ಬೆಂಗಳೂರು:ಅವಧಿ ಮೀರಿದ ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಹೋಲ್‌ಸೇಲ್ ಅಂಗಡಿ ಮತ್ತು ಗೋದಾಮುಗಳ ಮೇಲೆ ಸಿಸಿಬಿ ಅಧಿಕಾರಿಗಳು ಮತ್ತು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಪ್ರತಿಷ್ಠಿತ ಕಂಪನಿಗಳ ಹೆಸರಿನ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಲಬಂದ ಲೇನ್, ಎ.ಎಸ್.ಚಾರ್ ಸ್ಟ್ರೀಟ್ ಕ್ರಾಸ್‌ನಲ್ಲಿರುವ ಅರಿಹಂತ್ ಟ್ರೇಡಿಂಗ್ ಕಂಪನಿ ಎಂಬ ಗೊಡೋನ್‌ನಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಲಭಿಸಿದೆ.
ಕಾರ್ಯಪ್ರವೃತ್ತರಾದ ಸಿಸಿಬಿ ಅಧಿಕಾರಿಗಳು, ಆಹಾರ ಸುರಕ್ಷತಾ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಚಂದ್ರಪ್ರಕಾಶ್ ಅವರ ಹೆಸರಿನಲ್ಲಿರುವ ಅರಿಹಂತ್ ಟ್ರೇಡಿಂಗ್ ಕಂಪನಿಯ ಗೊಡೋನ್ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾಗ, ಅವಧಿ ಮೀರಿದ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿ ಸಾರ್ವಜನಿಕರಿಗೆ ಮಾರಾಟಕ್ಕೆ ಮುಂದಾಗಿರುವುದು ಕಂಡುಬಂದಿದೆ.
ಅವಧಿ ಮೀರಿದ ಆಹಾರ ಪದಾರ್ಥಗಳ ಅಕ್ರಮ ಸಂಗ್ರಹಣೆಯ ಕುರಿತು ಹೋಲ್‌ಸೇಲ್ ಅಂಗಡಿಯ ಮಾಲೀಕರನ್ನು ಅಧಿಕಾರಿಗಳು ಪ್ರಶ್ನಿಸಿದಾಗ ಈ ಆಹಾರ ಪದಾರ್ಥಗಳನ್ನು ಪಿ.ವಿ.ಆರ್ ರಸ್ತೆ, ರಾಣಾಸಿಂಗ್ ಪೇಟೆಯ ಗೊಡೋನ್‌ನಿಂದ ತಂದಿರುವುದಾಗಿ ತಿಳಿಸಿದ್ದಾರೆ. ಈತನ ಮಾಹಿತಿ ಮೇರೆಗೆ ಸಿಸಿಬಿ ಮತ್ತು ಆಹಾರ ಸಂರಕ್ಷಣಾ ಅಧಿಕಾರಿಗಳು ಆ ಗೊಡೋನ್‌ಗೆ ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿದ್ದು, ಅಲ್ಲಿ ಪ್ರತಿಷ್ಠಿತ ಕಂಪನಿಗಳ ಅವಧಿ ಮೀರಿದ ಬಿಸ್ಕೆಟ್ ಮತ್ತು ಚಾಕೋಲೇಟ್‌ಗಳು, ಅಡಿಗೆ ಎಣ್ಣೆ, ಹಾಲಿನ ಪೌಡರ್ ಸೇರಿ ಅವಧಿ ಮೀರಿದ ಇತರೆ ಆಹಾರ ಪದಾರ್ಥಗಳು ಕಂಡುಬಂದಿವೆ.
ಅವಧಿ ಮೀರಿದ ಆಹಾರ ಪದಾರ್ಥಗಳ ಅಕ್ರಮ ದಾಸ್ತಾನು ಮತ್ತು ಮಾರಾಟದ ಕುರಿತು ಆಹಾರ ಸುರಕ್ಷತಾ ಅಧಿಕಾರಿಗಳು ಅಂಗಡಿ ಮತು ್ತ ಗೊಡೋನ್‌ನ ಮಾಲೀಕರುಗಳಿಗೆ ಆಹಾರ ಸುರಕ್ಷತಾ ಕಾಯ್ದೆ ಅಡಿಯಲ್ಲಿ ನೋಟೀಸ್ ನೀಡಿ ಕ್ರಮಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ:ಪಾರ್ಕಿಂಗ್​ ಸಿಬ್ಬಂದಿಯಂತೆ ಪೋಸ್​ ನೀಡಿ ಐಷಾರಾಮಿ ಕಾರುಗಳನ್ನು ಕದ್ದ ಖದೀಮ
ಸಿಸಿಬಿ ಅಧಿಕಾರಿಗಳು ಮತ್ತು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ಈ ಜಂಟಿ ಕಾರ್ಯಾಚರಣೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ಉಂಟಾಗಬಹುದಾಗಿದ್ದ ದುಷ್ಪರಿಣಾಮವನ್ನು ತಡೆಗಟ್ಟಿದಂತಾಗಿದೆ. ಅವಧಿ ಮೀರಿದ ಬಿಸ್ಕೆಟ್ ಮತ್ತು ಹಾಲಿನ ಪೌಡರ್‌ಗಳು ಸೇರಿ ಇತರೆ ವಸ್ತುಗಳ ಪ್ಯಾಕೇಟ್‌ಗಳನ್ನು ಬದಲಾಯಿಸಿ ಅವಧಿ ಮೀರಿದ ಪದಾರ್ಥಗಳನ್ನು ಮರು ಬಳಕೆ ಮಾಡುತ್ತಿರುವುದು ಕಂಡು ಬಂದಿದೆ.
ಬಿಸ್ಕೆಟ್ ಮತ್ತು ಚಾಕೋಲೇಟ್ ಮತ್ತು ಹಾಲಿನ ಪುಡಿಯನ್ನು ಮಕ್ಕಳು ಹೆಚ್ಚಾಗಿ ಬಳಸುತ್ತಾರೆ. ಆದರೆ ಆರೋಪಿಗಳು ಯಾವುದೇ ಭಯವಿಲ್ಲದೇ ಈ ದಂಧೆಯಲ್ಲಿ ತೊಡಗಿದ್ದಾರೆ. ಬಿಸ್ಕಟ್ ಈ ಬಗ್ಗೆ ಮಾಲೀಕರನ್ನು ಪ್ರಶ್ನಿಸಿದ್ದಾಗ ಪ್ರಾಣಿಗಳ ಆಹಾರ ತಯಾರಿಕೆಗೆ ಬಳಸುತ್ತೇವೆ ಎಂದು ಹೇಳಿದ್ದಾರೆ.
ಸದ್ಯ ಅವಧಿ ಮುಗಿದ ವಸ್ತುಗಳ ಸ್ಯಾಂಪಲ್‌ಗಳನ್ನು ಪಡೆದು ಎ್ಎಸ್‌ಎಲ್ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ವರದಿ ಬಂದ ನಂತರ ಇದರ ಅಸಲಿಯತ್ತು ಬಯಲಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಗಡಿಯೊಂದರಲ್ಲಿ ಅವಧಿ ಮುಗಿದ ಬಿಸ್ಕತ್ ಸಿಕ್ಕಿದೆ. ಇದರ ಮೂಲವನ್ನು ಸಿಸಿಬಿ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಹುಡುಕಿಕೊಂಡು ಬಂದಿದ್ದಾರೆ. ಹೀಗೆ ಹುಡುಕಿಕೊಂಡು ಬಂದ ಅಧಿಕಾರಿಗಳಿಗೆ ಹೋಲ್‌ಸೇಲ್ ಅಂಗಡಿಯ ಮಾಹಿತಿ ಸಿಕ್ಕಿದೆ. ಅವರನ್ನು ವಿಚಾರಿಸಿದ್ದಾಗ ಎರಡು ಗೊಡೋನ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬುಲ್ಧಾನ ಬಸ್​ ದುರಂತ; ನಾವು ಏನೂ ಮಾಡದ ಪರಿಸ್ಥಿತಿಯಲ್ಲಿದ್ದೆವು ಎಂದ ಪ್ರತ್ಯಕ್ಷದರ್ಶಿ
ಗೊಡೋನ್ ಮೇಲೆ ದಾಳಿ ನಡೆಸಿದ್ದಾಗ ಅಲ್ಲಿ ಅವಧಿ ಮುಗಿದ ಪದಾರ್ಥಗಳ ರಾಶಿ ರಾಶಿ ಮೂಟೆಗಳನ್ನು ಕಂಡು ಬಂದಿದೆ. ಇದನ್ನು ಕಂಡು ಅಧಿಕಾರಿಗಳೆ ದಂಗಾಗಿದ್ದು, ಬಳಿಕ ನೋಟಿಸ್ ನೀಡಿ ಕ್ರಮಕ್ಕೆ ಮುಂದಾಗಿದ್ದಾರೆ.
ಪ್ರತಿಷ್ಠಿತ ಕಂಪನಿಗಳ ಹೆಸರಿನ, ರಾಶಿ ರಾಶಿ ಮೂಟೆಗಳಲ್ಲಿ ತುಂಬಿಡಲಾಗಿದ್ದ ಬಿಸ್ಕತ್ತು, ಚಾಕೋಲೇಟ್, ಚಾಕೋಲೇಟ್ ಪೌಡರ್, ಅಡುಗೆ ಎಣ್ಣೆ, ಡಾಲ್ಡಾ, ತುಪ್ಪ, ರವೆ, ಹಾಲಿನಪುಡಿ ಸೇರಿ ಇತರೆ ಪದಾರ್ಥಗಳು ಪತ್ತೆಯಾಗಿದೆ.
ಸಿಸಿಬಿ ಅಧಿಕಾರಿಗಳಿಗೆ ಬಂದಂತಹ ಖಚಿತ ಮಾಹಿತಿಯ ಮೇರೆಗೆ ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಡಲಾಗಿದ್ದ ಗೊಡೋನ್ ಮೇಲೆ ದಾಳಿ ನಡೆಸಲಾಗಿತ್ತು. ಅದರ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಎ್ಎಸ್‌ಎಲ್‌ಗೆ ಕಳುಹಿಸಲಾಗಿದೆ. ುಡ್ ಸೇಫ್ಟಿ ಅಧಿಕಾರಿಗಳು ಮಾಲೀಕರಿಗೆ ನೋಟಿಸ್ ನೀಡಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಸಿಸಿಬಿ ಜಂಟಿ ಪೊಲೀಸ್​ ಡಾ. ಶರಣಪ್ಪ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
