ಗದಗ:ಸಾಕು ಪ್ರಾಣಿಗಳು ಮಾಲೀಕರ ಪ್ರಾಣ ಉಳಿಸುವ ಕಥೆಗಳನ್ನು ಅಲ್ಲಲ್ಲಿ ಕೇಳಿರುತ್ತೇವೆ. ಅದರಲ್ಲಿ ನಾಯಿಗಳ ಕಥೆಗಳೇ ಹೆಚ್ಚು. ಆದರೆ ಈ ಎರಡು ಬೆಕ್ಕುಗಳು ಮಾತ್ರ ತಮಗೆ ನಿತ್ಯವೂ ಹಾಲು ಅನ್ನ ಹಾಕುವ ಮಾಲೀಕರ ಪ್ರಾಣವನ್ನು ನಾಗರ ಹಾವಿನಿಂದ ಕಾಪಾಡಿದೆ.
ಈ ಅಪರೂಪದ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದ ಅಂಬೇಡ್ಕರ್ ನಗರದ ಲಕ್ಷಣ ಚಲವಾದಿ ಎನ್ನುವವರ ಮನೆಯಲ್ಲಿ ನಡೆದಿದೆ. ನಾಗರಹಾವೊಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಅಡುಗೆ ಮನೆ ಸೇರಿದೆ. ಇದನ್ನು ಕಂಡ ಬೆಕ್ಕುಗಳು ಮನೆ ಮಾಲೀಕರು ಬರುತ್ತಿದ್ದಂತೆ ಅಡುಗೆ ಕೋಣೆಯ ಬಳಿ ನಿಂತಿವೆ.
ಅಡುಗೆ ಮನೆ ಒಳಕ್ಕೆ ಕುಟುಂಬದ ಸದಸ್ಯರಿಗೆ ಹೋಗಲೇ ಬಿಡಲಿಲ್ಲ. ಈ ಸಂದರ್ಭ ಬೆಕ್ಕುಗಳ ವರ್ತನೆಯಿಂದ ಅನುಮಾನಗೊಂಡ ಮನೆ ಮಾಲೀಕರು, ಅಡುಗೆ ಮನೆಯನ್ನು ಪರಿಶೀಲಿಸಿದ್ದಾರೆ. ಆಗ ಅಲ್ಲಿ ಅವಿತಿದ್ದ ನಾಗರಹಾವು ಪ್ರತ್ಯಕ್ಷವಾಗಿದೆ.
ನಂತರ ಮನೆಯವರು ಉರಗ ರಕ್ಷಕ ಬಿ ಆರ್ ಸುರೇಬಾನ ಅವರನ್ನು ಕರೆಸಿದ್ದು ಅಡುಗೆ ಮನೆಯಲ್ಲಿದ್ದ ನಾಗರ ಹಾವನ್ನು ರಕ್ಷಣೆ ಮಾಡಿಸಿದ್ದಾರೆ. ಉರಗ ರಕ್ಷಕ ನಂತರ ಸುರಕ್ಷಿತ ಪ್ರದೇಶಕ್ಕೆ ನಾಗರ ಹಾವನ್ನು ಬಿಟ್ಟು ಬಂದಿದ್ದಾರೆ. ಕುಟುಂಬಸ್ಥರು ಇದೀಗ ಬೆಕ್ಕುಗಳು ನಮ್ಮ ಜೀವ ಉಳಿಸಿದವು ಎಂದು ಖುಷಿಯಿಂದ ಹೇಳುತ್ತಿದ್ದಾರೆ.
ಶಿವಾಜಿನಗರದ ಮಸೀದಿಯಲ್ಲಿ ಬಾಂಬ್​ ಇದೆ ಎಂದು ಕರೆ! ಬೆಚ್ಚಿಬಿದ್ದ ಪೊಲೀಸರು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
