂದಾಗಿದ್ದ ವೇಳೆ ಎಚ್​ಡಿಕೆ ಕೆರೆ ಮಾಡಿ, ವರದಿಯನ್ನು ಮಂಡನೆ ಮಾಡಬಾರದು ಮತ್ತು ಆ ಕುರಿತ ಸಭೆಯನ್ನು ರದ್ದುಪಡಿಸಬೇಕೆಂದು ಹೇಳಿದ್ದರು. ಮುಖ್ಯಮಂತ್ರಿಯ ಮಾತಿಗೆ ಬೆಲೆ ಕೊಟ್ಟು ಸಭೆಯನ್ನು ರದ್ದುಪಡಿಸಿದ್ದೆ.| ಸಿ.ಪುಟ್ಟರಂಗಶೆಟ್ಟಿಮಾಜಿ ಸಚಿವ
ಹೋಟೆಲ್​ ಬಿಲ್​ 2 ಸಾವಿರ ಆದ್ರೆ ಬರೋಬ್ಬರಿ 50 ಸಾವಿರ ರೂಪಾಯಿ ಟಿಪ್ಸ್​ ಕೊಡ್ತಾನೆ ಈ ಭೂಪ!

ಹೀಗಾದರೆ ರಾಜ್ಯದ ಉದ್ಧಾರ ಹೇಗೆ? ಯಾರು ವೀಕು, ಯಾರು ಫೇಕು?

ರಾತ್ರಿಗಿಂತ ಹಗಲಿನಲ್ಲೇ ಕಾಂಡಂ ಮಾರಾಟ ಜಾಸ್ತಿ!

ವಿಷ್ಣುದಾದಗೆ ಅಪಮಾನ: ದುಷ್ಕರ್ಮಿಗಳ ವಿರುದ್ಧ ಸಿಡಿದೆದ್ದ ದರ್ಶನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
