ಮಂಡ್ಯ:ಕಾವೇರಿ ನದಿ ನೀರಿನ ವಿವಾದ ರಾಜ್ಯಾದ್ಯಂತ ಕಿಚ್ಚು ಹೊತ್ತಿಸಿದೆ. ತಮಿಳುನಾಡಿಗೆ ನೀರು ಹರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಆದರೆ ರಾಜ್ಯಸರ್ಕಾರ ಮಾತ್ರ ಹೋರಾಟದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಪರಿಣಾಮ ಕೆಆರ್‌ಎಸ್ ಡ್ಯಾಂನಿಂದ ನೀರು ಸರಾಗವಾಗಿ ಹರಿಯುತ್ತಿದ್ದರೂ ರಾಜ್ಯಸರ್ಕಾರ ಮಾತಿನಲ್ಲಿಯೇ ಕಾಲಕಳೆಯುತ್ತಿರುವುದು ಕಾವೇರಿ ಕಣಿವೆ ಜನರ ಕೆಂಗಣ್ಣಿಗೆ ಗುರಿಯಾಗಿದೆ.ಸಂಕಷ್ಟದ ಪರಿಸ್ಥಿತಿಯ ನಡುವೆಯೂ ಜೂನ್‌ನಿಂದ ಸೆಪ್ಟಂಬರ್ ಅಂತ್ಯದವರೆಗೆ ಕಾವೇರಿ ಕಣಿವೆ ಜಲಾಶಯಗಳಿಂದ ಸುಮಾರು 25 ಟಿಎಂಸಿ ನೀರು ತಮಿಳುನಾಡಿಗೆ ಹರಿದಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇಂತಹವುದರ ಮಧ್ಯೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಒಂದರ ಮೇಲೊಂದು ಆದೇಶದ ಮೂಲಕ ತ.ನಾಡಿಗೆ ನೀರು ಹರಿಸುವಂತೆ ಸೂಚನೆ ನೀಡುತ್ತಿದೆ. ಇದನ್ನು ಚಾಚೂ ತಪ್ಪದೇ ರಾಜ್ಯಸರ್ಕಾರ ಪಾಲಿಸುತ್ತಿದೆ.ಬೆಳೆಗೆ ಸಿಗುತ್ತಾ ನೀರು?: ಜಿಲ್ಲೆಯಲ್ಲಿ ಮಳೆಯ ಅಭಾವದ ನಡುವೆಯೂ ಸೆ.13ರವರೆಗೆ ಶೇ.61.7ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿತ್ತು. ಇದರ ಪ್ರಮಾಣ ಸೆಪ್ಟಂಬರ್ ಅಂತ್ಯಕ್ಕೆ ಹೆಚ್ಚಾಗಿದೆ. ಇನ್ನು ಜಿಲ್ಲೆಯ ಜನಪ್ರತಿನಿಧಿಗಳು ಬೆಳೆಗೆ ನೀರು ಕೊಡುತ್ತೇವೆನ್ನುವ ಭರವಸೆ ನೀಡಿದ್ದಾರೆ. ಆದರೆ ಸಧ್ಯದ ಪರಿಸ್ಥಿತಿಯನ್ನು ನೋಡಿದರೆ ಅದು ಸಾಧ್ಯವೇ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಜತೆಗೆ ಇದಕ್ಕೆ ಉತ್ತರವೂ ಸಿಗುವುದು ಕಷ್ಟ.‘ಕೈ’ಗೆ ಇರಿಸು ಮುರಿಸಾದ ಡಿಕೆಶಿ: ಇನ್ನು ಕಾವೇರಿ ವಿಚಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನೀಡುತ್ತಿರುವ ಹೇಳಿಕೆ ಕಾಂಗ್ರೆಸ್ ಪಾಳಯಕ್ಕೆ ಇಕ್ಕಟ್ಟು ತರುತ್ತಿದೆ. ಪರಿಣಾಮ ಡಿಕೆಶಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಕ್ಕೂ ಅಥವಾ ವಿರೋಧಿಸುವುದಕ್ಕೂ ಕಾಂಗ್ರೆಸ್ ಶಾಸಕರಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದು ಬಹಿರಂಗ ಸತ್ಯ.ವಿಧಾನಸಭಾ ಚುನಾವಣೆಗೂ ಮುನ್ನ ಜಿಲ್ಲೆಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಕಾಂಗ್ರೆಸ್ಸಿಗರು, ಜಿಲ್ಲೆಯ ಜನರ ಭಾವನಾತ್ಮಕವಾಗಿ ಮುಟ್ಟುವುದರ ಜತೆಗೆ ರೈತರ ವಿಚಾರದಲ್ಲಿ ತೋರಿದ ಪ್ರೀತಿ ಕಾವೇರಿ ನೀರಿನ ವಿಚಾರದಲ್ಲಿ ಕಂಡುಬರುತ್ತಿಲ್ಲ. ಅದರಲ್ಲಿಯೂ ಡಿಕೆಶಿ ವಿರುದ್ಧ ಕಾವೇರಿ ಕಣಿವೆಯ ಒಕ್ಕಲಿಗ ಸಮುದಾಯದಲ್ಲಿಯೇ ಅಸಮಾಧಾನ ತರುತ್ತಿದೆ. ಇದಕ್ಕೆ ಕಾರಣವೂ ಇದೆ. ಕಾವೇರಿ ನೀರಿನ ವಿಚಾರದಲ್ಲಿ ರೈತರು ಹಾಗೂ ಹೋರಾಟಗಾರರ ಆಗ್ರಹಕ್ಕೆ ವ್ಯತಿರಿಕ್ತ ಹೇಳಿಕೆ ನೀಡುತ್ತಿರುವುದು. ಪ್ರಮುಖವಾಗಿ ಮೇಕೆದಾಟು ಪಾದಯಾತ್ರೆ ವಿಚಾರದಲ್ಲಿ ಕೇಂದ್ರದತ್ತ ಬೊಟ್ಟು ಮಾಡುತ್ತಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಚುನಾವಣೆಗೆ ಮುನ್ನ ಸಮುದಾಯದ ಬೆಂಬಲ ಕೋರುವಾಗ ತೋರಿದ ಆಸಕ್ತಿ, ಕಾವೇರಿ ನೀರು ಹಾಗೂ ಮೇಕೆದಾಟು ವಿಚಾರದಲ್ಲಿ ತೋರುತ್ತಿಲ್ಲ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.ವಿಪಕ್ಷಕ್ಕೆ ಸಿಕ್ಕಿತು ಪ್ರಬಲ ಅಸ: ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಜೆಡಿಎಸ್ ಮತ್ತು ಬಿಜೆಪಿಗೆ ಪ್ರಬಲ ಅಸವಾಗಿದೆ. ಪ್ರಾಧಿಕಾರದ ಆದೇಶದ ವಿರುದ್ಧ ರಾಜ್ಯಸರ್ಕಾರ ಹೇಳಿಕೆ ಕೊಡುವುದನ್ನು ಬಿಟ್ಟರೆ ನೀರು ನಿಲ್ಲಿಸುವ ಧೈರ್ಯ ತೋರಿಲ್ಲ. ಮಾತ್ರವಲ್ಲದೆ ಸರಣಿ ಹೋರಾಟ ನಡೆಯುತ್ತಿದ್ದರೂ ಕ್ಯಾರೆ ಎನ್ನುತ್ತಿಲ್ಲ. ಸಮಸ್ಯೆಯ ಅರಿವಿದ್ದರೂ ಕಾಂಗ್ರೆಸ್ ಶಾಸಕರು ತಮ್ಮ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿಲ್ಲ. ಒಂದಿಬ್ಬರು ನೀರು ಬಿಡುತ್ತಿರುವ ಬಗ್ಗೆ ಆಕ್ಷೇಪ ಮಾಡಿದರಾದರೂ ಇತ್ತೀಚೆಗೆ ಸುಮ್ಮನಾಗಿದ್ದಾರೆ. ಇದು ವಿಪಕ್ಷಗಳಿಗೆ ಆಹಾರವಾಗಿದೆ.ಅದರಲ್ಲಿಯೂ ರಾಜ್ಯಸರ್ಕಾರದ ವಿರುದ್ಧ ಸಮರ ಸಾರಿರುವ ಬಿಜೆಪಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಟುಟೀಕೆ ನಡೆಸುತ್ತಿದೆ. ಪ್ರತಿಭಟನೆ ಜತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ವ್ಯಂಗ್ಯವಾಡಲಾಗುತ್ತಿದೆ. ರಾಜ್ಯಕ್ಕೆ ದ್ರೋಹ ಬಗೆದ ತಮಿಳುನಾಡು ನೀರುಗಂಟಿಗಳೆಂದು ಸಿಎಂ, ಡಿಸಿಎಂ ವಿರುದ್ಧ ಟೀಕಿಸಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 15 =
Remember me
