ಬೆಂಗಳೂರು:ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕಾಟನ್ ಪೇಟೆಯ ಲಾಡ್ಜ್​​​​ ಮೇಲೆ ಸಿಸಿಬಿ ರೇಡ್​​ ನಡೆದಿದೆ. ಈ ಹಿಂದೆ ಕೂಡ ದುರ್ಗಾ ಪ್ಯಾಲೆಸ್​​​ ಲಾಡ್ಜ್​​​ ಮೇಲೆ ಸಿಸಿಬಿ ರೇಡ್​ ನಡೆದಿತ್ತು. ಆಗೆಲ್ಲಾ ಪೊಲೀಸರು ಬರಿಗೈಲಿ ವಾಪಸ್ಸಾಗಿದ್ದರು. ಇದಕ್ಕೆ ಕಾರಣ… ಈ ಸೀಕ್ರೆಟ್​​ ರೂಂ..!
ಸಿಸಿಬಿ ಪೊಲೀಸರು ದಾಳಿ ಮಾಡುತ್ತಾರೆ ಎಂಬ ವಾಸನೆ ಬಡಿದಾಕ್ಷಣ ದಂಧೆಕೋರರು ಹುಡುಗಿಯರನ್ನು ಈ ಸೀಕ್ರೆಟ್​​​ ರೂಂ ಒಳಗೆ ಕಳಿಸಿಬಿಡುತ್ತಿದ್ದರು. ರೂಮಿನಲ್ಲಿ ಯಾರೂ ಇಲ್ಲ ಎಂದು ಪೊಲೀಸರು ವಾಪಸ್​​ ಹೋದ ಮೇಲೆ, ಮತ್ತೆ ದಂಧೆ ಮುಂದುವರೆಸುತ್ತಿದ್ದರು.
ಆದರೆ ಈ ಬಾರಿ ದಂಧೆಕೋರರ ಅದೃಷ್ಟ ನೆಟ್ಟಗೆ ಇರಲಿಲ್ಲ. ಹಾಗಾಗಿ ಬಯಲಾಗಿಬಿಟ್ಟಿತು ಸೀಕ್ರೆಟ್​ ರೂಂ ರಹಸ್ಯ. ಹುಡುಗಿಯರನ್ನು ಸೀಕ್ರೆಟ್ ರೂಮಿನಲ್ಲಿಟ್ಟಿದ್ದ ಆರೋಪಿಗಳನ್ನೂ ಬಂಧಿಸಲಾಗಿದೆ. ಉಸಿರಾಡೋದಕ್ಕೂ ಸಾಧ್ಯವಾಗದ ರೂಮ್‌ನಲ್ಲಿ ಹುಡುಗಿಯರನ್ನು ಕೂಡಿಹಾಕುತ್ತಿದ್ದ ವಿಷಯವೂ ಬಯಲಾಗಿದೆ. 6 ಆರೋಪಿಗಳನ್ನು ಬಂಧಿಸಿ, 7 ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ. ಸಿಸಿಬಿ ತನಿಖೆ ಮುಂದುವರೆದಿದೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:five × three =
Remember me
