ತುಮಕೂರು:ಪಾವಗಡ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ, ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ನಿನ್ನೆ ( ಗುರುವಾರ) ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮನೆಗೆ ಭೇಟಿ ನೀಡಿ ನೈತಿಕ ಸ್ಥೈರ್ಯ ತುಂಬಿದ್ದಾರೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಕುಮಾರಸ್ವಾಮಿಯೇ ಮಹಾನಾಯಕ ಇರಬೇಕು. ಅವರೇ ಒಕ್ಕಲಿಗ ಸಮುಯದಾಯ ನಾಯಕ. ಎಸ್ಐಟಿ ಪೊಲೀಸರು ಕುಮಾರಸ್ವಾಮಿ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಳ್ಳಬೇಕು. ಕುಮಾರಸ್ವಾಮಿಗೆ ಎಲ್ಲಾ ಗೊತ್ತಿದ್ದ ಮೇಲೆ ಎಸ್ಐಟಿ ಅವರಿವರನ್ನು ಕೇಳುವ ಬದಲು, ಕುಮಾರಸ್ವಾಮಿಯ ಸ್ಟೇಟ್ಮೆಂಟ್ ತೆಗೆದುಕೊಳ್ಳಲಿ.‌ ಸತ್ಯ ಹೊರತರುವ ಕೆಲಸ ಮಾಡಲಿ. ಸತ್ಯ ಹೊರತರಲು ಕುಮಾರಸ್ವಾಮಿ ಸಹಕಾರ ನೀಡಲಿ ಎಂದು ಟಾಂಗ್ ನೀಡಿದರು.ಇದನ್ನೂ ಓದಿರಿಅರಸೀಕೆರೆ ಹೆಂಗಸರು ನನ್ನ ಮುಖ ಕಂಡ ಕೂಡಲೇ ಬೈತಾರೆ: ಶಾಸಕ ಶಿವಲಿಂಗೇಗೌಡ ಅಳಲು
ರಮೇಶ್​ ಜಾರಕಿಹೊಳಿಗೆ ನೈತಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಿದ್ವಿ. ಪ್ರಕರಣದ ತನಿಖೆಯಾಗಲಿ ತಪಿತಸ್ಥರಿಗೆ ಶಿಕ್ಷೆಯಾಗಲಿ. ‌ನಮ್ಮದೇನು ಅಡ್ಡಿಯಿಲ್ಲ. ಎಸ್ಐಟಿ ತನಿಖೆ ಒಂದೊಂದು ದಿನ ಒಂದೊಂದು ಆಯಾಮ ಪಡೆದುಕೊಳ್ಳುತ್ತಿದೆ. ಏನೇ ಆಯಾಮ ಪಡೆದುಕೊಂಡರೂ ಎಸ್ಐಟಿ ಆಳವಾಗಿ ತನಿಖೆ ನಡೆಸಿ ಸಂಪೂರ್ಣ ಸತ್ಯಾಂಶ ಹೊರತರುವ ವಿಶ್ವಾಸವಿದೆ ಎಂದು ರಾಜಣ್ಣ ತಿಳಿಸಿದರು.
ಮೇಲ್ನೋಟಕ್ಕೆ ಇದು ಬ್ಲ್ಯಾಕ್ ಮೇಲ್ ಪ್ರಕರಣ ಅನ್ನಿಸುತ್ತಿದೆ. ಬಹಳ ದಿನಗಳ ಪಿತೂರಿ ನಡೆದಿದೆ. ಎಡಿಟ್ ಮಾಡಿ, ರಷ್ಯಾದಿಂದ ಅಪ್​ಲೋಡ್ ಮಾಡಿದಂತೆ ಮಾಡಿದ್ದಾರೆ. ಸಾಮಾನ್ಯವಾದ ಜನರು ಮಾಡುವಂತಹ ಕೆಲಸ ಇದಲ್ಲ. ತಾಂತ್ರಿಕ ನೈಪುಣ್ಯತೆ, ಹಣಕಾಸಿನ ನೆರವುಬೇಕು. ದೊಡ್ಡ ಷಡ್ಯಂತರ, ಪಿತೂರಿ ಇದರ ಹಿಂದಿದೆ. ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಷಡ್ಯಂತರದ ಹಿಂದೆ ಯಾರಿದ್ದಾರೆ ಅಂತ ಗೊತ್ತಾಗುವುದಿಲ್ಲ. ಇವತ್ತು-ನಾಳೆ ಇದರ ಹಿಂದೆ ಯಾರಿದ್ದಾರೆ ಅಂತ ಗೊತ್ತಾಗುತ್ತದೆ. ಮಹಾನಾಯಕ ಯಾರಿಗೆ ಬೇಕಾದರೂ ಆಗಬಹುದು. ಅಶೋಕ್, ವಿಜಯೇಂದ್ರ ಇನ್ನೊಬ್ಬನಿಗೂ ಮಹಾನಾಯಕ ಅಂತ ಹೇಳಬಹುದು.‌ ವಿನಾಕಾರಣ ಯಾರ ಹೆಸರನ್ನೂ ಹೇಳಬಾರದು, ತೇಜೋವಧೆ ಮಾಡಬಾರದು ಎಂದರು.
ಅರಸೀಕೆರೆ ಹೆಂಗಸರು ನನ್ನ ಮುಖ ಕಂಡ ಕೂಡಲೇ ಬೈತಾರೆ: ಶಾಸಕ ಶಿವಲಿಂಗೇಗೌಡ ಅಳಲು

ಅತ್ತ ತೋಟದಲ್ಲಿ ಪೂಜೆ ನಡೆಯುತ್ತಿತ್ತು, ಇತ್ತ ಮನೆಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ!

ಲಕ್ಷ್ಮೀ ಹೆಬ್ಬಾಳ್ಕರ್​ಗೆ ಯುವಕನಿಂದ ಹಿಗ್ಗಾಮುಗ್ಗಾ ತರಾಟೆ! ಶಾಸಕಿಯಿಂದ ಮೊಂಡು ಸಮರ್ಥನೆ

ಪತಿಯನ್ನ ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪತ್ನಿ! ಬೇಲ್​ ಮೇಲೆ ಹೊರ ಬಂದವಳಿಂದ ಮತ್ತೊಂದು ನೀಚ ಕೃತ್ಯ

ಅವ್ವ ಆತ್ಮಹತ್ಯೆ ಮಾಡಿಕೊಂಡಳೆಂದು ಅಳುತ್ತಿದ್ದ ಅಣ್ಣಂದಿರಿಗೆ ಅಂತ್ಯಕ್ರಿಯೆಗೂ ಮುನ್ನ ತಮ್ಮ ಕೊಟ್ಟ ಶಾಕ್​ ಅಂತಿಂಥದ್ದಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 3 =
Remember me
