ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್ ಕೇಸ್ ಸಂಬಂಧ ಸಿಸಿಬಿ ಪೊಲೀಸರು ಮನೆಗೆ ಎಂಟ್ರಿ ಆಗ್ತಿದ್ದ ಹಾಗೆ ರಾಗಿಣಿ, “ನೀವೇನಕ್ಕೆ ಬರೋದಕ್ಕೆ ಹೋದ್ರಿ, ನಾನೇ ಸೋಮವಾರ ಬರ್ತಿದ್ನಲ್ಲ” ಎಂದು ರಾಗ ಎಳೆದ್ರು.. ಸಿಸಿಬಿ ಇನ್​ಸ್ಪೆಕ್ಟರ್ ಸರ್ಚ್​ ವಾರೆಂಟ್ ತೋರಿಸ್ತಿದ್ದ ಹಾಗೆ ಸುಮ್ನಾದ ರಾಗಿಣಿ, ಅವರನ್ನು ಒಳಬಿಟ್ಟರು.
ಸಿಸಿಬಿ ಪೊಲೀಸರು ಮನೆಯ ಅಂಗುಲ ಅಂಗುಲವನ್ನು ಪರಿಶೀಲಿಸಲು ತೊಡಗುತ್ತಿದ್ದಂತೆ, ರಾಗಿಣಿ ಬಾಗಿಲಿನಿಂದ ತಲೆ ಹೊರ ಹಾಕಿ ಮಾಧ್ಯಮದವರತ್ತ ಕೈ ಬೀಸಿ ವಿಶ್ ಮಾಡಿದ್ರು. ಇದರ ಬೆನ್ನಿಗೆ ರಾಗಿಣಿ ಅವರಿಂದ ಮೊಬೈಲ್, ಲ್ಯಾಪ್​ಟಾಪ್​ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡರು.
ಇದನ್ನೂ ಓದಿ:30-35 ಸಾವಿರ ರೂ. ಸಂಬಳ, ರಾಗಿಣಿಗಾಗಿ ಖರ್ಚು ಮಾಡ್ತಿದ್ದು 1 ಲಕ್ಷ: ಸಿಸಿಬಿ ಮುಂದೆ ರವಿಶಂಕರ್​ ಹೇಳಿದ್ದೇನು?
ಶೋಧಕಾರ್ಯ ಮುಂದುವರಿದಿದ್ದು, ರಾಗಿಣಿ ಅವರನ್ನು ವಿಚಾರಣೆಗೋಸ್ಕರ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ಹೇಳಿವೆ. (ದಿಗ್ವಿಜಯ ನ್ಯೂಸ್)

‘ಮಾದಕ’ ನಟಿಗೆ ಶುಕ್ರವಾರ ಬೆಳಗ್ಗೆಯೇ ಶಾಕ್​ !

Sign in to your account
Please enter an answer in digits:4 × three =
Remember me
