ಬೆಂಗಳೂರು:ಸಿಡಿ ಲೇಡಿಯದ್ದು ಎನ್ನಲ್ಲಾದ ಆಡಿಯೋ ಕ್ಲಿಪ್​ ವೈರಲ್​ ಆದ ಬೆನ್ನಲ್ಲೇ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿರುವ ಸಿಡಿ ಲೇಡಿ, ಮಾಜಿ ಸಚಿವ ರಮೇಶ್​ ಜಾರಕಿಹೊಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ತಂದೆ-ತಾಯಿಗೆ ಸೂಕ್ತ ರಕ್ಷಣೆಗೆ ಆಗ್ರಹಿಸಿದ್ದಾಳೆ.
ಬಿಡುಗಡೆಯಾಗಿರುವ ವಿಡಿಯೋದಲ್ಲಿ ಮಾತನಾಡಿರುವ ಆಕೆ, ನನಗೆ ಬದುಕಬೋಕೋ ಅಥವಾ ಸಾಯಬೇಕೋ ಒಂದು ಗೊತ್ತಾಗುತ್ತಿಲ್ಲ. ಯಾವುದೇ ಮಾಹಿತಿ ಸಿಕ್ಕರೂ ಅದರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು? ಎಂಬುದನ್ನು ಪರಿಶೀಲಿಸಿ, ಪ್ರಸಾರ ಮಾಡಬೇಕು. ಸಿಡಿ ಬಿಡುಗಡೆ ಆದ ದಿನ ನನಗೆ ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ಯಾರು ಇದನ್ನು ಮಾಡಿದ್ದು ಎಂಬ ಐಡಿಯಾ ಸಹ ಇರಲಿಲ್ಲ. ತುಂಬಾ ಭಯದಲ್ಲಿದ್ದೆ. ಈ ಸಂದರ್ಭದಲ್ಲಿ ಮಾಧ್ಯಮದಲ್ಲಿ ನನಗೆ ಪರಿಚಯವಾಗಿದ್ದ ನರೇಶ್​ ಎಂಬುವರಿಗೆ ಕರೆ ಮಾಡಿ, ನನ್ನ ಸಮಸ್ಯೆ ಹೇಳಿಕೊಂಡೆ. ನೀವು ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದ ಬಳಿಕ ಏನೆಲ್ಲಾ ಆಗಿದೆ ನೋಡಿ ಕೇಳಿಕೊಂಡೆ.
ಈ ವಿಚಾರದಲ್ಲಿ ನಾನು ಚಿಕ್ಕವನು. ಇದಕ್ಕೆಲ್ಲ ರಾಜಕೀಯ ಬೆಂಬಲ ಬೇಕಾಗುತ್ತದೆ. ನಾವು ಹೋಗಿ ದೊಡ್ಡ ದೊಡ್ಡ ನಾಯಕರ ಬಳಿ ಮಾತನಾಡೋಣ, ಸಿದ್ದರಾಮಯ್ಯ ಅಥವಾ ಡಿಕೆ ಶಿವಕುಮಾರ್​ ಬಳಿ ಮಾತನಾಡೋಣ, ನಿನಗೆ ನ್ಯಾಯ ಸಿಗುತ್ತದೆ ಯೋಚನೆ ಮಾಡಬೇಡ ಎಂದು ನರೇಶ್​ ಅವರು ಧೈರ್ಯ ಹೇಳಿದರು. ಬಳಿಕ ನಾನಿರುವ ಸ್ಥಳಕ್ಕೆ ಬಂದು ಡಿಕೆಶಿ ಮನೆ ಕರೆದೊಯ್ದರು. ಅಷ್ಟರಲ್ಲಿ ನಮ್ಮ ಮನೆಯಿಂದ ನನಗೆ ಸಾಕಷ್ಟು ಕರೆಗಳು ಬರುತ್ತಿದ್ದವು.
ನಮ್ಮ ಮನೆಯಲ್ಲಿ ಎಲ್ಲರೂ ಹೆದರಿಕೊಂಡಿದ್ದರು. ನಾನು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ. ಡಿಕೆಶಿ ಮನೆಗೆ ಹೋಗುತ್ತಿರುವ ಬಗ್ಗೆಯೂ ಹೇಳಿದೆ. ಆದರೆ, ಅಂದು ಡಿಕೆಶಿ ಅವರು ಸಿಗಲಿಲ್ಲ. ಅಂದು ನನ್ನ ಅಪ್ಪ-ಅಮ್ಮ ತುಂಬ ಹೆದರಿದ್ದರು. ಈಗ ಆಡಿಯೋ ಕ್ಲಿಪ್​ ಹೊರಬಂದಿರುವುದು ನೋಡಿದರೆ ನಮ್ಮ ತಂದೆ-ತಾಯಿಗೆ ಸುರಕ್ಷತೆ ಇಲ್ಲ ಎಂಬುದು ತಿಳಿಯುತ್ತಿದೆ. ನಾನು ಸೇಫ್​ ಆಗಿ ಇದ್ದೀನಿ. ನನ್ನನ್ನು ಯಾರು ಅಪಹರಿಸಿಲ್ಲ.
ನಾನು ಎಸ್​ಐಟಿ ಅವರಲ್ಲಿ ಕೇಳಿಕೊಳ್ಳುವುದೇನೆಂದರೆ, ನಾವು ರಕ್ಷಣೆ ಕೊಡ್ತೀವಿ ಎಂದು ಹೇಳ್ತಿದ್ದೀರಾ.. ಹೌದು ನೀವು ರಕ್ಷಣೆ ಕೊಡುತ್ತಿದ್ದೀರಾ ಆದರೆ, ನಮ್ಮ ತಂದೆ-ತಾಯಿ ಮತ್ತು ಇಬ್ಬರು ತಮ್ಮಂದಿರನ್ನು ಬೆಂಗಳೂರಿಗೆ ಕರೆ ತನ್ನಿ. 24 ದಿನದಿಂದ ನನಗೆ ತುಂಬಾ ಕಿರುಕುಳ ಆಗುತ್ತಿದೆ. ನಾನು ಏನೋ ಒಂದು ಹೇಳಿದರೆ, ಇನ್ನೇನೋ ಆಗುತ್ತೆ. ನನ್ನ ಮಾನ-ಮರ್ಯಾದೆ ಹೋಗಿದೆ. ನಾನೊರ್ವ ಸಂತ್ರಸ್ತೆ ಆಗಿರುವುದರಿಂದ ನನಗೆ ನೀವು ನ್ಯಾಯ ಕೊಡಿಸುತ್ತೀರಾ ಎಂದು ನಾನು ಭಾವಿಸಿದ್ದೇನೆ.
ಸರ್ಕಾರವನ್ನೇ ಬೀಳಿಸುತ್ತೇನೆ. ಎಷ್ಟು ದುಡ್ಡು ಖರ್ಚಾದರು ಸರಿ ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕುವವರು ನಮ್ಮ ಅಪ್ಪ-ಅಮ್ಮನನ್ನು ಸುಮ್ಮನೇ ಬಿಡುತ್ತಾರಾ? ನಾಳೆ ಏನು ಬೇಕಾದರೂ ನಡೆಯಬಹುದು. ನನ್ನನ್ನು ಸಾಯಿಸಬಹುದು. ಹೀಗಾಗಿ ನಮ್ಮ ಅಪ್ಪ-ಅಮ್ಮನನ್ನು ಬೆಂಗಳೂರಿಗೆ ಕರೆತಂದು ಇರಿಸಬೇಕು. ನಾನೇನು ಹೇಳಿಕೆ ಕೊಡಬೇಕೆಂದರೆ ಅಪ್ಪ-ಅಮ್ಮ, ನನ್ನ ಇಬ್ಬರು ತಮ್ಮಂದಿರು ಮತ್ತು ಅಜ್ಜಿ ನಮ್ಮ ಕಣ್ಣ ಮುಂದಿರಬೇಕು. ಅವರಿಗೆ ರಕ್ಷಣೆ ಇಲ್ಲ ಅನಿಸುತ್ತಿದೆ. ನನಗಿ ಕೊಡುತ್ತಿರುವ ಕಿರುಕುಳಕ್ಕೆ ಬದುಕಬೇಕಾ ಅಥವಾ ಸಾಯಬೇಕಾ ಅನಿಸುತ್ತಿದೆ. ರಮೇಶ್​ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯಬೇಕು ಅನಿಸುವಷ್ಟು ಟಾರ್ಚರ್​ ಆಗಿದೆ. ಎಲ್ಲ ಜನತೆಗೆ ನಾನು ಕೇಳಿಕೊಳ್ಳುವುದಿಷ್ಟೇ ನನಗೆ ನ್ಯಾಯ ಕೊಡಿಸಿ ಎಂದು ಸಿಡಿ ಲೇಡಿ ವಿಡಿಯೋದಲ್ಲಿ ಹೇಳಿದ್ದಾಳೆ.

ಮಹಾನಾಯಕನನ್ನು ಕೆಣಕಿದ ರಾಜ್ಯ ಬಿಜೆಪಿ: ‘ಕಾಂಗ್ರೆಸ್ ಕಚೇರಿಯಲ್ಲೇ ಷಡ್ಯಂತ್ರ ನಡೆದಿದೆಯೇ?’

ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

ಸರ್ಕಾರವನ್ನೇ ಬೀಳಿಸಿದ್ದೆ, ಸಿಡಿ ಯಾವ ಲೆಕ್ಕ? ನಾಳೆಯಿಂದ ನನ್ನ ಆಟ ಶುರು ಎಂದ ಜಾರಕಿಹೊಳಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:3 × one =
Remember me
