ಬೆಂಗಳೂರು:ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ‘ಸಂತ್ರಸ್ತ’ ಯುವತಿ ಮತ್ತೆ ಎರಡನೇ ವಿಡಿಯೋ ಮೂಲಕ ಕಾಣಿಸಿಕೊಂಡಿದ್ದಾಳೆ. ನಾನು ಈಗಲೇ ಎಸ್​ಐಟಿ ಮುಂದೆ ಬರಲ್ಲ. ನನ್ನ ಅಪ್ಪ-ಅಮ್ಮನ ಸೇಫ್ಟಿ ಮುಖ್ಯ. ಅವರು ಸೇಫ್​ ಆಗಿದ್ದಾರೆ ಅಂತ ಗೊತ್ತಾದ ಮೇಲೆ ನಾನು ತನಿಖೆಗಾಗಿ ಪೊಲೀಸರ ಮುಂದೆ ಹಾಜರ್​ ಆಗ್ತೀನಿ ಎಂದು ಯುವತಿ ಹೇಳಿದ್ದಾಳೆ.
ನಾನು ಕಿಡ್ನ್ಯಾಪ್​ ಆಗಿದ್ದೇನೆ ಅಂತ ನನ್ನ ಅಪ್ಪ-ಅಮ್ಮ ಸ್ವ ಇಚ್ಛೆಯಿಂದ ಕಂಪ್ಲೇಂಟ್​ ಕೊಡೋಕೆ ಸಾಧ್ಯಾನೆ ಇಲ್ಲ. ನಾನು ತಪ್ಪೇ ಮಾಡಿಲ್ಲ ಅಂತ ನನ್ನ ಅಪ್ಪ-ಅಮ್ಮನಿಗೆ ಗೊತ್ತಿದೆ. ನನಗೆ ನ್ಯಾಯ ಸಿಗುತ್ತೆ ಎಂದು ಎರಡು ದಿನದಿಂದ ಅನ್ನಿಸುತ್ತಿದೆ. ನನ್ನ ಅಪ್ಪ-ಅಮ್ಮನನ್ನು ರಕ್ಷಿಸಿ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ರಮೇಶ್​ ಕುಮಾರ್​ ಮತ್ತು ಇನ್ನಿತರ ಮಹಿಳಾ ಸಂಘಟನೆಯವರಿಗೆ ಕೇಳಕೊಳ್ತೇನೆ ಎಂದು ಯುವತಿ ಪ್ರತಿಪಕ್ಷ ನಾಯಕರಿಗೆ ಮನವಿ ಮಾಡಿದ್ದಾಳೆ.
ನಾನು ಮಾ.12ರಂದು ಒಂದು ವಿಡಿಯೋ ಮಾಡಿ ಎಸ್​ಐಟಿ ಅವರಿಗೆ ತಲುಪಿಸಿದ್ದೆ. ಆದರೆ, ಆ ವಿಡಿಯೋವನ್ನು ರಮೇಶ್​ ಜಾರಕಿಹೊಳಿ ತರಾತುರಿಯಲ್ಲಿ ದೂರುಕೊಟ್ಟ ಅರ್ಧಗಂಟೆ ಬಳಿಕ ರಿಲೀಸ್​ ಮಾಡ್ತಾರೆ. ಇದನ್ನ ನೋಡಿದ್ರೆ ಗೊತ್ತಾಗುತ್ತೆ ಎಸ್​ಐಟಿ ಅವರು ಯಾರ ಪರ ಇದ್ದಾರೆ ಎಂದು ಎಸ್​ಐಟಿ ವಿರುದ್ಧವೇ ಸಿಡಿ ಲೇಡಿ ಗಂಭೀರ ಆರೋಪ ಮಾಡಿದ್ದಾಳೆ.
ಅಯ್ಯೋ, ಮಗಳೇ ಆ ಒಂದು ಮಾತಿಗೆ ಎಂಥ ಸಾವು ತಂದುಕೊಂಡವ್ವ…

ಹೊಸ ಕಾರಿನ ಪೂಜೆಗೆಂದು ಧರ್ಮಸ್ಥಳಕ್ಕೆ ಹೊರಟಿದ್ದವರ ಬಾಳಲ್ಲಿ ದುರಂತ! ಇಬ್ಬರ ಸಾವು, 6 ಜನರ ಸ್ಥಿತಿ ಗಂಭೀರ

ಲಾರಿ-ಬಸ್​ ನಡುವೆ ಭೀಕರ ಅಪಘಾತ: ಹೊತ್ತಿ ಉರಿದ ವಾಹನ, ಒಬ್ಬ ಸಜೀವ ದಹನ, ಖ್ಯಾತನಟಿ ಅಪಾಯದಿಂದ ಪಾರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − ten =
Remember me
