ಬೆಂಗಳೂರು:ಡ್ರಗ್ಸ್ ಮಾಫಿಯಾ ಪ್ರಕರಣ ದಿನೇದಿನೆ ಕುತೂಹಲ ಕೆರಳಿಸುತ್ತಿದ್ದು, ಸಿಸಿಬಿ ಪೊಲೀಸರು ಕೋರ್ಟ್​ನಿಂದ ಸರ್ಚ್​ ವಾರೆಂಟ್ ಪಡೆದು ಆದಿತ್ಯ ಆಳ್ವಾ ಮನೆ ಶೋಧ ಆರಂಭಿಸಿದ್ದಾರೆ. ಇಂದು ಬೆಳಗ್ಗೆಯೇ ಹೆಬ್ಬಾಳದಲ್ಲಿರುವ ಆದಿತ್ಯ ಆಳ್ವಾರ “House of Life” ಮನೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಮನೆಯ ಪ್ರತಿಯೊಂದು ಭಾಗವನ್ನೂ ಶೋಧಿಸತೊಡಗಿದ್ದಾರೆ.
ಹೆಬ್ಬಾಳ ಸಮೀಪದ ಈ ಮನೆ ರೆಸಾರ್ಟ್​ನಂತೆ ಇದ್ದು ಸುಮಾರು 4 ಎಕರೆ ಪ್ರದೇಶ ವ್ಯಾಪ್ತಿಯಲ್ಲಿದೆ. ಸಿಸಿಬಿ ಪೊಲೀಸರು ಅಲ್ಲಿಗೆ ತೆರಳಿದ ವೇಳೆ ಮನೆಯ ಸದಸ್ಯರು ಯಾರೂ ಇರಲಿಲ್ಲ. ಮನೆಗೆಲಸದವರು ಮಾತ್ರ ಇದ್ದು, ಪೊಲೀಸರು ಶೋಧ ಆರಂಭಿಸಿದ್ದಾರೆ. ಡ್ರಗ್ಸ್ ಕೇಸ್​ನ ಕಾಟನ್​ಪೇಟೆ ಪ್ರಕರಣದಲ್ಲಿ ಎ6 ಆರೋಪಿ ಆದಿತ್ಯ ಆಳ್ವಾ. ಮಾಜಿ ಸಚಿವ ಜೀವರಾಜ್ ಆಳ್ವಾ ಅವರ ಪುತ್ರ ಈ ಆದಿತ್ಯ.
ಇದನ್ನೂ ಓದಿ:ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಳುತ್ತಾ ಸೊಳ್ಳೆಗಳೊಂದಿಗೆ ರಾತ್ರಿ ಕಳೆದ ರಾಗಿಣಿ
ಸಿಸಿಬಿ ಇನ್​ಸ್ಪೆಕ್ಟರ್ ಪುನೀತ್​, ಇನ್​ಸ್ಪೆಕ್ಟರ್​ ಅಂಜುಮಾಲಾ ಸೇರಿ ಮೂವರು ಇನ್​ಸ್ಪೆಕ್ಟರ್​ಗಳ ನೇತೃತ್ವದ 8 ಸದಸ್ಯರ ತಂಡ ಈ ದಾಳಿಯನ್ನು ನಡೆಸಿದೆ. (ದಿಗ್ವಿಜಯ ನ್ಯೂಸ್)
PHOTOS|ದೊಡ್ಡಪ್ಯಾಯಲಗುರ್ಕಿ ಬಳಿ ತಡರಾತ್ರಿ ಭೀಕರ ಅಪಘಾತ; ಸ್ಥಳದಲ್ಲೇ ಮೂವರ ಸಾವು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − 10 =
Remember me
