ಬೆಂಗಳೂರು :ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸುವಂತೆ ಗೋವಂಶ-ಜಾನುವಾರು ರಕ್ಷಾದಳದ ಸಂಚಾಲಕ ಹಾಗೂ ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಅವರು ಪಶು ಸಂಗೋಪನ ಸಚಿವ ಪ್ರಭು ಚವ್ಹಾಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ಗೋವಧೆ ಪ್ರತಿಬಂಧಕ ಕಾಯ್ದೆ 1964 ಮತ್ತು ಜಾನುವಾರು ಪರಿರಕ್ಷಣಾ ಕಾನೂನಿನಲ್ಲಿನ ಕೆಲವು ನ್ಯೂನತೆಗಳನ್ನು 2010ರಲ್ಲಿ ಸರ್ಕಾದದಿಂದ ತಿದ್ದುಪಡಿ ಮಾಡಿ ಗೋಹತ್ಯೆ ನಿಷೇಧ ಮಸೂದೆಗೆ ಎರಡೂ ಸಂಪುಟಗಳ ಒಪ್ಪಿಗೆ ಪಡೆಯಲಾಗಿತ್ತು. ನಂತರ, ಅಧಿಕಾರಕ್ಕೆ ಬಂದ ಸರ್ಕಾರ ಮಸೂದೆ ವಾಪಸ್ ಪಡೆದುಕೊಂಡಿತು. ಇದರಿಂದಾಗಿ ಲಕ್ಷಾಂತರ ಜಾನುವಾರುಗಳ ಮಾರಣಹೋಮ ನಡೆದಿದೆ. ಈಗ ಮತ್ತೊಮ್ಮೆ ಗೋಹತ್ಯೆ ನಿಷೇಧ ಕಾನೂನು ಬಿಗಿಗೊಳಿಸಿ, ಕಾಯ್ದೆ ಜಾರಿಗೊಳಿಸುವ ಮೂಲಕ ‘ಗೋವಂಶ-ಜಾನುವಾರು ಹತ್ಯೆ ಮುಕ್ತ’ ರಾಜ್ಯವನ್ನಾಗಿ ನಿರ್ಮಿಸಬೇಕು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಈ ಕಾಯ್ದೆಯಲ್ಲಿ ಯಾವುದೇ ವಯಸ್ಸಿನ ಹಸು, ಕರು, ಎತ್ತು, ಎಮ್ಮೆ, ಕೋಣಗಳನ್ನು ಯಾರೊಬ್ಬರೂ, ಯಾವುದೇ ಕಾರಣಕ್ಕೂ ಹತ್ಯೆ ಮಾಡಬಾರದು. ಹತ್ಯೆ ಉದ್ದೇಶಕ್ಕಾಗಿ ರಾಜ್ಯದ ಒಳಗೆ ಅಥವಾ ಹೊರಗೆ ಜಾನುವಾರುಗಳ ಸಾಗಾಣಿಕೆ ನಿಷೇಧಿಸಬೇಕು. ಜತೆಗೆ, ಕರ್ನಾಟಕ ರಾಜ್ಯ ಗೋಸೇವಾ ಆಯೋಗವನ್ನು ಪುನರ್ ರೂಪಿಸಬೇಕು ಎಂದು ವಿನಂತಿಸಿದ್ದಾರೆ. ಮನವಿ ಪತ್ರ ಸಲ್ಲಿಕೆ ವೇಳೆ ಜಾನುವಾರು ರಕ್ಷಣಾ ದಳದ ಸಂಚಾಲಕ ಉತ್ತಮ್ ಚಂದ್ ಚಝರ್ ಇದ್ದರು.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 + thirteen =
Remember me
