ಬೆಂಗಳೂರು:ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕೊನೆಗೂ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಮ್ಮ ಬೆಂಬಲಿಗ ನೆಲಮಂಗಲದ ಮಾಜಿ ಶಾಸಕ ಎಂವಿ ನಾಗರಾಜ್ ಅವರ ಮೂಲಕ ಒಂದು ಪುಟದ ಕೈ ಬರಹದ ದೂರು ನೀಡಿರುವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿಯಲ್ಲಿರುವುದು ನಾನಲ್ಲ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ:ಚಿಕ್ಕ ವಯಸ್ಸಿನಲ್ಲಿಯೇ ಲೈಂಗಿಕ ನಿರಾಸಕ್ತಿ ಬಂದುಬಿಟ್ಟಿದೆ… ಅಪರಾಧಿ ಪ್ರಜ್ಞೆ ಕಾಡ್ತಿದೆ, ಏನು ಮಾಡಲಿ?
ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ನನ್ನನ್ನು ತೇಜೋವಧೆ ಮಾಡಲು ಕೆಲವರು ನಾಲ್ಕು ತಿಂಗಳಿನಿಂದ ಷಡ್ಯಂತ್ರ ನಡೆಸಿ, ನನ್ನದೇ ಎಂದು ಅಶ್ಲೀಲ ಸಿಡಿ ಬಿಡುಗಡೆ ಮಾಡಿದ್ದಾರೆ. ಇದರಿಂದ ನನ್ನ ತೇಜೋವಧೆ ಆಗಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ದೂರಿನಲ್ಲಿ ರಮೇಶ್ ಜಾರಕಿಹೊಳಿ ಕೇಳಿಕೊಂಡಿದ್ದಾರೆ. ದೂರಿಗೆ ರಮೇಶ್​ ಜಾರಕಿಹೊಳಿ ಅವರೇ ಸಹಿ ಮಾಡಿದ್ದು, ನನ್ನನ್ನು ಬ್ಲಾಕ್​ಮೇಲ್ ಮಾಡಲು ನನ್ನ ಹೆಸರಿನ ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಜಾರಕಿಹೊಳಿ ದೂರಿದ್ದಾರೆ.
ದೂರು ಸ್ವೀಕರಿಸಿರುವ ಸದಾಶಿವನಗರ ಪೊಲೀಸ್ ಠಾಣೆ ಇನ್ಸಪೆಕ್ಟ್​ರ್, ಎಸ್​ಐಟಿಗೆ ವರ್ಗಾಯಿಸುತ್ತಾರೆ ಎನ್ನಲಾಗಿದೆ.
ಪೊಲೀಸ್​ ವಿರುದ್ಧವೇ ದೂರು ಕೊಡ್ತೀನಿ ಎಂದ ಜಾರಕಿಹೊಳಿ ಸಿಡಿ ಕೇಸ್​ ಕಿಂಗ್​ಪಿನ್​ ಪತ್ನಿ!

ಜಾರಕಿಹೊಳಿಯ ಸಿಡಿ ಮಾಡಿದ ಕಿಂಗ್​ಪಿನ್​ 44 ಲಕ್ಷ ರೂ. ಹಿಡಿದು ಕಾರು ಖರೀದಿಗೆ ಹೋದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
