ಬೆಂಗಳೂರು:18ನೇ ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಕರ್ನಾಟಕದ 14 ಲೋಕಸಭಾ ಕ್ಷೇತ್ರದಲ್ಲೂ ಬೆಳಗ್ಗೆಯಿಂದಲೇ ಜನರು ಸಾಲಿನಲ್ಲಿ ನಿಂತು ಮತದಾನಕ್ಕೆ ಮುಂದಾಗಿದ್ದಾರೆ. ಮತದಾನ ದಿನದಂದು ಕೆಲವು ಮದುವೆಗಳು ಜರುಗಿವೆ. ನವ ದಂಪತಿಗಳು ಮದುವೆ ಮಂಟಪದಿಂದ ನೇರವಾಗಿ ಬಂದು ಮತ ಚಲಾಯಿಸಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನವದಂಪತಿಗಳಾದ ಮೇಘನಾ ಬಿ.ಬೈರೇಗೌಡ ಹಾಗೂ ಪಿ. ಅಕ್ಷಯ್ ರಾಜ್ ಅವರು ಮತ ಕ್ಷೇತ್ರಕ್ಕೆ ಬಂದು ನಗರದ ಜೂನಿಯರ್ ಕಾಲೇಜ್ ಮತ್ತು ಎಂ.ಜಿ. ರಸ್ತೆಯಲ್ಲಿನ ಪಿಡಬ್ಲ್ಯೂಡಿ ಕಚೇರಿಯ ಬೂತ್ ನಲ್ಲಿ ಮತದಾನ ಮಾಡಿದ್ದಾರೆ.

ಚಿತ್ರದುರ್ಗ ತಾಲೂಕಿನ ವಿಜಾಪುರ ಗ್ರಾಮದ ನವದಂಪತಿಗಳಾದ ಅರುಣ್ ಮತ್ತು ಕಾವ್ಯಾ ಅವರು ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದಲ್ಲಿ ತೀರ್ಥೇಶ್-ವಿನುತ ಮದುವೆ ಮಂಟಪಕ್ಕೆ ಬರುವ ಮೊದಲು ಕೊಡಗಿನಲ್ಲಿ ವಧು-ವರ ಮತಚಲಾವಣೆ ಮಾಡಿದ್ದಾರೆ.
ಚಿತ್ರದುರ್ಗ ತಾಲೂಕು ಭೀಮಸಮುದ್ರದ ನವ ದಂಪತಿಗಳಾದ ರಂಗಸ್ವಾಮಿ ಹಾಗೂ ಅಂಬಿಕಾ ಮತಗಟ್ಟೆ ಸಂಖ್ಯೆ 268ಕ್ಕೆ ಆಗಮಿಸಿ ಮತದಾನ ಮಾಡಿದರು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಟಪ್ಪನಹಟ್ಟಿ ಗ್ರಾಮದ ನವದಂಪತಿಗಳಾದ ಅಶೋಕ್ – ಸುಶ್ಮಿತ ಅವರು ಕಾಟಪ್ಪನಹಟ್ಟಿಯ ಮತಗಟ್ಟೆ ಸಂಖ್ಯೆ 78ರಲ್ಲಿ ಮತದಾನ ಮಾಡಿದರು.
ಚೆನ್ನೈ: ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆ ನಂತರ ಸಾವಿಗೀಡಾದ 26 ವರ್ಷದ ಯುವಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 10 =
Remember me
