ಬೆಂಗಳೂರು:ಸ್ಯಾಂಡಲ್​ವುಡ್​ನ ಮಾದಕ ನಟಿ ರಾಗಿಣಿ ದ್ವಿವೇದಿಯ ಗೆಳೆಯ ರವಿಶಂಕರ್​ನ ಮಾಜಿ ಪತ್ನಿಗೂ ಸಿಸಿಬಿ ನೋಟಿಸ್​ ನೀಡಿದೆ.
ರವಿಶಂಕರ್ ಮಾಜಿ‌ ಪತ್ನಿ ಅರ್ಚನಾ ನಾಯ್ಕ್​ಗೆ ವಾಟ್ಸ್​ಆ್ಯಪ್ ಮೂಲಕ ನೋಟಿಸ್ ಕಳುಹಿಸಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇಡೀ ಡ್ರಗ್ಸ್ ಪ್ರಕರಣ ಹೊರಗೆ ಬರೋಕೆ ಪ್ರಮುಖ ಕಾರಣ ಈ ರವಿಶಂಕರ್. ಈತ ಬಾಯ್ಬಿಟ್ಟ ಮಾಹಿತಿ ಆಧರಿಸಿ ಕಾಟನ್​ಪೇಟೆಯಲ್ಲಿ ಕೇಸ್ ದಾಖಲಾಗಿದೆ. ನಟಿಯರಾದ ರಾಗಿಣಿ, ಸಂಜನಾ ಅಲಿಯಾಸ್​ ಮಹಿರಾ, ಸಂಜನಾ ಆಪ್ತ ರಾಹುಲ್, ಶಿವಪ್ರಕಾಶ್ ಸೇರಿ 16 ಮಂದಿ ವಿರುದ್ಧ ಕೇಸ್ ದಾಖಲಾಗಿದೆ.ಇದನ್ನೂ ಓದಿರಿಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…
ಡ್ರಗ್ಸ್​ ಕೇಸ್​ನ ಆರೋಪಿ ರವಿಶಂಕರ್ 2010ರಲ್ಲಿ ಅರ್ಚನಾ ನಾಯ್ಕ್ ಜೊತೆ ಮದ್ವೆಯಾಗಿದ್ದ. ಇವರಿಗೆ 8 ವರ್ಷದ ಮಗು ಕೂಡ ಇದೆ. ರಾಗಿಣಿ ಜತೆ ಆಪ್ತನಾದ ಬಳಿಕ ರವಿಶಂಕರ್​ನ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿದೆ. 2018ರ ನವೆಂಬರ್​ನಲ್ಲಿ ರವಿಶಂಕರ್​ ಮತ್ತು ಅರ್ಚನಾ ನಾಯ್ಕ್​ ದಾಂಪತ್ಯ ಜೀವನದಿಂದ ವಿಚ್ಛೇದನ ಪಡೆದಿದ್ದು, ಪತ್ಯೇಕವಾಗಿ ವಾಸವಾಗಿದ್ದಾರೆ. ಡ್ರಗ್ಸ್​ ಕೇಸ್​ನಲ್ಲಿ ಸದ್ಯ ರವಿಶಂಕರ್​ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.
ಬಾಣಸವಾಡಿಯಲ್ಲಿ 2018ರಲ್ಲಿ ಕೊಕೇನ್‌ ಮಾರಾಟದ ಆರೋಪದಡಿ ಪ್ರತೀಕ್ ಶೆಟ್ಟಿಯನ್ನು ಬಂಧಿಸಲಾಗಿತ್ತು. ಈ‌ ವೇಳೆಯೂ ಪ್ರತೀಕ್ ಶೆಟ್ಟಿ, ರವಿಶಂಕರ್ ಹೆಸರು ಬಾಯಿಬಿಟ್ಟಿದ್ದ. ಬಾಣಸವಾಡಿ ಕೇಸ್ ಆದಾಗ ಅರ್ಚನಾ ನಾಯ್ಕ್ ರವಿಶಂಕರ್​ನ ಜೊತೆಯಲ್ಲಿಯೇ ಇದ್ದರು. ಬಹುಶಃ ಆ ಕೇಸ್ ಸಂಬಂಧ ಹಾಗೂ ರವಿಶಂಕರ್ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಅರ್ಚನಾಗೆ ನೋಟಿಸ್​ ನೀಡಲಾಗಿದೆ ಎಂದು ತಿಳಿದು ಬಂದಿದೆ.
‘ರಾಗಿಣಿಗೆ ನಾನೇ ಡ್ರಗ್ಸ್​ ಕೊಡುತ್ತಿದ್ದೆ… ಡ್ರಗ್ಸ್​ ಅಡಗಿಸಿಟ್ಟಿರುವ ಜಾಗವನ್ನೂ ತೋರಿಸುವೆ’

‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

ಡ್ರಗ್ಸ್​ ಕೇಸ್​; ಸಿಸಿಬಿ ವಿಚಾರಣೆಗೆ ಬಂದ ದಿಗಂತ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 15 =
Remember me
