ಬೆಂಗಳೂರು:ಮಾದಕ ವಸ್ತು ಮಾರಟ ಮಾಡುವವರ ವಿರುದ್ಧ ಸಿಸಿಬಿ ಪೊಲೀಸರ ದಾಳಿ ಮುಂದುವರಿದಿದೆ. ಇದೀಗ ಪೊಲೀಸರು ಓರ್ವ ವಿದೇಶಿ ಪ್ರಜೆ ಸೇರಿ, ನಾಲ್ವರು ಮಹಿಳಾ ಡ್ರಗ್ ಪೆಡ್ಲರ್​ಗಳನ್ನು ಬಂಧಿಸಿದ್ದಾರೆ.
ಆಂಧ್ರದ ಸಿಂತಪಲ್ಲಿ ಅರಣ್ಯ ಪ್ರದೇಶದಿಂದ ರೈಲಿನ ಮೂಲಕ ಬೆಂಗಳೂರಿಗೆ ಡ್ರಗ್​ ಸಾಗಾಟ ಮಾಡಲಾಗುತ್ತಿತ್ತು. ನಾಲ್ವರು ಮಹಿಳೆಯರು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಬೆಂಗಳೂರಿನಲ್ಲಿರುವ ಡ್ರಗ್ ಪೆಡ್ಲರ್​​ಗಳಿಗೆ ಸಪ್ಲೈ ಮಾಡುತ್ತಿದ್ದರು.
ಈ ಹಿಂದೆ ವಿವೇಕ ನಗರ ಠಾಣೆಯಲ್ಲಿ ಓರ್ವ ಡಿಜೆ ಬಂಧನವಾಗಿತ್ತು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆಂಧ್ರದಿಂದ ಮಹಿಳೆಯರ ಮೂಲಕ ಬೆಂಗಳೂರಿಗೆ ಡ್ರಗ್ಸ್ ರವಾನೆಯಾಗುತ್ತಿರುವ ಮಾಹಿತಿ ಲಭಿಸಿದೆ. ಈ ಮಾಹಿತಿಯನ್ನು ಬೆನ್ನತ್ತಿದ ಸಿಸಿಬಿ ಪೊಲೀಸರಿಗೆ 7 ಕೋಟಿ 80 ಲಕ್ಷ ಬೆಲೆ ಬಾಳುವ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿದೆ.
ಮಹಿಳೆಯರು ಬೆಂಗಳೂರು, ಚೆನ್ನೈ, ಹೈದರಾಬಾದ್. ಕೊಚ್ಚಿನ್​ನಲ್ಲಿರುವ ಪೆಡ್ಲರ್​ಗಳಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದರು. ಇವರೆಲ್ಲರೂ ಮಹಿಳೆಯರು ಆಗಿದ್ದರಿಂದ ಇದುವರೆಗೆ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಡ್ರಗ್ ಸಪ್ಲೈ ಮಾಡುತ್ತಿದ್ದರು. ಇವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 8 ಕೆ.ಜಿ ಆಶಿಷ್ ಆಯಿಲ್, 10 ಕೆ.ಜಿ ಗಾಂಜಾ, 1 ಕೆ.ಜಿ MDMA ಕ್ರಿಸ್ಟಲ್ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
