ಬೆಂಗಳೂರು:ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ‘ಸಂತ್ರಸ್ತ’ ಯುವತಿಯ ಪೋಷಕರು ಎಸ್​ಐಟಿ ವಿಚಾರಣೆಗೆ ಶನಿವಾರ ಬೆಳಗ್ಗೆ ಹಾಜರಾಗಿದ್ದಾರೆ.
ಬೆಂಗಳೂರಿನ ಆಡುಗೋಡಿಯ ಟೆಕ್ನಿಕಲ್ ವಿಂಗ್ ಮುಂದೆ ಎಸ್​ಐಟಿ ಅಧಿಕಾರಳೊಂದಿಗೆ ಬಂದ ಯುವತಿ ಪೋಷಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿಡಿ ಕೇಸ್​ ಬೆಳಕಿಗೆ ಬಂದ ಕೆಲ ದಿನಗಳ ಬಳಿಕ ಯುವತಿಯ ಪಾಲಕರು ‘ನನ್ನ ಮಗಳು ಕಾಣೆಯಾಗಿದ್ದಾಳೆ’ ಎಂದು ಬೆಳಗಾವಿಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸುತ್ತಿರುವ ಎಸ್​ಐಟಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು.ಇದನ್ನೂ ಓದಿರಿಇಂದು ಸಂಜೆ ಫಿಲಂ ರಿಲೀಸ್​ ಮಾಡ್ತಾರಂತೆ ಜಾರಕಿಹೊಳಿ! ಅದು ಯಾರ ಸಿನಿಮಾ?
ಯಾರ ಸಂಪರ್ಕಕ್ಕೂ ಸಿಗದೆ ಯುವತಿ ಕುಟುಂಬಸ್ಥರು ದೂರ ಉಳಿದಿದ್ದರು. ಈ ನಡುವೆ ಯುವತಿ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ, ತನ್ನ ತಂದೆ-ತಾಯಿಗೆ ಜೀವ ಬೆದರಿಕೆ ಇದೆ. ಅವರನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು. ಅವರು ಸೇಫ್​ ಆಗಿದ್ದಾರೆಂದು ಗೊತ್ತಾದ ಬಳಿಕೆ ಎಸ್​ಐಟಿ ಮುಂದೆ ಹಾಜರಾಗ್ತೀನಿ ಎಂದಿದ್ದಳು. ಇಂದು ಬೆಳಗ್ಗೆ ಬಿಡುಗಡೆ ಮಾಡಿದ್ದ 4ನೇ ವಿಡಿಯೋದಲ್ಲಿ, ತನ್ನ ತಂದೆ-ತಾಯಿಯನ್ನು ಬೆಂಗಳೂರಿಗೆ ಕರೆತರಬೇಕು. ಅವರಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಳು.
ಇದೀಗ ಎಸ್​ಐಟಿ ಮುಂದೆ ಯುವತಿ ಪೋಷಕರು ಹಾಜರಾಗಿದ್ದು, ಯುವತಿಯೂ ಪ್ರತ್ಯಕ್ಷ ಆಗ್ತಾಳಾ ಎಂಬ ಪ್ರಶ್ನೆ ಮೂಡಿದೆ. ಇನ್ನು ಯುವತಿಯ ಪೋಷಕರನ್ನು ವಿಚಾರಣೆ ಮಾಡುತ್ತಿರುವ ಎಸ್​ಐಟಿ, ನಿಮ್ಮ ಮಗಳನ್ನ ಕೊನೆಯ ಬಾರಿ ಭೇಟಿಯಾಗಿದ್ದು ಯಾವಾಗ, ಆ ವೇಳೆ ಯಾವ ವಿಚಾರ ಪ್ರಸ್ತಾಪ ಮಾಡಿದ್ರು, ವಿಡಿಯೋ ರಿಲೀಸ್ ಆದ ಬಳಿಕ ಎಷ್ಟು ಬಾರಿ ಮಗಳನ್ನ ಸಂಪರ್ಕಿಸಿದ್ದೀರಿ, ಕರೆ ಮಾಡಿದಾಗ ಏನೆಲ್ಲ ಹೇಳಿದ್ರು, ಯಾರ ಬಳಿ ಇರುವುದಾಗಿ ಹೇಳಿದ್ರು? ಈಗ ನಿಮ್ಮ ಮಗಳು ಎಲ್ಲಿದ್ದಾಳೆ, ಆಕೆಗೆ ಯಾರಾದ್ರು ಬಲವಂತವಾಗಿ ಹೆದರಿಸಿದ್ದಾರಾ? ನಿಮ್ಮ ಕುಟುಂಬಕ್ಕೆ ಬೆದರಿಕೆ ಇದೀಯಾ, ಒಂದು ವೇಳೆ ಬೆದರಿಕೆ ಇದ್ರೆ ಯಾರಿಂದ… ಹೀಗೆ ನಾನಾ ಆಯಾಮದಲ್ಲಿ ಮಾಹಿತಿ ಕಲೆ ಹಾಕಲಿದ್ದಾರೆ.
ಇಂದು ಸಂಜೆ ಫಿಲಂ ರಿಲೀಸ್​ ಮಾಡ್ತಾರಂತೆ ಜಾರಕಿಹೊಳಿ! ಅದು ಯಾರ ಸಿನಿಮಾ?

ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಜಾರಕಿಹೊಳಿ ಸ್ಪರ್ಧೆ: ನಾಮಪತ್ರ ಸಲ್ಲಿಕೆ ವೇಳೆ ಬಾರದಂತೆ ಡಿಕೆಶಿಗೆ ಸೂಚನೆ

ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ

‘ಸಿಡಿ ಲೇಡಿ’ ಹೆಸರಲ್ಲಿ ರಿಜಿಸ್ಟರ್ ಆಯ್ತು ಸಿನಿಮಾ ಟೈಟಲ್! ಸ್ಯಾಂಡಲ್​ವುಡ್​ನಲ್ಲಿ ವಿವಾದ ಎಬ್ಬಿಸಲಿದ್ಯಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 + 17 =
Remember me
