ಬೆಂಗಳೂರು:ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಪ್ರಕರಣದ ‘ಸಂತ್ರಸ್ತ’ ಯುವತಿ ಪ್ರತಿಪಕ್ಷ ನಾಯಕರ ಸಹಾಯ ಬೇಡಿದ್ದು, ಇದು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.
ಸಿಡಿ ಪ್ರಕರಣ ಬೆಳಕಿಗೆ ಬಂದ ಬಳಿಕ ಕಣ್ಮರೆಯಾಗಿದ್ದ ಯುವತಿ ಅಜ್ಞಾತ ಸ್ಥಳದಿಂದ ಕಳುಹಿಸಿದ್ದ ವಿಡಿಡೋ ಮಾ.13ರಂದು ಬಿಡುಗಡೆಯಾಗಿತ್ತು.ಆ ವಿಡಿಯೋದಲ್ಲಿ ”ನನ್ನನ್ನು ಬಲಿಪಶು ಮಾಡಲಾಗಿದೆ. ಗೃಹ ಸಚಿವರು ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು. ರಮೇಶ್ ಜಾರಕಿಹೊಳಿ ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ನನ್ನ ಮಾನಮರ್ಯಾದೆ ಊರು ತುಂಬಾ ಹರಾಜಾಗಿದೆ. ನನ್ನ ತಂದೆ ತಾಯಿ ಹಾಗೂ ನಾನು ಮೂರ್ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇವೆ. ಆ ಅಶ್ಲೀಲ ವಿಡಿಯೋ ಹೇಗೆ ಮಾಡಿದ್ದಾರೋ ನನಗೆ ಗೊತ್ತಿಲ್ಲ. ದಯವಿಟ್ಟು ನನಗೆ ರಕ್ಷಣೆ ನೀಡಬೇಕು” ಎಂದು ಕೋರಿದ್ದಳು. ಇದೀಗ ಇಂದು 2ನೇ ವಿಡಿಯೋ ಬಿಡುಗಡೆ ಮಾಡಿರುವ ಯುವತಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಸೇರಿದಂತೆ ಪ್ರತಿಪಕ್ಷ ನಾಯಕರ ಹೆಸರನ್ನು ಪ್ರಸ್ತಾಪಿಸಿದ್ದಾಳೆ.ಇದನ್ನೂ ಓದಿರಿಸಿಡಿ ಲೇಡಿ ಮತ್ತೆ ವಿಡಿಯೋ ಮೂಲಕ ಪ್ರತ್ಯಕ್ಷ; ಎರಡನೇ ವಿಡಿಯೋ ಬಿಡುಗಡೆ
ಮಾ.​12ರಂದೇ ಪೊಲೀಸ್​ ಆಯುಕ್ತರಿಗೆ ವಿಡಿಯೋ ಮೂಲಕ ದೂರು ನೀಡಿದ್ದೆ. ಎಸ್​ಐಟಿಗೂ ವಿಡಿಯೋ ಮೂಲಕ ದೂರು ನೀಡಿದ್ದೆ. ಆದರೆ ಆ ವಿಡಿಯೋ ರಿಲೀಸ್​ ಆಗಿದ್ದು ಮಾ.13ರಂದು. ಅದೂ ರಮೇಶ್​ಜಾರಕಿಹೊಳಿ ಅವರು ತರಾತುರಿಯಲ್ಲಿ ದೂರು ಕೊಟ್ಟ ಅರ್ಧ ಗಂಟೆಯ ಬಳಿಕ. ನಾನು ಕಳುಹಿಸಿದ ದಿನವೇ ನನ್ನ ವಿಡಿಯೋ ಬಿಡುಗಡೆಯಾಗಿಲ್ಲ. ರಮೇಶ್​ ದೂರು ನೀಡೋವರೆಗೂ ಎಫ್​ಐಆರ್​ ದಾಖಲಿಸಿಲ್ಲ. ಇದರಲ್ಲೇ ಗೊತ್ತಾಗುತ್ತೆ ಎಸ್​ಐಟಿ ಏನು ಅನ್ನೋದು. ಎಸ್​ಐಟಿ ಯಾರ ಪರ ಇದೆ ಅನ್ನೋದು ಗೊತ್ತಾಗ್ತಿಲ್ಲ ಎಂದು ಎಸ್​ಐಟಿ ತನಿಖೆಯನ್ನ ಪ್ರಶ್ನಿಸಿರು ಯುವತಿ, ನಾನು ಈಗಲೇ ಎಸ್​​ಐಟಿ ಮುಂದೆ ಹಾಜರಾಗೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.
ನಾನು ಕಿಡ್ನ್ಯಾಪ್​ ಆಗಿದ್ದೇನೆ ಅಂತ ನನ್ನ ಅಪ್ಪ-ಅಮ್ಮ ದೂರು ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ನನ್ನ ಪ್ರಕಾರ ಅವರು ಸ್ವಇಚ್ಛೆಯಿಂದ ದೂರು ಕೊಟ್ಟಿಲ್ಲ. ನಾನು ತಪ್ಪೇ ಮಾಡಿಲ್ಲ. ಈ ಬಗ್ಗೆ ನನ್ನ ಅಪ್ಪ-ಅಮ್ಮನಿಗೆ ಗೊತ್ತಿದೆ. ನನ್ನ ಅಪ್ಪ-ಅಮ್ಮ ಸೇಫ್​ ಆಗಿದ್ದಾರೆ ಅಂತ ಗೊತ್ತಾದ ಬಳಿಕವೇ ನಾನು ಎಸ್​ಐಟಿ ತನಿಖೆಗೆ ಹಾಜರಾಗುವೆ ಎಂದಿರುವ ಯುವತಿ, ನೇರವಾಗಿಯೇ ಪ್ರತಿಪಕ್ಷ ನಾಯಕರ ಸಹಾಯ ಕೋರಿದ್ದಾಳೆ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ರಮೇಶ್​ ಕುಮಾರ್​ ಮತ್ತು ಇನ್ನಿತರ ಮಹಿಳಾ ಸಂಘಟನೆಯವರಿಗೆ ಕೇಳಕೊಳ್ತೇನೆ. ದಯವಿಟ್ಟು ನನ್ನ ಅಪ್ಪ-ಅಮ್ಮನನ್ನು ರಕ್ಷಿಸಿ ಎಂದು ವಿಡಿಯೋ ಮೂಲಕ ಯುವತಿ ಬೇಡಿಕೊಂಡಿದ್ದಾಳೆ. ಆ ಮೂಲಕ ಪೊಲೀಸ್​ ತನಿಖೆ ಮೇಲೆ ತನಗೆ ನಂಬಿಕೆ ಇಲ್ಲ, ಪ್ರತಿಪಕ್ಷ ನಾಯಕರೇ ನ್ಯಾಯ ಕೊಡಿಸಬೇಕು ಎಂದು ಪರೋಕ್ಷವಾಗಿ ಹೇಳಿದ್ದಾಳೆ.
ಅಯ್ಯೋ, ಮಗಳೇ ಆ ಒಂದು ಮಾತಿಗೆ ಎಂಥ ಸಾವು ತಂದುಕೊಂಡವ್ವ…

ಹೊಸ ಕಾರಿನ ಪೂಜೆಗೆಂದು ಧರ್ಮಸ್ಥಳಕ್ಕೆ ಹೊರಟಿದ್ದವರ ಬಾಳಲ್ಲಿ ದುರಂತ! ಇಬ್ಬರ ಸಾವು, 6 ಜನರ ಸ್ಥಿತಿ ಗಂಭೀರ

ಎರಡು ಮಕ್ಕಳ ತಾಯಿ ಆತ್ಮಹತ್ಯೆ! ಇಂಥ ನೀಚ ಕೆಲಸಕ್ಕೆ ಇಳಿದನಾ ಗಂಡ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 14 =
Remember me
