ಬೆಂಗಳೂರು:ರಾಜ್ಯದಲ್ಲಿ ಡ್ರಗ್ಸ್​ ಮಾಫಿಯಾ ಭಾರೀ ಸದ್ದು ಮಾಡುತ್ತಿದೆ. ಸಿನಿಮಾ ನಟ-ನಟಿಯರು ಮಾತ್ರವಲ್ಲ ರಾಜಕಾರಣಿಗಳ ಕೊರಳಿಗೆ ಡ್ರಗ್ಸ್​ ಉರುಳು ಸುತ್ತಿಕೊಳ್ಳುತ್ತಿದೆ.
ಕಾಟನ್​ಪೇಟೆ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ಸ್​ ಕೇಸ್​ ಸಂಬಂಧ ಇಷ್ಟು ದಿನ ನಟ-ನಟಿಯರ ವಿಚಾರಣೆ ನಡೆಸುತ್ತಿದ್ದ ಸಿಸಿಬಿ ಪೊಲೀಸರು ಇದೀಗ ಕಾಂಗ್ರೆಸ್​ನ ಮಾಜಿ ಶಾಸಕ ಆರ್​.ವಿ.ದೇವರಾಜ್​ ಪುತ್ರ ಆರ್​.ವಿ.ಯುವರಾಜ್​ಗೆ ನೋಟಿಸ್​ ಕೊಟ್ಟಿದ್ದಾರೆ. ಈ ಯುವರಾಜ್​ ಸುಧಾಮನಗರ ವಾರ್ಡ್​ನ ಕಾರ್ಪೋರೇಟರ್​. ಅಷ್ಟೇ ಅಲ್ಲ ಬಿಜೆಪಿ ಸಂಸದ ಪಿ.ಸಿ.ಮೋಹನ್​ರ ಭಾವಿ ಅಳಿಯ!
ಇದನ್ನೂ ಓದಿರಿನನಗೆ ಮದುವೆ ಆಗಿಲ್ಲ ಎಂದ ಬೆನ್ನಲ್ಲೇ ನಟಿ ಸಂಜನಾರ ‘ಗಂಡ-ಹೆಂಡ್ತಿ’ ರಹಸ್ಯ ಬಯಲು?!
ಡ್ರಗ್ಸ್ ದಂಧೆಯಲ್ಲಿ ಯುವರಾಜ್​ ಹೆಸರು ಕೇಳಿಬಂದಿದ್ದು, ಪಕ್ಷಕ್ಕೆ ಡ್ಯಾಮೇಜ್ ಆಗುವ ಭೀತಿ ಕೆಪಿಸಿಸಿಗೆ ಎದುರಾಗಿದೆ. ಇನ್ನು ಯುವರಾಜ್​ ಜತೆ ಪಿ.ಸಿ. ಮೋಹನ್​ರ ಮಗಳ ಮದುವೆ ಲಾಕ್​ಡೌನ್​ ಸಮಯದಲ್ಲೇ ನಿಶ್ಚಯವಾಗಿತ್ತು. ಇದೀಗ ಎರಡೂ ಕುಟುಂಬದಲ್ಲೂ ಆತಂಕ ಮೂಡಿದೆ.
ಯುವರಾಜ್​ ಜತೆಗೆ ಖ್ಯಾತ ನಿರೂಪಕ ಅಕುಲ್ ಬಾಲಾಜಿ ಮತ್ತು ನಟ ಸಂತೋಷ್​ ಕುಮಾರ್​ ಅವರಿಗೂ ಸಿಸಿಬಿ ನೋಟಿಸ್​ ನೀಡಿದ್ದು, ಈ ಮೂವರೂ ಶನಿವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗಬೇಕಿದೆ.
ಈ ಬಗ್ಗೆ ಮಧ್ಯಾಹ್ನ 2.30ರ ಸುಮಾರಿಗೆ ‘ದಿಗ್ವಿಜಯ ನ್ಯೂಸ್’​ ಜತೆ ಮಾತನಾಡಿದ ಯುವರಾಜ್​, ‘ನನಗೆ ಯಾವುದೇ ನೋಟಿಸ್​ ಬಂದಿಲ್ಲ. ನೋಟಿಸ್​ ಬಂದ ನಂತರ ಪ್ರತಿಕ್ರಿಯೆ ಕೊಡ್ತೀನಿ’ ಎಂದರು. ಆದರೆ, ಹೈದ್ರಾಬಾದ್​ನಲ್ಲಿದ್ದ ಅಕುಲ್​ಗೆ ವಾಟ್ಸ್​ಆ್ಯಪ್​ ಮೂಲಕ ಸಿಸಿಬಿ ನೋಟಿಸ್​ ತಲುಪಿದ್ದು, ಅವರು ವಿಚಾರಣೆಗೆ ಖಂಡಿತ ಬರುವೆ ಎಂದರು.
ಡ್ರಗ್ಸ್ ಕೇಸ್​ನಲ್ಲಿ ಸಿಕ್ಕಿಬಿದ್ದ ನಟಿ ಜತೆ ಲೈಂಗಿಕ ಸಂಭಾಷಣೆ! ಖಾಸಗಿ ವಿಡಿಯೋ ವೈರಲ್

‘ರಾಗಿಣಿಗೆ ನಾನೇ ಡ್ರಗ್ಸ್​ ಕೊಡುತ್ತಿದ್ದೆ… ಡ್ರಗ್ಸ್​ ಅಡಗಿಸಿಟ್ಟಿರುವ ಜಾಗವನ್ನೂ ತೋರಿಸುವೆ’

ಡ್ರಗ್ಸ್ ಮಾಫಿಯಾ ಕಾರಣಕ್ಕೆ ಬೆಂಗಳೂರು ಕಾಂಗ್ರೆಸ್ ನಾಯಕರಿಗೆ ಶುರುವಾಗಿದೆ ಟೆನ್ಷನ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 7 =
Remember me
