ಬೆಂಗಳೂರು:ಅಶ್ಲೀಲ ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿ ಸಾಲು ಸಾಲು ವಿಡಿಯೋಗಳನ್ನು ಹರಿಬಿಡಲಾರಂಭಿಸಿದ್ದಾಳೆ. ಆಕೆಯ ಕುಟುಂಬಸ್ಥರು ಮಾಧ್ಯಮದ ಎದುರು ಡಿಕೆ ಶಿವಕುಮಾರ್​ ಅವರೇ ನಮ್ಮ ಮಗಳನ್ನು ಒತ್ತೆಯಾಳು ಮಾಡಿಕೊಂಡಿದ್ದಾರೆ ಎಂದು ಹೇಳಿದ ಬೆನ್ನಲ್ಲೇ ಯುವತಿ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದಾಳೆ. ನನ್ನ ಕುಟುಂಬಸ್ಥರ ಮೇಲೆ ಅವರ ಪ್ರಭಾವ ಬೀರಿ ಅವರ ಬಾಯಲ್ಲಿ ಸುಳ್ಳು ಹೇಳಿಸಲಾಗುತ್ತಿದೆ ಎಂದು ಯುವತಿ ದೂರಿದ್ದಾಳೆ.
ನಿಜವಾಗಿಯೂ ಅನ್ಯಾಯವಾಗಿರುವುದು ನನಗೆ. ಮೋಸ ಮಾಡಿರುವವರು ಅವರು. ಅವರ ಮನೆಯವರನ್ನ ಯಾರೂ ಕರೆದುಕೊಂಡು ಹೋಗಿ ವಿಚಾರಣೆ ಮಾಡುತ್ತಿಲ್ಲ. ಅದರ ಬದಲು ನಮ್ಮ ಮನೆಯವರನ್ನು ಕರೆದುಕೊಂಡು ಹೋಗಿ ಏನೇನೋ ಹೇಳಿಸುತ್ತಿದ್ದಾರೆ. ಈ ಪ್ರಕರಣನ ಬೇರೆಯದ್ದೇ ರೀತಿಯಲ್ಲಿ ಟರ್ನ್​ ಮಾಡಲಾಗುತ್ತಿದೆ. ನ್ಯಾಯ ಸಿಗಬೇಕಾಗಿರುವುದು ನನಗೆ, ಮೊದಲು ನನ್ನ ಬಗ್ಗೆ ಮಾತನಾಡಲಿ. ಅದನ್ನು ಬಿಟ್ಟು ಅವರಿವರ ಬಗ್ಗೆ ಮಾತನಾಡುವುದು ಬೇಡ. ನನಗೆ ಅಲ್ಲಿ ಬಂದು ಹೇಳಿಕೆ ಕೊಡಲು ಹೆದರಿಕೆಯಾಗುತ್ತಿದೆ.
ಇಷ್ಟೊಂದು ಪ್ರಭಾವ ಬೀರಿ ನನ್ನ ಅಪ್ಪ ಅಮ್ಮನ ಬಾಯಿಯಲ್ಲೇ ಏನೇನೋ ಹೇಳಿಸಿದ್ದಾರೆ. ನಾನು ಬಂದರೆ ಇನ್ನು ಏನೇನು ಆಗುತ್ತದೆಯೋ? ಆದ್ದರಿಂದ ನಾನು ಸಿಎಂ ಯಡಿಯೂರಪ್ಪನವರಿಗೆ, ಗೃಹ ಸಚಿವ ಬೊಮ್ಮಾಯಿ ಅವರಿಗೆ, ಸಿದ್ದರಾಮಯ್ಯ ಅವರಿಗೆ, ಡಿಕೆ ಶಿವಕುಮಾರ್ ಅವರಿಗೆ ರಮೇಶ್​ ಕುಮಾರ್​ ಅವರಿಗೆ ಮನವಿ ಮಾಡ್ತೀನಿ. ನಾನು ನೇರವಾಗಿ ಬಂದು ನ್ಯಾಯಾಧೀಶರ ಎದುರಿಗೇ ಹೇಳಿಕೆ ಕೊಡ್ತೀನಿ. ಇದಕ್ಕೆ ನನಗೆ ಸಹಾಯ ಮಾಡಿ ಎಂದು ಯುವತಿ ವಿಡಿಯೋ ಮೂಲಕ ಮನವಿ ಮಾಡಿದ್ದಾಳೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ:
ಸಿಡಿ ಲೇಡಿ ಹೊಸ ವಿಡಿಯೋ
“ಅತ್ಯಾಚಾರಿ ರಮೇಶ್ ಜಾರಕಿಹೊಳಿಯನ್ನು ಬಂಧಿಸಿ, ಪಕ್ಷದಿಂದ ಉಚ್ಚಾಟಿಸಿ” : ಕಾಂಗ್ರೆಸ್

ಡಿಕೆಶಿ ವಿರುದ್ಧ ಅಶ್ಲೀಲ ಪದ ಬಳಕೆ: ವಿಷಾದ ವ್ಯಕ್ತಪಡಿಸಿದ ಜಾರಕಿಹೊಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − seventeen =
Remember me
