ಬೆಂಗಳೂರು:ನಗರದ ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್ ಫಾರ್ಮ್ಸ್ ಹೌಸ್‌ನಲ್ಲಿ ಬರ್ತ್‌ಡೇ ಹೆಸರಿನಲ್ಲಿ ಪಾರ್ಟಿ ನಡೆಯುತ್ತಿತ್ತು. ಈ ಕುರಿತಾಗಿ ಮಾಹಿತಿ ಪಡೆದ ಅಧಿಕಾರಿಗಳು ರೇವ್​ಪಾರ್ಟಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಭಾರಿ ಪ್ರಮಾಣದ ಡ್ರಗ್ಸ್​​, ಕೊಕೇನ್​​ ಪತ್ತೆಯಾಗಿದೆ.
ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್ ಫಾರ್ಮ್ಸ್ ಹೌಸ್‌ನಲ್ಲಿ ಬರ್ತ್‌ಡೇ ಹೆಸರಿನಲ್ಲಿ ಪಾರ್ಟಿ ನಡೆಯುತ್ತಿತ್ತು. ತಡರಾತ್ರಿ ಎರಡು ಗಂಟೆ ದಾಟಿದರೂ ಪಾರ್ಟಿ ನಡೆಯುತ್ತಿತ್ತು. ತಡರಾತ್ರಿ ಎರಡು ಗಂಟೆ ದಾಟಿದರೂ ಪಾರ್ಟಿ ನಡೆಯುತ್ತಿತ್ತು. ಸಿಸಿಬಿಯ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳಿಗೆ ಇದರ ಮಾಹಿತಿ ತಿಳಿದು ದಾಳಿ ಮಾಡಿದ್ದಾರೆ. ಅವಧಿ ಮೀರಿ ಪಾರ್ಟಿ ಮಾಡಲಾಗಿದ್ದು, ಪಾರ್ಟಿಯಲ್ಲಿ ಸಾಕಷ್ಟು ಡ್ರಗ್ಸ್ ಪತ್ತೆಯಾಗಿವೆ.
ಪಾರ್ಟಿಯಲ್ಲಿ ಡ್ರಗ್ಸ್, ಎಂಡಿಎಂಎ ಮಾತ್ರೆಗಳು ಮತ್ತು ಕೊಕೇನ್ ಪತ್ತೆಯಾಗಿವೆ. ಜತೆಗೆ ಪಾರ್ಟಿಯಲ್ಲಿ ಆಂಧ್ರ ಮತ್ತು ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದುದು ತಿಳಿದುಬಂದಿದೆ. ಪಾರ್ಟಿಯಲ್ಲಿ 25ಕ್ಕೂ ಹೆಚ್ಚು ಯುವತಿಯರು ಕಂಡುಬಂದರು. ತೆಲುಗು ನಟಿ (Telugu Actress) ಹೇಮಾ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದುದು ಕಂಡುಬಂದಿದೆ. ಹೇಮಾ ರೇವ್ ಪವರ್​​ ಸಿನಿಮಾದಲ್ಲಿ ನಟಿ ತ್ರಿಶಾ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಕೆ ಈ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕಾನ್‌ಕಾರ್ಡ್ ಮಾಲೀಕ ಗೋಪಾಲ ರೆಡ್ಡಿ ಎಂಬವರ ಮಾಲಿಕತ್ವದ ಫಾರ್ಮ್ ಹೌಸ್‌ನಲ್ಲಿ ಇದು ನಡೆದಿದ್ದು, ಹೈದರಾಬಾದ್ ಮೂಲದ ವಾಸು ಎಂಬಾತ ಪಾರ್ಟಿ ಆಯೋಜನೆ ಮಾಡಿದ್ದ. ಪಾರ್ಟಿಗೆ ಆಂಧ್ರಪ್ರದೇಶದಿಂದ ಫ್ಲೈಟ್‌ನಲ್ಲಿ ಹಲವರನ್ನು ಕರೆಸಿಕೊಂಡಿದ್ದ. ಒಂದು ಬೆಂಜ್ ಕಾರಿನಲ್ಲಿ ಆಂಧ್ರಪ್ರದೇಶದ ಎಂಎಲ್ಎ ಒಬ್ಬರ ಪಾಸ್ ಪತ್ತೆಯಾಗಿದೆ. ಎಂಎಲ್ಎ ಕಾಕನಿ ಗೋವರ್ಧನ ರೆಡ್ಡಿ ಎಂಬವರ ಹೆಸರಿನ ಪಾಸ್ ಕಂಡುಬಂದಿದೆ.
ಪಾರ್ಟಿ ಸ್ಥಳದಲ್ಲಿ ಹದಿನೈದಕ್ಕೂ ಹೆಚ್ಚು ವಿಲಾಸಿ ಕಾರುಗಳು ಪತ್ತೆಯಾಗಿವೆ. ದುಬಾರಿ ಮರ್ಸಿಡಿಸ್‌ ಬೆಂಜ್, ಜಾಗ್ವಾರ್, ಆಡಿ ಕಾರುಗಳಲ್ಲಿ ಕುಬೇರರು ಬಂದಿದ್ದುದು ಗೊತ್ತಾಗಿದೆ. ಸನ್ ಸೆಟ್ ಟು ಸನ್ ರೈಸ್ ಪಾರ್ಟಿ ಎಂದು ಆಯೋಜಿಸಲಾಗಿತ್ತು. ಭಾನುವಾರ ಸಂಜೆ ಐದು ಗಂಟೆಯಿಂದ ಬೆಳಗ್ಗೆ ಆರು ಗಂಟೆ ತನಕ ಪಾರ್ಟಿ ನಡೆಸಲು ಉದ್ದೇಶಿಸಲಾಗಿತ್ತು.
ಒಂದು ದಿನದ ಪಾರ್ಟಿಗೆ ಮೂವತ್ತರಿಂದ ಐವತ್ತು ಲಕ್ಷ ಖರ್ಚು ಮಾಡಲಾಗುತ್ತದೆ. ಪಾರ್ಟಿಯಲ್ಲಿ ಡಿಜೆಗಳು, ಮಾಡೆಲ್‌ಗಳು ಹಾಗು ಟೆಕ್ಕಿಗಳು ಪತ್ತೆಯಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿ ಪೊಲೀಸರು ಎಲ್ಲರನ್ನು ಪ್ರಶ್ನಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ರಸ್ತೆಯಲ್ಲಿ ರೋಮ್ಯಾನ್ಸ್; ಹುಡುಗಿಯನ್ನು ಮಡಿಲಲ್ಲಿ ಕೂರಿಸಿಕೊಂಡು ಬೈಕ್ ಓಡಿಸಿದ ರೋಡ್ ರೋಮಿಯೋ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − twelve =
Remember me
