ಬೆಂಗಳೂರು:ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಅಶ್ಲೀಲ ಸಿಡಿ ವಿಚಾರವಾಗಿ ಯುವತಿಯ ಪೋಷಕರು ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಎಸ್​ಐಟಿ ವಿಚಾರಣೆ ಎದುರಿಸಿ ಹೊರ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯುವತಿಯ ಸಹೋದರ, ಡಿಕೆಶಿ ಅವರೇ ನನ್ನ ಅಕ್ಕನನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ನನ್ನ ಅಕ್ಕನನ್ನು ಮುಂದೆ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಡಿಕೆಶಿ ಅವರೇ ದುಡ್ಡು ಕೊಟ್ಟು ನನ್ನ ಅಕ್ಕನನ್ನು ಗೋವಾಕ್ಕೆ ಕಳಿಸಿದ್ದರು ಎಂದು ಆರೋಪಿಸಿದರು.
ಯುವತಿಯ ತಂದೆ ಪ್ರಕಾಶ್ ಮಾತನಾಡಿ, ನನ್ನ ಮಗಳಿಗೆ ಡಿಕೆಶಿ ಅವರಿಂದ ಬೆದರಿಕೆ ಇದೆ. ನಮಗೆ ಹಾಗೂ ನಮ್ಮ ಕುಟುಂಬಕ್ಕೆ ಬೆದರಿಕೆ ಇದೆ. ನಮ್ಮ ಮಗಳನ್ನು ತಂದು ಒಪ್ಪಿಸಿ. ಅವಳು ಎಲ್ಲಿದ್ದಾಳೆ ಎಂದು ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಆಡುಗೋಡಿ ಬಳಿ ಇರುವ ಎಸ್​ಐಟಿ ಟೆಕ್ನಿಕಲ್ ಕಚೇರಿಯಲ್ಲಿ ಯುವತಿಯ ತಂದೆ ಪ್ರಕಾಶ್ ಹಾಗೂ ತಾಯಿ ಮತ್ತು ಸಹೋದರನ್ನು ಸುಮಾರು ನಾಲ್ಕು ತಾಸು ತೀವ್ರ ವಿಚಾರಣೆಗೆ ಒಳಪಡಿಸಿದರು. ಡಿಸಿಪಿ ಅನುಚೇತ್, ರವಿಕುಮಾರ್​, ಶರಣಪ್ಪ ಅವರ ನೇತೃತ್ವದ ತಂಡ ವಿಚಾರಣೆಗೆ ಒಳಪಡಿಸಿ, ಸಂಜೆ 5 ಗಂಟೆಗೆ ವಿಚಾರಣೆ ಮುಗಿಸಿದೆ. ಪೋಷಕರ ಹೇಳಿಕೆಗಳನ್ನು ಲಿಖಿತವಾಗಿ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸಿಡಿ ಯುವತಿ ವಿಡಿಯೋ ಬಿಡುವುದನ್ನು ಬಿಟ್ಟು, ಪೊಲೀಸ್ ಎದುರು ಬರಲಿ: ಸತೀಶ್ ಜಾರಕಿಹೊಳಿ ಆಗ್ರಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
