ಬೆಂಗಳೂರು:ರಮೇಶ್​ ಜಾರಕಿಹೊಳಿ ವಿರುದ್ಧದ ಅಶ್ಲೀಲ ಸಿಡಿ ಪ್ರಕರಣ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ. ಸಿಡಿ ಬಲೆಯಲ್ಲಿ ಮತ್ತೊಬ್ಬ ಮಾಜಿ ಸಚಿವ ಸಿಲುಕಿರುವ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಅವರಿಗೆ ನೋಟಿಸ್​ ಕೊಟ್ಟು ವಿಚಾರಣೆ ನಡೆಸಲು ಎಸ್​ಐಟಿ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.ಸಿಡಿ ಲೇಡಿ ಪದೇಪದೆ ಮಾಜಿ ಮಿನಿಸ್ಟರ್‌ಗೆ ಸುಧಾಕರ್‌ಗೆ ಕರೆ ಮಾಡುತಿದ್ದದ್ದು ಏಕೆ? ಅವರಿಬ್ಬರಿಗೂ ಏನು ನಂಟು? ಎಂಬ ಪ್ರಶ್ನೆಗೆ ಸ್ವತಃ ಆ ಮಾಜಿ ಸಚಿವರೇ ಪ್ರತಿಕ್ರಿಯಿಸಿದ್ದಾರೆ.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದು, ನಂತರ ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಯಾಗಿರುವ ಚಿತ್ರದುರ್ಗ ಮೂಲದ ಮಾಜಿ ಸಚಿವ ಡಿ.ಸುಧಾಕರ್​ಗೆ ಸಿಡಿ ಲೇಡಿ ಜತೆ ಸ್ನೇಹ ಇತ್ತು ಎನ್ನಲಾಗುತ್ತಿದೆ.ಇದನ್ನೂ ಓದಿರಿಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ
ಜಾಲಪ್ಪ ಆಸ್ಪತ್ರೆಯಲ್ಲಿ ಸ್ನೇಹಿತೆಗೆ ಸೀಟ್ ಕೊಡಿಸಲು ಸಿಡಿ ಕೇಸ್​ನ ಯುವತಿ ಓಡಾಡುತ್ತಿದ್ದಳು. ಇದೇ ವಿಚಾರವಾಗಿ ಆಗಾಗ ಡಿ.ಸುಧಾಕರ್ ಅವರನ್ನ ಮೀಟ್ ಆಗುತ್ತಿದ್ದಳೆ?ಲಾಕ್‌ಡೌನ್ ಸಮಯದಲ್ಲಿ ಹಲವು ಬಾರಿ ಮೀಟ್‌ ಮಾಡಿದ್ದಳೆ? ಸಿಡಿ ಲೇಡಿ ಮೋಹದ ಬಲೆಯಲ್ಲಿ ಮಾಜಿ ಸಚಿವರೂ ಬಿದ್ದಿದ್ದರೆ?ಎಂಬಿತ್ಯಾದಿ ತರೇಹವಾರಿ ಪ್ರಶ್ನೆಗಳು ಮೂಡಿದೆ.
ಅಷ್ಟೆ ಅಲ್ಲ, ಸಿಡಿ ಲೇಡಿಗೆ ಮಾಜಿ ಸಚಿವರಿಂದ ಹಣ ವರ್ಗಾವಣೆ ಆಗಿದೆ ಎಂಬ ಅನುಮಾನ ದಟ್ಟವಾಗಿದೆ. ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸಿಡಿ ಬಿಡುಗಡೆಗೂ ಮುನ್ನ ಯುವತಿ ಜತೆ ಲಕ್ಷಾಂತರ ರೂ. ವ್ಯವಹಾರ ನಡೆಸಿರುವುದಕ್ಕೆ ಎಸ್​ಐಟಿಗೆ ಸಾಕ್ಷಿ ಸಿಕ್ಕಿದೆಯಂತೆ. ಆದರೆ ಕರೊನಾ ಲಾಕ್​ಡೌನ್​ ಸಮಯದಲ್ಲಿ ಈ ಮಾಜಿ ಸಚಿವರು ಯುವತಿ ಜತೆ 35ಕ್ಕೂ ಅಧಿಕ ಬಾರಿ ಮೊಬೈಲ್​ನಲ್ಲಿ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದ್ದು, ಸಿಡಿ ಕೇಸ್​ ಕ್ಷಣಕ್ಕೊಂದು ಟ್ವಿಸ್ಟ್​ ಪಡೆಯುತ್ತಿದೆ.
ಈ ಎಲ್ಲ ಬೆಳವಣಿಗೆ ಕುರಿತು ಚಳ್ಳಕೆರೆ ಪಟ್ಟಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಮಾಜಿ ಸಚಿವ ಡಿ.ಸುಧಾಕರ್​, ಸಿಡಿ ಕೇಸಲ್ಲಿ ಮಾಜಿ ಸಚಿವರೊಬ್ಬರಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ನನಗೆ ಭಯ ಇದ್ದರೆ ಮೊದಲೇ ಇಂಜಕ್ಷನ್ ಆರ್ಡರ್ ತೆಗೆದುಕೊಳ್ಳುತ್ತಿದ್ದೆ. ನನ್ನ ಹೆಸರು ತಳಕು ಹಾಕಿಕೊಂಡಿದ್ದು ಕೇಳಿ ಆಶ್ಚರ್ಯವಾಗಿದೆ. ನಾನು ಡಿ.ಕೆ. ಶಿವಕುಮಾರ್ ಜತೆಯೂ ಇರುತ್ತೇನೆ. ಸಿದ್ದರಾಮಯ್ಯ ಜತೆಗೂ ಇರುತ್ತೇನೆ. ಅದಕ್ಕಾಗಿ ಈ ಕೇಸ್ನಲ್ಲಿ ತಳುಕು ಹಾಕುವುದು ತಪ್ಪು ಎಂದರು.
ನಾನು ಸಿಡಿ ಲೇಡಿಗೆ ಯಾವುದೇ ಹಣ ವರ್ಗಾವಣೆ ಮಾಡಿಲ್ಲ. ನನಗೆ ಪ್ರತಿದಿನ ಅನೇಕ ಜನ ಕರೆ ಮಾಡುತ್ತಿರುತ್ತಾರೆ. ಸಿಡಿ ಲೇಡಿಯೊಂದಿಗೆ ನನಗೆ ಯಾವುದೇ ಸಂಪರ್ಕ ಇಲ್ಲ. ಎಸ್ಐಟಿ ತನಿಖೆಗೆ ಕರೆದರೆ ಉತ್ತರಿಸುತ್ತೇನೆ ಎಂದು ಸುಧಾಕರ್​ ಸ್ಪಷ್ಟಪಡಿಸಿದರು.
2004ರಲ್ಲಿ ದುಡ್ಡಿಲ್ಲದೆ ಖಾಲಿ ಡಬ್ಬದಂತಿದ್ದ ಕುಮಾರಸ್ವಾಮಿ ಇವತ್ತು ತುಂಬಿದ ಕೊಡ! ಅಂದಿನ ಹಣದ ರಹಸ್ಯ ಕೆದಕಿದ ಜಮೀರ್

ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

ಸುಳ್ಳು‌ ದೂರಿಗೆ ನನ್ನಿಂದ ಹೆಂಡತಿ‌-ಮಕ್ಕಳು ದೂರವಾದರು: ಆರ್​. ಅಶೋಕ್​ ವಿರುದ್ಧ ಸಿಡಿ ಲೇಡಿ ವಕೀಲ ಜಗದೀಶ್​ ವಾಗ್ದಾಳಿ

ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − six =
Remember me
