ಬೆಂಗಳೂರು:ಜಗತ್ತಿನಾದ್ಯಂತ ಜೂ.21ರಂದು ಯೋಗ ದಿನ ಆಚರಿಸುತ್ತಿದ್ದು, ಈ ಬಾರಿ ಎಲ್ಲರೂ ಮನೆಯಲ್ಲೆ ಇದ್ದು ಆಚರಣೆ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕಿಯ ಶಿಣ ಸಚಿವ ಡಾ.ಕೆ.ಸುಧಾಕರ್​ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸೋಮವಾರ ಯೋಗ ದಿನವನ್ನು ಆನ್​ಲೈನ್​ನಲ್ಲೆ ಆಚರಿಸಲಾಗುತ್ತಿದೆ. “ಬಿ ವಿತ್​ ಯೋಗ ಬಿ ಅಟ್​ ಹೋಮ್​’ ಮತ್ತು “ಯೋಗ ಫಾರ್​ ವೆಲ್​ನೆಸ್​’ ೂಷವಾಕ್ಯದಡಿ ಆಚರಣೆ ಮಾಡಲಾಗುತ್ತ್ತಿದೆ. ಯಾರೂ ಗುಂಪುಗೂಡಿ ಆಚರಿಸಬಾರದು. ಮುಖ್ಯಮಂತ್ರಿಗಳು ಅಧಿಕೃತ ನಿವಾಸದಲ್ಲೆ ಯೋಗ ಮಾಡಲಿದ್ದು, ನಾನು ಕೂಡ ಪಾಲ್ಗೊಳ್ಳುತ್ತೇನೆ. ಎಲ್ಲರೂ ಮುಂಜಾನೆ 6 ಗಂಟೆಗೆ ಮನೆಯಲ್ಲೆ ಯೋಗ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ ಎಂದು ಕೋರಿದರು. ಎಸ್​&ವ್ಯಾಸ ಸಂಸ್ಥೆ ಗೌರವಾಧ್ಯ ನಾಗೇಂದ್ರ, ಸದ್ಗುರು, ಶ್ರೀ ರವಿಶಂಕರ್​ ಗುರೂಜಿ, ಶ್ರೀ ವಚನಾನಂದ ಸ್ವಾಮೀಜಿ ಯೋಗಾಭ್ಯಾಸದ ವಿಡಿಯೋ ಹಂಚಿಕೊಳ್ಳಲಾಗುವುದು. ಆಯುಷ್​ನ ಎಲ್ಲ ಸಂಸ್ಥೆಗಳ ವಿದ್ಯಾರ್ಥಿಗಳು ಯೋಗ ಮಾಡಲು ಕೋರಲಾಗಿದೆ ಎಂದು ತಿಳಿಸಿದರು.
ಲಸಿಕಾ ಮೇಳಕ್ಕೆ ಗುರಿಜೂ.21ರಂದು ಕೋವಿಡ್​ ಲಸಿಕೆ ಮೇಳಕ್ಕೆ ಚಾಲನೆ ದೊರೆಯಲಿದೆ. 18&44 ವರ್ಷದವರಿಗೆ, 45 ವರ್ಷ ಮೇಲ್ಪಟ್ಟವರಿಗೆ, ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು. 14 ಲ ಕೋವಿಶೀಲ್ಡ್​ ಡೋಸ್​ ದಾಸ್ತಾನು ಇದ್ದು, ಸೋಮವಾರ 5ರಿಂದ 7 ಲ ಡೋಸ್​ ನೀಡುವ ಗುರಿ ಇರಿಸಲಾಗಿದೆ. ಇದಕ್ಕೆ ಜನರ ಸಹಕಾರ ಬೇಕಿದೆ. ಈವರೆಗೆ 1.80 ಕೋಟಿ ಲಸಿಕೆ ನೀಡಲಾಗಿದೆ. ಅಂದರೆ ದೇಶದಲ್ಲಿ ನೀಡಿದ 15 ಲಸಿಕೆಯಲ್ಲಿ ಒಂದು ರಾಜ್ಯದ್ದು ಎಂದು ಡಾ.ಕೆ.ಸುಧಾಕರ್​ ವಿವರಿಸಿದರು.
ಸಚಿವರು ಕೊಟ್ಟ ಇತರ ಮಾಹಿತಿ? ಹೊಸ ವೈರಾಣು ಅಧ್ಯಯನಕ್ಕೆ ಜಿನೋಮಿಕ್ಸ್​ ಸಮಿತಿ ರಚನೆ. ? ಪ್ರತಿ ಜಿಲ್ಲಾ ಮಟ್ಟದಲ್ಲಿ ತರ ಸಮಿತಿ ರಚನೆ. ಈ ಸಮಿತಿ ನೀಡುವ ಮಾಹಿತಿ ಮೂಲಕ 3 ನೇ ಅಲೆ ನಿಯಂತ್ರಣ.? ಡಾ.ದೇವಿಪ್ರಸಾದ್​ ಶೆಟ್ಟಿ ಸಮಿತಿ 3ನೇ ಅಲೆ ಸಿದ್ಧತೆ ಕುರಿತು ಪ್ರಾಥಮಿಕ ವರದಿ ನೀಡಿದ್ದು, ಅದನ್ನು ಸಿಎಂಗೆ ತಲುಪಿಸಲಾಗುವುದು. ಅಂತಿಮ ವರದಿ ಬಂದ ಬಳಿಕ 45 ದಿನಗಳಲ್ಲಿ ಕಾರ್ಯರೂಪಕ್ಕೆ ಚಿಂತನೆ.? ಡೆಲ್ಟಾ ವೈರಾಣು ವೇಗವಾಗಿ ಹರಡುತ್ತಿದೆ. ಇದಕ್ಕಾಗಿ ಡಿಸೆಂಬರ್​ವರೆಗೂ ನಿತ್ಯ ಒಂದೂವರೆ ಲ ಪರೀೆ ಮಾಡಲು ಸೂಚನೆ.? ಕೋವಿಡ್​ ಎರಡು ಡೋಸ್​ ಲಸಿಕೆ ಪಡೆದ ಶೇ.99.9 ಮಂದಿಗೆ ಸೋಂಕು ತಗುಲಿಲ್ಲ. ಸೋಂಕು ಬಂದರೂ ತೀವ್ರ ಸಮಸ್ಯೆ ಆಗಿಲ್ಲ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
