ಬೆಂಗಳೂರು :ದೇಶದ ಶ್ರೀಮಂತ ಕುಟುಂಬದ ಕುಡಿ ಮತ್ತು ಬಾಲಿವುಡ್ ನಟ ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕ ಆಳ್ವಗೂ ಡ್ರಗ್ಸ್ ಸಂಕಷ್ಟ ಎದುರಾಗಿದೆ. ಸಹೋದರ ಆದಿತ್ಯ ಆಳ್ವ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಆರೋಪಕ್ಕೂ ಪ್ರಿಯಾಂಕ ಆಳ್ವ ಗುರಿಯಾಗಿದ್ದಾರೆ.
ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಲಿಂಕ್ ಪ್ರಕರಣ ಸಂಬಂಧ ಗುರುವಾರ ಬೆಳಗ್ಗೆ ಮುಂಬೈನ ಜುಹು ಪ್ರದೇಶದಲ್ಲಿ ಇರುವ ವಿವೇಕ್ ಒಬೆರಾಯ್ ಮನೆ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಈ ವೇಳೆ ವಿವೇಕ್ ದಂಪತಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿ ತನಿಖೆಗೆ ಅಸಹಕಾರ ತೋರಿದ್ದರು. ಕೊನೆಗೆ ಸರ್ಚ್ ವಾರಂಟ್ ತೋರಿಸಿ ಎಚ್ಚರಿಕೆ ಕೊಟ್ಟಾಗ ಪರಿಶೀಲನೆಗೆ ಸಹಕರಿಸಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ:ನಟಿ ಪ್ರಿಯಾಂಕಾ ಚೋಪ್ರಾರ ‘ಫೇವರಿಟ್​ ಕೋ-ವರ್ಕರ್​’ ಯಾರು ಗೊತ್ತಾ?
ಆನಂತರ ಪೊಲೀಸರು ಚಾಮರಾಜಪೇಟೆ ಸಿಸಿಬಿ ಕಚೇರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಲು ಮುಂದಾಗಿದ್ದರು. ನೋಟಿಸ್ ಪ್ರತಿಯನ್ನು ಸ್ವೀಕರಿಸಲು ಪ್ರಿಯಾಂಕ ಆಳ್ವ ನಿರಾಕರಿದ್ದರು. ಈ ಕುರಿತು ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಪೊಲೀಸರು, ಸುಪ್ರಿಂಕೋರ್ಟ್ ಆದೇಶದಂತೆ ಪ್ರಿಯಾಂಕ ಆಳ್ವ ವಾಟ್ಸ್‌ಆ್ಯಪ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ಶುಕ್ರವಾರ ಮಧ್ಯಾಹ್ನ 12 ಗಂಟೆ ಒಳಗಾಗಿ ತನಿಖಾಧಿಕಾರಿಗಳ ಮುಂದೆ ಹಾಜರಾಬೇಕು.ಇಲ್ಲವಾದರೆ, ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ಸಹ ನೀಡಿದ್ದಾರೆ.
ಮುಂಬೈಯಿಂದ ಬರಲು ಸಾಧ್ಯವಾಗುವುದಿಲ್ಲ. ಸಮಯ ಬೇಕೆಂದು ಕೇಳಿದ್ದಾರೆ. ಸಮಯ ನೀಡಲು ನಿರಾಕರಿಸಿರುವ ಪೊಲೀಸರು, ಕಡ್ಡಾಯವಾಗಿ ಬರಬೇಕೆಂದು ಸೂಚನೆ ನೀಡಿದ್ದಾರೆ.ಇದನ್ನೂ ಓದಿ:ಶಿರಾ ಬಿಜೆಪಿ ಅಭ್ಯರ್ಥಿ ರಾಜೇಶ್​ ಗೌಡ 15 ಕೋಟಿ ಒಡೆಯ; ಪತ್ನಿ ಬಳಿ ಎಷ್ಟಿದೆ ಗೊತ್ತಾ ಆಸ್ತಿ?
ಇದೀಗ ಪ್ರಿಯಾಂಕ ಆಳ್ವ, ಚಾಮರಾಜಪೇಟೆ ಸಿಸಿಬಿ ಕಚೇರಿಗೆ ಬರಬೇಕಾಗಿದೆ. ಇಲ್ಲವಾದರೆ, 2ನೇ ನೋಟಿಸ್ ಜಾರಿ ಮಾಡಲಿದ್ದಾರೆ. ಜತೆಗೆ ತನಿಖೆಗೆ ಸಹಕಾರ ನೀಡಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದು ಶಿಸ್ತು ಕ್ರಮಕ್ಕೂ ಸಿಸಿಬಿ ಪೊಲೀಸರು ಮುಂದಾಗುವ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ.
ವಿವೇಕ್ ಒಬೆರಾಯ್‌ಗೆ ಸಿಸಿಬಿ ಶಾಕ್, ಬಾಮೈದ ಆದಿತ್ಯ ಆಳ್ವ ತಪ್ಪಿಸಿಕೊಳ್ಳಲು ಸಾಥ್

ದಯವಿಟ್ಟು ಸಹಕರಿಸಿ.. ಯಾವ ವೈದ್ಯರಿಗೂ ಕರೊನಾ ಚಿಕಿತ್ಸೆ ತಿಳಿದಿಲ್ಲ, ಲಸಿಕೆ-ಔಷಧ ಸಿಕ್ಕಿಲ್ಲ; ಸಿಎಂ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − six =
Remember me
