| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದ ನಗರ ಮತ್ತು ಪಟ್ಟಣಗಳ ಯೋಜಿತ ಬೆಳವಣಿಗೆ ಹಾಗೂ ಅಲ್ಲಿ ಹೂಡಿಕೆಗೆ ಪೂರಕವಾಗುವಂತೆ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)ಕೈಗೊಳ್ಳುವ ಸಂಬಂಧ ನೀಲಿನಕ್ಷೆ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕಾರ್ಯವನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಕ್ಕೂ ನಿರ್ಧರಿಸಿದೆ. ಯಾವುದೇ ನಗರ ಯೋಜಿತ ರೀತಿಯಲ್ಲಿ ಬೆಳೆಯಲು ಸಿಡಿಪಿ ಅಗತ್ಯ. ಇಲ್ಲದಿದ್ದರೆ ಅಡ್ಡಾದಿಡ್ಡಿಯಾಗಿ ಬೆಳವಣಿಗೆಯಾಗುತ್ತದೆ. ನಗರ ಮತ್ತು ಪಟ್ಟಣಗಳಲ್ಲಿ ಸರ್ಕಾರ ವಿವಿಧ ತೆರಿಗೆಗಳನ್ನು ವಸೂಲಿ ಮಾಡುತ್ತದೆ. ಅದರ ಸದ್ಬಳಕೆ ಮೂಲಕ ಶಹರಗಳ ಅಭಿವೃದ್ಧಿಯಾಗಬೇಕು. ಅದಕ್ಕೊಂದು ಚೌಕಟ್ಟು ಇಲ್ಲದಿದ್ದರೆ ದುರುಪಯೋಗಗಳಾಗುತ್ತದೆ. ಈ ಕಾರಣಕ್ಕಾಗಿ ಸ್ಪಷ್ಟ ಗುರಿಗಳೊಂದಿಗೆ ಸಿಡಿಪಿ ಸಿದ್ಧಪಡಿಸಿ ಅನುಷ್ಠಾನಕ್ಕೆ ತೀರ್ವನಿಸಲಾಗಿದೆ.
ಸ್ಥಳೀಯ ಸಂಸ್ಥೆಗಳಿಗೆ ಸೂಚನೆ:ನಗರ ಯೋಜನೆ ಕಾಯ್ದೆ ಪ್ರಕಾರ ಪ್ರತಿ 10 ವರ್ಷಕ್ಕೊಮ್ಮೆ ಸಿಡಿಪಿ ಸಿದ್ಧಪಡಿಸಬೇಕು. ರಾಜ್ಯದಲ್ಲಿ ಸಿಡಿಪಿ ಮಾಡಿದ್ದು 2008ರಲ್ಲಿ. ಅದರ ಪ್ರಕಾರ 2018ರಲ್ಲಿ ಮತ್ತೊಮ್ಮೆ ಸಿಡಿಪಿ ಸಿದ್ಧವಾಗಬೇಕಾಗಿತ್ತು. ಆದರೆ ಹಿಂದಿನ ಸರ್ಕಾರಗಳು ಮೂರು ವರ್ಷದಿಂದ ಈ ಕೆಲಸ ಮಾಡಿಲ್ಲ. ಆದ್ದರಿಂದ ಈಗ ಸಿಡಿಪಿ ಸಿದ್ಧಪಡಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ಸಿಡಿಪಿ ಏಕೆ ಬೇಕು?:ನಗರೀಕರಣದಿಂದಾಗಿ ನಗರ ಮತ್ತು ಪಟ್ಟಣಗಳು ನಿರಂತರವಾಗಿ ಬೆಳೆಯುತ್ತಿರುತ್ತವೆ. ಬೆಳವಣಿಗೆಯ ಮೇಲೆ ನಿಯಂತ್ರಣ ಹಾಕಿ ಹಸಿರು ವಲಯ, ಕೆಂಪು ವಲಯ, ಕಿತ್ತಳೆ ವಲಯ ವಿಸ್ತರಿಸುವ, ಭೂಮಿಯ ಅಕ್ರಮ ಬಳಕೆ ತಪ್ಪಿಸುವುದು, ಕೈಗಾರಿಕೆಗಳಿಂದ ಮಾಲಿನ್ಯ ಸೇರಿದಂತೆ ಯಾವುದೇ ರೀತಿಯ ತೊಂದರೆಗಳಾಗದಂತೆ ಎಚ್ಚರವಹಿಸಬೇಕಾಗಿದೆ.
ಇದರ ಜತೆಗೆ ಹಸಿರು ಮತ್ತು ಕೆಂಪು ವಲಯಗಳನ್ನು ಕಾಯ್ದುಕೊಂಡು ಸಮಗ್ರ ಅಭಿವೃದ್ದಿ ಸಾಧಿಸುವುದಕ್ಕೆ ಯೋಜನೆಯೊಂದರ ಅಗತ್ಯ ವಿರುತ್ತದೆ. ಸಿಡಿಪಿ ಆಧಾರದಲ್ಲಿ ಮಾಸ್ಟರ್ ಪ್ಲಾ್ಯನ್ ಸಹ ಸಿದ್ಧಪಡಿಸಲಾಗುತ್ತದೆ. ಸಿಡಿಪಿ ಗುರಿಗಳು ಐದು ವರ್ಷದಲ್ಲಿ ಅನುಷ್ಠಾನವಾಗಬೇಕಾಗುತ್ತದೆ. ಆದರೆ ಮಾಸ್ಟರ್ ಪ್ಲಾ್ಯನ್ ಮುಂದಿನ ಇಪ್ಪತ್ತು ವರ್ಷಗಳಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಪರಿಕಲ್ಪನೆಯನ್ನು ಹೊಂದಿರುತ್ತದೆ ಎಂದು ಮೂಲಗಳು ಹೇಳುತ್ತವೆ.
ಜಿಐಎಸ್ ಸೌಲಭ್ಯ ಬಳಕೆ:ಸಿಡಿಪಿ ಸಿದ್ಧಪಡಿಸಿ ಪ್ರಾಥಮಿಕ ಒಪ್ಪಿಗೆ ಪಡೆದ ನಂತರ ಆಕ್ಷೇಪಣೆ ಗಳಿದ್ದರೆ ಸರಿಪಡಿಸಿಕೊಂಡು ಅಂತಿಮ ಒಪ್ಪಿಗೆ ಪಡೆದು ಜಾರಿಮಾಡ ಬೇಕಾಗುತ್ತದೆ. ಆದ್ದರಿಂದ ಆದಷ್ಟು ಬೇಗ ಈ ಕಾರ್ಯ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಜಿಐಎಸ್ ಸೌಲಭ್ಯ ಬಳಸಲಾಗುತ್ತದೆ.
ಹಸಿರು ವಲಯದಲ್ಲಿ ಕೃಷಿ ಭೂಮಿ ಇರುತ್ತದೆ. ಪರಿಸರ ಮಾಲಿನ್ಯವಾಗದಂತೆ ಎಚ್ಚರವಹಿಸುವ ಉದ್ದೇಶದಿಂದ ಹಸಿರು ವಲಯವನ್ನು ಉಳಿಸಿಕೊಳ್ಳಲೇಬೇಕು. ಕೆಂಪು ವಲಯದಲ್ಲಿ ಯಾವುದೇ ಚಟುವಟಿಕೆ ಗಳನ್ನು ನಡೆಸುವುದಕ್ಕೆ ನಿರ್ಬಂಧವಿರುತ್ತದೆ. ನಗರ ಬೆಳೆದಂತೆ ಈ ವಲಯಗಳನ್ನು ವಿಸ್ತರಣೆ ಮಾಡುವುದು ಅನಿವಾರ್ಯವಾಗುತ್ತದೆ.
ಸಿಡಿಪಿಯ ಉದ್ದೇಶ
ಸಿದ್ಧತೆಗೆ ಸೆಪ್ಟೆಂಬರ್ ಗಡುವು
ನಗರ ಪಾಲಿಕೆಗಳು, ನಗರಸಭೆಗಳು, ಪುರಸಭೆಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು ಸಿಡಿಪಿಯನ್ನು ಆಯಾ ನಗರ ಮತ್ತು ಪಟ್ಟಣಗಳ ಬೆಳವಣಿಗೆಗೆ ಪೂರಕವಾಗಿ ಸೆಪ್ಟೆಂಬರ್ ಅಂತ್ಯದೊಳಗೆ ಸಿದ್ಧಪಡಿಸಬೇಕೆಂದು ಸರ್ಕಾರ ಗಡುವು ನೀಡಿದೆ. ಗಡುವು ಮೀರಿದರೆ ಅದಕ್ಕೆ ಕಾರಣವಾಗುವ ಅಧಿಕಾರಿಗಳನ್ನು ಅಮಾನತು ಮಾಡುವಂತಹ ಕಾನೂನು ಕ್ರಮ ಕೈಗೊಳ್ಳುವುದಕ್ಕೂ ನಿರ್ಧರಿಸಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.
ಇಂದು ವಿಶೇಷ ಸಭೆ
ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಸಿಡಿಪಿಯನ್ನು ಸಿದ್ಧಪಡಿಸುವುದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಅವರು ಗುರುವಾರ ವಿಶೇಷ ಸಭೆಯನ್ನು ನಡೆಸಲಿದ್ದಾರೆ. ಹೊಸ ಸಿಡಿಪಿ ರಚನೆ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + fifteen =
Remember me
