ಬೆಂಗಳೂರು:ಸ್ಯಾಂಡಲ್​ವುಡ್​ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಪೆಡ್ಲರ್​​ನನ್ನು ಇಂದು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಗಿಣಿ ಸಿಸಿಬಿ ಕಸ್ಟಡಿಯಲ್ಲಿ ಇದ್ದಾಗಲೇ ಇವನು ಆಕೆಯ ಫ್ಲ್ಯಾಟ್​​ಗೆ ಹೋಗಿದ್ದ ಎಂಬ ವಿಚಾರ ಬೆಳಕಿಗೆ ಬಂದಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಶ್ರೀನಿವಾಸ್​ ಸುಬ್ರಹ್ಮಣ್ಯನ್​ ಅಲಿಯಾಸ್​ ಶ್ರೀ (45) ಬಂಧಿತ. ನಟಿ ರಾಗಿಣಿಯವರ ಯಲಹಂಕದಲ್ಲಿರುವ ಫ್ಲ್ಯಾಟ್​​ಗೆ ಮೂರು ನಾಲ್ಕು ಬಾರಿ ಭೇಟಿ ಕೊಟ್ಟಿದ್ದ. ಈ ವಿಚಾರವನ್ನು ರಾಗಿಣಿ ಸಿಸಿಬಿ ಪೊಲೀಸರ ಎದುರು ಹೇಳಿದ್ದರು.ರಾಗಿಣಿ ಹೇಳಿಕೆ ಆಧರಿಸಿ ಇಂದು ಸಿಸಿಬಿ ಅಧಿಕಾರಿಗಳು ಶ್ರೀನಿವಾಸ್​​ನ ಫ್ಲ್ಯಾಟ್​ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿರುವ ಮಾದಕ ವಸ್ತುಗಳನ್ನೂ ಜಪ್ತಿ ಮಾಡಿದ್ದಾರೆ. ಆತನನ್ನು ಬಂಧಿಸಿ ಸಿಸಿಬಿ ಕಚೇರಿಗೆ ಕರೆತಂದಿದ್ದಾರೆ.
ಈ ಹಿಂದೆ ಬಂಧಿತ ರವಿಶಂಕರ್ ಮತ್ತು ರಾಗಿಣಿ ನಡುವಿನ ವಾಟ್ಸ್‌ಆ್ಯಪ್ ಚಾಟಿಂಗ್‌ನಲ್ಲಿ ಶ್ರೀ ಎಂದು ಉಲ್ಲೇಖಿಸಲಾಗಿತ್ತು. ರವಿಶಂಕರ್ ಮೊಬೈಲ್ ಪರಿಶೀಲನೆ ವೇಳೆ ಬೆಳಕಿಗೆ ಬಂದಿತ್ತು. ಶ್ರೀ ಎಂದರೆ ಯಾರೆಂದು ಸಿಸಿಬಿ ಪೊಲೀಸರು ಕಳೆದ 2 ವಾರಗಳಿಂದ ನಿಗಾ ವಹಿಸಿದ್ದರು. ಕೊನೆಗೂ ಶ್ರೀ ಎಂಬ ವ್ಯಕ್ತಿ ಪತ್ತೆಯಾಗಿದ್ದು, ಈತನ ವಿಚಾರಣೆ ವೇಳೆ ಮತ್ತಷ್ಟು ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಲಿಂಕ್ ಇರುವುದು ಬಹಿರಂಗವಾಗುವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊನೆಗೂ ಅಂಗೀಕೃತಗೊಂಡಿತು ಕೃಷಿ ಮಸೂದೆ: ರಾಷ್ಟ್ರಪತಿ ಅಂಕಿತವೊಂದೇ ಬಾಕಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + 2 =
Remember me
