ಬೆಂಗಳೂರು:ಕಾವೇರಿ ನೀರು ನಿಯಂತ್ರಣ ಸಮಿತಿಯು 15 ದಿನಗಳ ಕಾಲ ಪ್ರತಿದಿನ ಐದು ಸಾವಿರ ಕ್ಯುಸೆಕ್ ನೀರು ಪೂರೈಸಬೇಕೆಂಬ ಸೂಚನೆಯು ರಾಜ್ಯವನ್ನು ಸಂದಿಗ್ಧಕ್ಕೆ ಸಿಲುಕಿದೆ. ತಮಿಳುನಾಡು ಬಿಗಿಪಟ್ಟಿನಿಂದ ತಲೆದೋರಿದ ಕಾವೇರಿ ಬಿಕ್ಕಟ್ಟು ಬಗೆಹರಿಸಲು ಕೇಂದ್ರ ಸರ್ಕಾರದ ಮಧ್ಯೆ ಪ್ರವೇಶಕ್ಕೆ ರಾಜ್ಯ ಸರ್ಕಾರ ಮೊರೆಯಿಟ್ಟಿದೆ.
ರಾಜ್ಯಕ್ಕೆ ನೀರಿಲ್ಲದಿರುವಾಗ ಪೂರೈಸುವುದು ಎಲ್ಲಿಂದ ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ್ದು, ಕೇಂದ್ರ ಜಲಶಕ್ತಿ ಗಜೇಂದ್ರಸಿಮಗ್ ಶೆಖಾವತ್ ಅವರಿಗೆ ವಿಸ್ತೃತ ಪತ್ರ ಬರೆದು ರಾಜ್ಯದ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.
ವಾಸ್ತವಿಕ ಅಂಕಿ-ಅಂಶಗಳೊಂದಿಗೆ ರಾಜ್ಯ ಸರ್ಕಾರ ಮಂಡಿಸಿದ ವಾದವನ್ನು ಪರಿಗಣಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ತಿಳಿಸಬೇಕು. ಅಲ್ಲದೆ, 15 ದಿನಗಳ ಕಾಲ ಪ್ರತಿದಿನ ಐದು ಸಾವಿರ ಕ್ಯುಸೆಕ್ ನೀರು ಪೂರೈಸಬೇಕೆಂಬ ನಿರ್ಧಾರವನ್ನು ಪುನರ್ ಪರಿಶೀಲಿಸಲು ಕಾವೇರಿ ನಿಯಂತ್ರಣ ಸಮಿತಿಗೆ ಮನವರಿಕೆ ಮಾಡಿಕೊಡ ಬೇಕು ಎಂದು ಕೋರಿದ್ದಾರೆ.
ಕಾವೇರಿ ಕಣಿವೆಯ ರಾಜ್ಯದ ತಾಲೂಕುಗಳಿಗೆ ಕುಡಿಯಲು ಜನ-ಜಾನುವಾರುಗಳು ನೀರು ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ನಿಂತ ಬೆಳೆಗಳಿಗೆ ಸೆಪ್ಟೆಂಬರ್ ತನಕ ನೀರು ಪೂರೈಸುವ ಬದ್ಧತೆ, ಕೈಗಾರಿಕೆ ಬಳಕೆ ಸೇರಿ 106.20 ಟಿಎಂಸಿ ಅಡಿಗಳ ಅಗತ್ಯವಿದೆ.
ಆದರೆ ಕಾವೇರಿ ನದಿ ಕೊಳ್ಳದ ವ್ಯಾಪ್ತಿಯ ನಾಲ್ಕು ಜಲಾಶಯಗಳಿಗೆ ಒಳಹರಿವು ಸಂಪೂರ್ಣ ನಿಲುಗಡೆಯಾಗಿದ್ದು, ಸದ್ಯಕ್ಕೆ 53 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಬೇಡಿಕೆಗೆ ಹೋಲಿಸಿದ ಶೇ.53ರಷ್ಟು ಕೊರತೆಯಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಸೆಪ್ಟೆಂಬರ್ ತನಕ ಉತ್ತಮ ಮಳೆಯಾಗುವ ಲಕ್ಷಣಗಳಿಲ್ಲ. ಈಗಲೇ ತೀವ್ರ ಭಾವ ತಲೆದೋರಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ಕಟ ಅಭಾವ ತಲೆದೋರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾವೇರಿ ಕಣಿವೆ ಪ್ರದೇಶ ಕಳೆದ ಮೂರು ದಶಕಗಳಲ್ಲಿಯೇ ಅತ್ಯಂತ ಕಡಿಮೆ ಮಳೆ, ಒಳಹರಿವು ಕಂಡಿದೆ. ತಮಿಳುನಾಡು 92 ದಿನ (ಜೂ.12 ರಿಂದ ಸೆ.11ರವರೆಗೆ) 99.776 ಟಿಎಂಸಿ ಅಡಿ ನೀರು ಬಳಸಿದೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.
ನೈರುತ್ಯ ಮುಂಗಾರು ವೈಲ್ಯದಿಂದ ರಾಜ್ಯಕ್ಕೆ ಹೆಚ್ಚಿನ ನಷ್ಟವಾಗಿದೆ. ಆದರೆ ತಮಿಳುನಾಡು ಹೆಚ್ಚಿನ ಸಂಕಷ್ಟ ಬಿಂಬಿಸಿಕೊಳ್ಳಲು ತಪ್ಪು ಮಾಹಿತಿ ನೀಡಿದೆ. ಈ ಪೈಕಿ 5.60 ಲಕ್ಷ ಎಕರೆ ನೀರಾವರಿ ಪ್ರದೇಶ ಎಂದಿರುವುದು ವಾಸ್ತವಕ್ಕೆ ದೂರವಾಗಿದೆ ಎಂದು ಅಂಕಿ-ಅಂಶ ಸಹಿತ ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.
– ಈಶಾನ್ಯ ಮಳೆಯು ಕರ್ನಾಟಕಕ್ಕಿಂತ ತಮಿಳುನಾಡಿಗೆ ಅನುಕೂಲವಾಗಿದೆ. ಕೆಆರ್‌ಎಸ್, ಕಬಿನಿ ಅಣೆಕಟ್ಟೆಗಳ ಕೆಳಗಿನ ಬಿಳಿಗುಂಡ್ಲುವರೆಗಿನ ಕಾವೇರಿ ಜಲಾಶಯ ಪ್ರದೇಶದಿಂದ 60 ಟಿಎಂಸಿ ಅಡಿ ಗಿಟ್ಟಿಸಿಕೊಂಡಿದೆ.– ಮೆಟ್ಟೂರು ಅಣೆಕಟ್ಟೆಯ ಕೆಳಭಾಗದಿಂದ ತಮಿಳುನಾಡು ಡೆಲ್ಟಾ ವ್ಯವಸ್ಥೆಯಡಿ 30 ಟಿಎಂಸಿ ಅಡಿ ಅಂತರ್ಜಲ ಲಭ್ಯವಿದೆ.– ಸೆ.12ರ ಮಾಹಿತಿ ಪ್ರಕಾರ ಮೆಟ್ಟೂರು ಜಲಾಶಯದಲ್ಲಿ 24.233 ಟಿಎಂಸಿ ಅಡಿ ಜಲಸಂಗ್ರಹವಿದೆ. ಹೆಚ್ಚುವರಿ 60 ಟಿಎಂಸಿ ಅಡಿ ಹರಿವು ಪರಿಗಣಿಸಬೇಕು.– ಸಂಕಷ್ಟ ಪರಿಸ್ಥಿತಿ ಅರಿವಿದ್ದೂ ತಮಿಳುನಾಡು ದೊಡ್ಡ ಪ್ರಮಾಣದಲ್ಲಿ ಭತ್ತ ಬೆಳೆಯುವ ಪ್ರಮಾಣವನ್ನು ವಿಸ್ತರಿಸಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × five =
Remember me
