ಬೆಂಗಳೂರು:ನಾನು ನಂದಿ ಅಲ್ಲ, ನಾನು ಜಗದೀಶ್. ನಾನು ಮೂರನೇ ಕಣ್ಣು ಬಿಟ್ರೆ ಭಸ್ಮ ಆಗ್ತೀರಿ. ಯಾರಾದ್ರೂ ನನ್ನನ್ನು ರೌಡಿಶೀಟರ್ ಅಂದ್ರೆ ಅವರ ವಿರುದ್ಧ ಕೇಸ್ ದಾಖಲು ಮಾಡ್ತೀನಿ ಎಂದು ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಯುವತಿ ಪರ ವಕೀಲ ಜಗದೀಶ್​ ಎಚ್ಚರಿಸಿದ್ದಾರೆ.
ಬುಧವಾರ ಫೇಸ್​ಬುಕ್​ ಲೈವ್​ನಲ್ಲಿ ಮಾತನಾಡಿದ ಜಗದೀಶ್​, ನನ್ನ ವಿರುದ್ಧದ ಎಲ್ಲ ಕೇಸ್​ಗಳು ಖುಲಾಸೆ ಆಗಿವೆ. ನಾವು ಕ್ಲೀನ್​ಹ್ಯಾಂಡ್, ನಮ್ಮ ಚಾರಿತ್ರ್ಯವಧೆ ಮಾಡೋದು ಸರಿಯಲ್ಲ. ನಾನು ಕೆಂಪೇಗೌಡ ವಂಶಸ್ಥ. ಯಾರಾದ್ರೂ ನನ್ನನ್ನ ರೌಡಿಶೀಟರ್ ಅಂದ್ರೆ ಅವರ ವಿರುದ್ಧ ಕೇಸ್ ದಾಖಲು ಮಾಡ್ತೀನಿ ಎಂದ ಜಗದೀಶ್​, ಸಿಸಿಬಿ ಇನ್​ಸ್ಪೆಕ್ಟರ್ ಪುನೀತ್ ಹಿಂದೆ ಆರ್​ಎಸ್ಎಸ್ ಮತ್ತು ಭಜರಂಗದಳ ಇದೆ ಎಂದು ಗಂಭೀರ ಆರೋಪ ಮಾಡಿದರು.ಇದನ್ನೂ ಓದಿರಿಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ
ಸಿಡಿ ಪೊಲೀಸರು ಆರೋಪಿ(ರಮೇಶ್​ ಜಾರಕಿಹೊಳಿ)ಗೆ ಸಹಕರಿಸುತ್ತಿರೋ ಬಗ್ಗೆ ದಾಖಲೆ‌ಯಿದೆ. ನಿನ್ನೆಯಿಂದ ದಾಖಲೆಯನ್ನ ಕಲೆ ಹಾಕಿದ್ದೇನೆ. ಇದಕ್ಕೆ ಎಸ್ಐಟಿ ಉತ್ತರ ಕೊಡುತ್ತಾ? ಎಸ್ಐಟಿ ಕುರಿತಾದ ಸಾಕ್ಷ್ಯಗಳು ನಮ್ಮ ಬಳಿ ಇದೆ. ನಿನ್ನೆ 164 ಹೇಳಿಕೆಯ ಸಂದರ್ಭದಲ್ಲಿ 150ಕ್ಕೂ ಹೆಚ್ಚು ವಕೀಲರು ಹಾಜರಿದ್ದರು. ನಾವು ಯಾರಿಗೂ ಬನ್ನಿ ಎಂದಿರಲಿಲ್ಲ. ಯುವತಿ ಪರವಾಗಿ ಅವರು ವಿಚಾರಣೆ ವೇಳೆ ಹಾಜರಿದ್ದಾರೆ. ವಿಚಾರಣೆ ಮುಗಿಸಿ ಹೊರ ಬಂದಾಗ ಯುವತಿಯ ವಿಡಿಯೋವನ್ನು ಪೊಲೀಸರೇ ಮಾಡಿ ಮಾಧ್ಯಮಕ್ಕೆ ಹಂಚಿದ್ದಾರೆ ಎಂದು ವಕೀಲ‌ ಜಗದೀಶ್​ ಅಸಮಾಧಾನ ಹೊರಹಾಕಿದರು.
ಕೆಪಿಸಿಸಿಯ ಸೂರ್ಯ ಮುಕುಂದರಾಜ್ ಬಂದ ಪೊಟೋವನ್ನು ಪೊಲೀಸರೇ ವೈರಲ್ ಮಾಡಿದ್ದಾರೆ. ಸೂರ್ಯ ಮುಕುಂದರಾಜ್ ವಕೀಲರಾಗಿ ಹಾಜರಿದ್ದರು. ಫೋಟೋ ವೈರಲ್ ಮಾಡಿದ ಎಸ್​ಐಟಿ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತೇನೆ. ನಗರ ಪೊಲೀಸ್ ಆಯುಕ್ತ ಸೇರಿದಂತೆ ಹಲವರ ವಿರುದ್ಧ ದೂರು ನೀಡುತ್ತೇನೆ ಎಂದು ಜಗದೀಶ್ ಕಿಡಿಕಾರಿದರು.
ಡಿಕೆಶಿ ಗಂಡಸಲ್ಲ, ನಾನು ಗಂಡಸು.. ನಾಲಾಯಕ್ ಮಹಾನಾಯಕನನ್ನು ಕನಕಪುರದಲ್ಲೇ ಸೋಲಿಸ್ತೀನಿ: ಜಾರಕಿಹೊಳಿ

ಮೂರು ಪುಟ್ಟ ಕಂದಮ್ಮಗಳ ಕಣ್ಣೆದುರಲ್ಲೇ ತಾಯಿ ದುರಂತ ಸಾವು! ‘ನನ್ನನ್ನು ಎತ್ತಿಕೊಳ್ಳಮ್ಮಾ…’ ಎಂದು ಶವದ ಮುಂದೆ ಕಣ್ಣೀರಿಟ್ಟ ಮಕ್ಕಳು

ಪತಿಯನ್ನ ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪತ್ನಿ! ಬೇಲ್​ ಮೇಲೆ ಹೊರ ಬಂದವಳಿಂದ ಮತ್ತೊಂದು ನೀಚ ಕೃತ್ಯ

ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + twenty =
Remember me
