ಗದಗ:ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿಕೆ ನೀಡಿದ್ದು ಕಾಂಗ್ರೆಸ್​ ಪಕ್ಷವನ್ನು ಟೀಕಿಸಿದ್ದಾರೆ.
ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಸಿ‌. ಪಾಟೀಲ” ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಇದು ಮೊದಲೇನಲ್ಲ. ಈ‌ ಮೊದಲು ಕಾಂಗ್ರೆಸ್ ಸರ್ಕಾರ ಇದ್ದಾಗ ಈ ರೀತಿ ಘಟನೆಗಳು ಜರುಗಿವೆ.
ಇದನ್ನೂ ಓದಿ:ಜೈನಮುನಿ ಅವರ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಲು ಶಾಸಕ ಅಭಯ್ ಪಾಟೀಲ ಒತ್ತಾಯ
ಪ್ರವೀಣ ನೆಟ್ಟಾರು ಹತ್ಯೆ ಏನಾಯಿತು. ಕೇರಳದಿಂದ ನಾಲ್ಕೈದು ಸಾವಿರ‌ ಜನ ಹೇಗೆ ಬಂದ್ರು? ಮೂಕಪ್ರೇಕ್ಷಕರಾಗಿ ಪೊಲೀಸರು ಹೇಗೆ‌ ಸುಮ್ಮನಿದ್ದರು? ಈ ರೀತಿಯ‌ ಘಟನೆಗಳು ಮೊದಲೇನಲ್ಲ
ಈ‌ ಸರ್ಕಾರದ ಅವಧಿಯಲ್ಲಿ ಇನ್ನು ನಿರಂತರವಾಗಿ ಈ ರೀತಿ ಘಟನೆಗಳು ನಡೆಯುತ್ತವೆ. ಇಂತಹ ಘಟನೆಗಳಲ್ಲಿ ನಿಜವಾದ ಆರೋಪಿಗಳನ್ನು ಕಾಂಗ್ರೆಸ್ ಸರ್ಕಾರ ರಕ್ಷಣೆ ಮಾಡಿಯೇ ಮಾಡುತ್ತದೆ” ಎಂದಿದ್ದಾರೆ.
ಇದನ್ನೂ ಓದಿ:ಜೈನಮುನಿಗಳಿಗೆ ಸರ್ಕಾರ ರಕ್ಷಣೆ ನೀಡಲಿ, ಹಂತಕರಿಗೆ ತಕ್ಕ ಶಿಕ್ಷೆಯಾಗಲಿ: ಡಾ.ಡಿ.ವೀರೇಂದ್ರ ಹೆಗ್ಗಡೆ
ಈ ಸಂದರ್ಭ ಅಮರ್, ಅಕ್ಬರ್, ಅಂತೋನಿ‌ ಸಿನಿಮಾ ಉದಾಹರಣೆ ಕೊಟ್ಟ ಸಚಿವರು “ಅಮರ್ ಸಾಯುತ್ತಾನೆ…ಅಕ್ಬರ್, ಮತ್ತು ಅಂತೋನಿ ರಾಜ್ಯದಲ್ಲಿ ದರ್ಬಾರ್ ಶುರು‌ಮಾಡಿದ್ರು. ಅಮರ್ ಇದ್ದವರು ತಣ್ಣಗೆ ಮನೇಲಿ ಕೂರೋದು ಚಲೋ‌” ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + nineteen =
Remember me
