ಬೆಂಗಳೂರು:ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ ಕ್ಷಣಕ್ಕೊಂದು ಟ್ವಿಸ್ಟ್​ ಪಡೆಯುತ್ತಿದೆ. ಇಂದು ಬೆಳಗ್ಗೆ ಸಿಡಿ ಲೇಡಿ ನಾಲ್ಕನೇ ವಿಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲೇ, ಈ ಪ್ರಕರಣದ ಮಹಾನಾಯಕ ಎಂದೇ ಬಿಂಬಿತವಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸತ್ಯ ಒಪ್ಪಿಕೊಂಡಿದ್ದಾರೆ.
ಎಚ್ಎಎಲ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನಾನು ಮತ್ತು ನೀವೆಲ್ಲ ಸಾರ್ವಜನಿಕ ಜೀವನದಲ್ಲಿ ಇದ್ದೀವಿ. ಜನರ ಮಧ್ಯೆ ಸೇತುವೆಯಾಗಿ ಕೆಲಸ ಮಾಡ್ತಾ ಇದ್ದೀವಿ. ಕಷ್ಟಕ್ಕೆ ಬಂದಾಗ ಸಹಾಯ ಮಾಡಲಾಗುತ್ತೆ. ರಾಜಕೀಯ ಮತ್ತು ಮಾಧ್ಯಮದವರು ಜನರಿಗಾಗಿ ಕೆಲಸ ಮಾಡ್ತಾರೆ. ಪಾಪ ಆ ಹೆಣ್ಣು ಮಗಳು ನನ್ನನ್ನು ಭೇಟಿ ಮಾಡ್ತೀನಿ ಎಂದಿದೆ. ನನ್ನ ಭೇಟಿಗೂ ಪ್ರಯತ್ನ ಮಾಡಿದ್ದ ಬಗ್ಗೆ ಪ್ರಸ್ತಾಪ ಮಾಡಿದೆ. ಬೆಳಗ್ಗೆ ಎದ್ದು ನನ್ನ ಮನೆ ಹತ್ರ ಬಂದ್ ನೋಡಿ, ಸಾಕಷ್ಟು ಜನ ಕಷ್ಟ ಹೇಳಿಕೊಂಡು ಬರ್ತಾರೆ. ನನ್ನ ಪಕ್ಷದ 5 ಜನರನ್ನ ಶಿಫ್ಟ್ ಮಾಡುತ್ತೀವಿ ಅಂತ ಹೇಳಿದಾಗ ನಾನು ರಮೇಶ್ ಜಾರಕಿಹೊಳಿಯನ್ನು ಟ್ರ್ಯಾಕ್ ಮಾಡಿಸುತ್ತಿದ್ದದ್ದು ನಿಜ. ಅದು ಪಕ್ಷ ಮತ್ತು ಸರ್ಕಾರಕ್ಕೆ ಸಂಬಂಧಿಸಿದ್ದಾಗಿತ್ತು. ಹಾಗಾಗಿ ಟ್ರ್ಯಾಕ್ ಮಾಡಿಸುತ್ತಿದ್ದೆವು. ಆದರೆ ಈಗಿಲ್ಲ. ಇದು ವೈಯಕ್ತಿಕ ವಿಷಯ. ಹಾಗಾಗಿ ನಾವು ಅವರನ್ನು ಟ್ರ್ಯಾಕ್ ಮಾಡಿಸುತ್ತಿಲ್ಲ. ನಮಗೆ ಅದು ಬೇಕಾಗಿಯೂ ಇಲ್ಲ ಎಂದು ಡಿಕೆಶಿ ಹೇಳಿದರು.ಇದನ್ನೂ ಓದಿರಿವಿಚಾರಣೆಗೆ ಬಂದ ಸಿಡಿ ಲೇಡಿ ಪೋಷಕರು! ಎಸ್​ಐಟಿ ಮುಂದೆ ಯುವತಿ ಹಾಜರ್​ ಆಗ್ತಾಳ?
ಸಿಡಿ ಕೇಸ್​ ವೈಯಕ್ತಿಕ ವಿಚಾರ. ಈ ವಿಚಾರದ ಬಗ್ಗೆ ಮಾತನಾಡಿ ನಾನು ಪದಕ ಪಡೆಯೋಲ್ಲ. ನರೇಶ್ ನನಗೆ ಬೇಕಾದ ಹುಡುಗ. ಮಾಧ್ಯಮದಲ್ಲಿ ಇದ್ದವನು, ಬಹಳ ಪರಿಚಯಸ್ಥ, ಆತನ ಮನೆಗೆ ಹೋಗಿ ಬಂದಿದ್ದೆ. ಆ ಯುವತಿ ನನ್ನನ್ನು ಭೇಟಿ ಮಾಡುವ ಪ್ರಯತ್ನ ಮಾಡಿರಬಹುದು. ಯುವತಿಗೆ ಎಲ್ಲ ಗೊತ್ತಿರಬಹುದು. ಆದರೆ ನನ್ನನ್ನು ಆಕೆ ಭೇಟಿ ಮಾಡಿಲ್ಲ. ಈಗಲೂ ಸಂತ್ರಸ್ತೆ ನನ್ನನ್ನು ಭೇಟಿಯಾಗಲಿ. ಆಕೆಗೆ ಸಹಾಯ ಮಾಡಲು ಸಿದ್ಧ ಎಂದು ಡಿಕೆಶಿ ಹೇಳಿದರು.
ಆ ಮೂಲಕ 4ನೇ ವಿಡಿಯೋದಲ್ಲಿ ಡಿಕೆಶಿ ಹೆಸರು ಪ್ರಸ್ತಾಪಿಸಿದ್ದ ಯುವತಿ, ನರೇಶ್​ ಮೂಲಕ ಡಿ.ಕೆ.ಶಿವಕುಮಾರ್​ರನ್ನ ಭೇಟಿ ಮಾಡಲು ಯತ್ನಿಸಿದ್ದೆ. ನನಗೆ ಅನ್ಯಾಯ ಆಗಿದೆ ಎಂದು ಹೇಳಿಕೊಳ್ಳಲು ಹೋಗಿದ್ದೆ, ಆದರೆ ಭೇಟಿ ಸಾಧ್ಯವಾಗಿರಲಿಲ್ಲ, ಅಷ್ಟರಲ್ಲಿ ಏನೇನೋ ಆಯ್ತು.. ಎಂದು ಹೇಳಿದ್ದಳು. ಈ ಕುರಿತು ಪ್ರತಿಕ್ರಿಯಿಸಿರುವ ಡಿಕೆಶಿ, ನರೇಶ್ ನನಗೆ ಬೇಕಾದ ಹುಡುಗ. ಆ ಯುವತಿ ನನ್ನನ್ನು ಭೇಟಿ ಮಾಡುವ ಪ್ರಯತ್ನ ಮಾಡಿರಬಹುದು ಎಂದರು.ಇದನ್ನೂ ಓದಿರಿಇಂದು ಸಂಜೆ ಫಿಲಂ ರಿಲೀಸ್​ ಮಾಡ್ತಾರಂತೆ ಜಾರಕಿಹೊಳಿ! ಅದು ಯಾರ ಸಿನಿಮಾ?
ಯುವತಿ ಮತ್ತು ಆಕೆಯ ಪೋಷಕರಿಗೆ ಸರ್ಕಾರ ಹಾಗೂ ಪೊಲೀಸರು ರಕ್ಷಣೆ ಕೂಡಬೇಕಿದೆ. ನಮ್ಮಲ್ಲಿ ಒಳ್ಳೆಯ ಪೊಲೀಸ್ ಇದ್ದಾರೆ. ಡ್ರಗ್ಸ್​ ಮಾಫಿಯಾವನ್ನ ಮಟ್ಟ ಹಾಕಿದ್ದು ಸಂದೀಪ್ ಪಾಟೀಲ್. ಅವರ ಬಗ್ಗೆ ನನಗೆ ನಂಬಿಕೆ ಇದೆ. ಆಕೆಗೆ ರಕ್ಷಣೆ ಕೋಡಬೇಕು ಎಂದರು.
ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ

ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಜಾರಕಿಹೊಳಿ ಸ್ಪರ್ಧೆ: ನಾಮಪತ್ರ ಸಲ್ಲಿಕೆ ವೇಳೆ ಬಾರದಂತೆ ಡಿಕೆಶಿಗೆ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
