ಬೆಂಗಳೂರು:ಮಾಜಿ ಸಚಿವರ ಲೈಂಗಿಕ ವಿವಾದ ಪ್ರಕರಣದ ಸಿಡಿ ಲೇಡಿ ಕಬ್ಬನ್ ಪಾಕ್ ಪೊಲೀಸ್ ಠಾಣೆಗೆ ಬಂದಿಲ್ಲ. ಸೋಮವಾರ ಬೆಳಗ್ಗೆ 10ಕ್ಕೆ ವಿಚಾರಣೆಗೆ ಬರುವಂತೆ ಇನ್ಸ್​ಪೆಕ್ಟರ್​ ಮಾರುತಿ ನೋಟಿಸ್ ಜಾರಿ ಮಾಡಿದ್ದರು.
ಮಾ.2ಕ್ಕೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನೀಡಿರುವ ದೂರಿನ ಸಂಬಂಧ ಹೇಳಿಕೆ ನೀಡುವಂತೆ ಸೂಚನೆ ಕೊಟ್ಟಿದ್ದರು. ಆದರೆ, ಗಂಟೆ 11 ಆದರೂ ಇನ್ನೂ ಯುವತಿ ಪೊಲೀಸ್ ವಿಚಾರಣೆಗೆ ಬಂದಿಲ್ಲ. ಇನ್ಸ್​ಪೆಕ್ಟರ್​ಗೆ ಅಥವಾ ಪೊಲೀಸ್ ಠಾಣೆ ದೂರವಾಣಿ ಕರೆ, ಇಮೇಲ್ ಸಹ ಮಾಡಿಲ್ಲ. ಇದೊಂದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ಇದನ್ನೂ ಓದಿರಿ:23ರ ಯುವಕನ ಜತೆ 41ರ ಮಹಿಳೆಯ ಲವ್ವಿಡವ್ವಿ: ಮಾಡಬಾರದ್ದನ್ನು ಮಾಡಿ ಪೊಲೀಸ್​ ಬಲೆಗೆ ಬಿದ್ದ ಜೋಡಿ!
ಈ ಕಡೆ ಸರ್ಕಾರದ ಸೂಚನೆ ಪಾಲನೆ ಮಾಡಬೇಕು. ಈ ಕಡೆ ಯುವತಿ ಯಾವ ನಿರ್ಧಾರಕ್ಕೆ ಬರುತ್ತಾಳೆ ಎಂಬ ಸುಳಿವು ಸಹ ಪೊಲೀಸರಿಗೆ ಇಲ್ಲ. ಆಕೆ ಏನಾದರೂ ಕೋಟ್೯ ಮೊರೆ ಹೋದರೆ ಪೊಲೀಸರಿಗೆ ಸಂಕಷ್ಟ ಎದುರಾಗಲಿದೆ.
ಮಾಜಿ ಸಚಿವರು ನಿರೀಕ್ಷಣಾ ಜಾಮೀನು ಕೋರಿ ಕೋಟ್೯ ಮೊರೆ ಏನಾದರೂ ಹೋಗುತ್ತಾರೋ ನೋಡಬೇಕಾಗಿದೆ. ಇತ್ತ ಪೊಲೀಸರು ಸಹ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಕೇಸಿನಲ್ಲಿ ಯುವತಿಯನ್ನು ಬಂಧಿಸಿ ಬಿಡುತ್ತಾರಾ ಎಂಬ ಚರ್ಚೆಗಳು ನಡೆಯುತ್ತಿದ್ದು, ಸೆಕ್ಸ್ ಸಿಡಿ ಪ್ರಕರಣ ಮತ್ತಷ್ಟು ರೋಚಕ ತಿರುವು ಪಡೆಯಲಿದೆ.
ಜಾರಕಿಹೊಳಿ ಸಿಡಿ ಕೇಸ್​ಗೆ ಟ್ವಿಸ್ಟ್: ವಿಡಿಯೋದಲ್ಲಿನ ಧ್ವನಿ ಚಿಕ್ಕಮಗಳೂರು ವ್ಯಕ್ತಿಯದ್ದು?

ಉದ್ಯಮಕ್ಕೆ ಮತ್ತೆ ಕರೊನಾ ಗರ: ಗಾಯಕ್ಕೆ ಬರೆ ಎಳೆದ ತೈಲ ಬೆಲೆ; 2 ತಿಂಗಳಲ್ಲಿ 50 ಸಾವಿರ ಕೋಟಿ ರೂ. ನಷ್ಟ

ಕದ್ದ ಕಾರಿನಲ್ಲಿದ್ದ ವಸ್ತು ನೋಡಿ ಬೆಚ್ಚಿದ ಖದೀಮರು, ಕಾರಿನಲ್ಲೇ ಚಿನ್ನಾಭರಣ ಬಿಟ್ಟು ಎಸ್ಕೇಪ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − two =
Remember me
