ಬೆಂಗಳೂರು:ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿರುವ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಕೇಸ್​ನ ‘ಸಂತ್ರಸ್ತ’ ಯುವತಿ ವಸಂತನಗರ ಗುರುನಾನಕ್​ ಭವನದಲ್ಲಿರುವ ಕೋರ್ಟ್​ನ ನ್ಯಾಯಾಧೀಶರ ಮುಂದೆ ಇಂದು(ಮಂಗಳವಾರ) ಮಧ್ಯಾಹ್ನ 2.30ಕ್ಕೆ ಹಾಜರ್​ ಆಗಿದ್ದಾಳೆ.
ಇದಕ್ಕೂ ಮುನ್ನ ಮೇಲ್ ಮೂಲಕ ನ್ಯಾಯಾಧೀಶರಿಗೆ ಪತ್ರ ಕಳಿಸಿದ್ದ ಸಿಡಿ ಲೇಡಿ, ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್​ಐಟಿ ತನಿಖೆಯಾಗಬೇಕು. ನಮ್ಮ ಪೋಷಕರಿಗೆ ಡಿವೈಎಸ್​ಪಿ ಕಟ್ಟಿಮನಿ ಎಂಬುವರು ಒತ್ತಡ ಹಾಕಿ ಜಾರಕಿಹೊಳಿ ಪರ ಹೇಳಿಕೆ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಸಹ ನಾಶ ಮಾಡಲಾಗುತ್ತಿದೆ. ರಮೇಶ್ ಜಾರಕಿಹೊಳಿ ತುಂಬಾ ಪ್ರಭಾವಿಯಾಗಿದ್ದು, ಸರ್ಕಾರ ಹಾಗೂ ಎಸ್​ಐಟಿಯನ್ನು ತನ್ನಿಷ್ಟದಂತೆ ಬಳಸಿಕೊಳ್ಳುತ್ತಿದ್ದಾರೆ. ನ್ಯಾಯಾಲಯವೇ ನನಗೆ ಸೂಕ್ತ ಭದ್ರತೆ ನೀಡಬೇಕೆಂದು ಕೋರಿದ್ದಳು.ಇದನ್ನೂ ಓದಿರಿಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ
ನಿನ್ನೆ(ಸೋಮವಾರ) ಎಸ್​ಐಟಿ ವಿಚಾರಣೆ ಎದುರಿಸಿದ್ದ ರಮೇಶ್​ ನನಗೆ ಸಿಡಿ ಲೇಡಿ ಯಾರೆಂದು ಗೊತ್ತೇ ಇಲ್ಲ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಯುವತಿ ಮಾತ್ರ ಆ ವಿಡಿಯೋದಲ್ಲಿ ಇರುವುದೆಲ್ಲ ಸತ್ಯ, ಉದ್ಯೋಗದ ಆಮಿಷವೊಡ್ಡಿ ನನ್ನನ್ನ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಅನ್ಯಾಯ ಮಾಡಿದರು. ನ್ಯಾಯ ಕೇಳಿದ್ದಕ್ಕೆ ಅವಾಚ್ಯವಾಗಿ ನಿಂದಿಸಿದ್ದರು. ಈಗ ವಿಡಿಯೋ ಬಹಿರಂಗ ಮಾಡಿ ಮರ್ಯಾದೆ ತೆಗೆದಿದ್ದಾರೆ. ನನಗೆ ಜೀವ ಬೆದರಿಕೆ ಇದೆ ಎಂದು ಯುವತಿ ವಿಡಿಯೋ ಮೂಲಕ ಮಾತ್ರವಲ್ಲ, ಪೊಲೀಸ್​ ಕಮಿಷನರ್​ಗೆ ಬರೆದ ಪತ್ರ ಹಾಗೂ ನ್ಯಾಯಾಧೀಶರಿಗೆ ಬರೆದಿದ್ದ ಪತ್ರದಲ್ಲೂ ವಿವರಿಸಿದ್ದಳು.
28 ದಿನಗಳ ಬಳಿಕ ಇಂದು ಸಿಡಿ ಲೇಡಿಯನ್ನ ವಿಐಪಿ ಭದ್ರತೆಯಲ್ಲಿ ಕೋರ್ಟ್​ಗೆ ಕರೆತರಲಾಗಿದ್ದು, ಆಕೆ ಯಾವ ಹೇಳಿಕೆ ಕೊಡಲಿದ್ದಾಳೆ ಎಂಬ ಕುತೂಹಲ ರಾಜ್ಯದ ಜನತೆಯಲ್ಲಿದೆ. ನ್ಯಾಯಾಲಯದಲ್ಲಿ ಸಿಡಿ ಲೇಡಿ ಕೊಡುವ ಹೇಳಿಕೆ ತನ್ನ ಬುಡಕ್ಕೆ ಬಂದರೆ, ಬಂಧನಕ್ಕೆ ಒಳಗಾಗಬೇಕಾಗುತ್ತಾ? ಎಂದು ರಮೇಶ್ ಜಾರಕಿಹೊಳಿಯಲ್ಲಿ ಭೀತಿ ಮೂಡಿದೆ.
ಮೂರು ಪುಟ್ಟ ಕಂದಮ್ಮಗಳ ಕಣ್ಣೆದುರಲ್ಲೇ ತಾಯಿ ದುರಂತ ಸಾವು! ‘ನನ್ನನ್ನು ಎತ್ತಿಕೊಳ್ಳಮ್ಮಾ…’ ಎಂದು ಶವದ ಮುಂದೆ ಕಣ್ಣೀರಿಟ್ಟ ಮಕ್ಕಳು

ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
