ಬೆಂಗಳೂರು: ಲ್ಯಾಂಡರ್ ‘ವಿಕ್ರಮ್’ ಚಂದ್ರನ ಅಂಗಳದ ಮೇಲೆ ಅಡಿ ಇಡುವ ‘ಸಾಫ್ಟ್​​ ಲ್ಯಾಂಡಿಂಗ್ ಪ್ರಕ್ರಿಯೆ’ ಸಂಜೆ 4.54ರ ವೇಳೆ ಇಸ್ರೋ ವಿಜ್ಞಾನಿಗಳು ಮೌನಕ್ಕೆ ಶರಣಾಗಿ ಕರ್ತವ್ಯದತ್ತ ದೃಷ್ಟಿ ನೆಟ್ಟಿದ್ದರು. ಕ್ಷಣ ಕ್ಷಣಕ್ಕೂ ಡಾಟಾ ಸ್ವೀಕಾರ ಲಕದಲ್ಲಿ ಲ್ಯಾಂಡರ್ ಚಲನೆ ನಿರ್ದಿಷ್ಟ ಹಾದಿಯಲ್ಲಿ ಚಲಿಸುತ್ತಾ, ಕೊನೆಗೆ ಸಂಜೆ 6.04ರ ವೇಳೆ ಯಶಸ್ವಿ ಲ್ಯಾಂಡಿಂಗ್ ಆಗುತ್ತಿದ್ದಂತೆ ಇಸ್ರೋ ವಿಜ್ಞಾನಿಗಳು ಒಮ್ಮಲೇ ಸಂಭ್ರಮೋಲ್ಲಾಸದಲ್ಲಿ ತೇಲಾಡಿದರು.
ಇದು ಬುಧವಾರ ಇಸ್ರೋ ಟೆಲಿಮೆಟ್ರಿಕ್ ಟ್ರ್ಯಾಕಿಂಗ್ ಆ್ಯಂಡ್ ಕಮಾಂಡ್ ಸೆಂಟರ್‌ನಲ್ಲಿ (ಐ-ಸ್ಟ್ರಾಕ್) ಚಂದ್ರಯಾನ-3ರ ಲ್ಯಾಂಡರ್ ಮಾಡ್ಯೂಲ್ ಮೂಲಕ ರೋವರ್ ಪ್ರಜ್ಞಾನ್ ಒಳಗೊಂಡಿರುವ ಲ್ಯಾಂಡರ್ ‘ವಿಕ್ರಮ್’ ಚಂದ್ರನ ದಕ್ಷಿಣ ಧೃವ ಪ್ರದೇಶವನ್ನು ಸ್ಪರ್ಶಿಸಿದಾಗ ವಿಜ್ಞಾನಿಗಳು ಹಾಗೂ ಪರಿಣಿತರ ಹರ್ಷೋದ್ಘಾರದ ಸವಿ ಕ್ಷಣದ ಝಲಕ್ ಹೀಗಿತ್ತು. ಕೊನೆಯ ಒಂದು ಗಂಟೆ ಕ್ಲಿಷ್ಟ ಹಂತ ದಾಟಿದರಷ್ಟೇ ಚಮದ್ರಯಾನದ ಯಶಸ್ಸು ಸಾಧ್ಯ ಎಂಬ ಮಾತುಗಳು ಅಲ್ಲಿ ಕೇಳಿಬಂದಿತ್ತು. ಅದಕ್ಕಾಗಿ ವಿಜ್ಞಾನಿಗಳು ಸಾಕಷ್ಟು ಎಚ್ಚರಿಕೆಯಿಂದ ಲ್ಯಾಂಡರ್ ವಿಕ್ರಮ್‌ಗೆ ಸಂಕೇತಗಳನ್ನು ರವಾನಿಸಿ ಪ್ರತಿಸ್ಪಂದನಾ ಮಾಹಿತಿಯತ್ತ ದೃಷ್ಟಿ ನೆಟ್ಟಿದ್ದರು. ಕೊನೆಗೆ ನೂರಾರು ವಿಜ್ಞಾನಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಲ ಸಿಕ್ಕಾಗ ಅಕ್ಷರಶ: ಅವರೆಲ್ಲರೂ ಕುಣಿದಾಡಿದರು.
ಯಶಸ್ವಿ ಲ್ಯಾಂಡಿಂಗ್ ಆಗುತ್ತಿದ್ದಂತೆ ಐ-ಸ್ಟ್ರಾಕ್ ಕೇಂದ್ರದಲ್ಲಿದ್ದವರೆಲ್ಲರೂ ಭಾರೀ ಚಪ್ಪಾಳೆ ತಟ್ಟಿ ಪರಸ್ಪರ ಶುಭಾಶಯಗಳನ್ನು ಹಂಚಿಕೊಂಡರು. ಅದರಲ್ಲೂ ಕೊನೆಯ ಒಂದು ನಿಮಿಷ ಇದ್ದಾಗಲೇ ಯಶಸ್ಸಿನ ಸುಳಿವರಿತ ವಿಜ್ಞಾನಿಗಳ ಮೊಗದಲ್ಲಿ ಚಂದ್ರ ಅಂಗಳ ಮುಟ್ಟಿದ ಸಂತಸ ಹೊರಹೊಮ್ಮಿತು. ಮೊದಲಿಗೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರು ವಿಜ್ಞಾನಿಗಳನ್ನು ಬಹು ಅಕ್ಕರೆಯಿಂದ ಅಭಿನಂದಿಸಿದರು. ‘ಈ ಕ್ಷಣಕ್ಕಾಗಿ ಕಾಯುತ್ತಿದ್ದೆವು’ ಎಂಬ ಉದ್ಗಾರದೊಂದಿಗೆ ಮಾತು ಆರಂಭಿಸಿದ ಅವರು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ. ಚಂದ್ರನ ದಕ್ಷಿಣ ಧೃವ ತಲುಪಿದ ಪ್ರಥಮ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದ್ದಾಗಿದೆ. ನಮ್ಮ ಮುಂದಿನ ನಿಲ್ದಾಣ ‘ಆದಿತ್ಯ ಎಲ್-1’ ಎಂದು ಹೇಳಿ ಭವಿಷ್ಯದಲ್ಲಿ ಇಸ್ರೋ ಇನ್ನಷ್ಟು ಸಾಧನೆ ಮಾಡಲಿದೆ. ಈ ಐತಿಹಾಸಿಕ ಕಾರ್ಯಕ್ಕೆ ಸಾಥ್ ನೀಡಿದ ಎಲ್ಲ ಒಡನಾಡಿ ಹಾಗೂ ಇಸ್ರೋ ಸಮಸ್ತ ಅಧಿಕಾರಿ, ಸಿಬ್ಬಂದಿಗೆ ಕೃತಜ್ಞತೆ ಅರ್ಪಿಸಿದರು.
ಯೋಜನೆ ಸೂತ್ರಧಾರರಿಂದ ಮೆಚ್ಚುಗೆ:
ಚಂದ್ರಯಾನ-3 ಯೋಜನೆಯ ಮುಖ್ಯಸ್ಥರು ಸೇರಿದಂತೆ ವಿವಿಧ ವಿಭಾಗಗಳ ಪ್ರಮುಖರು ಮಾತನಾಡಿ ತಮ್ಮ ಶ್ರಮಕ್ಕೆ ತಕ್ಕ ಪ್ರತಿಲ ಸಿಕ್ಕಿದೆ. ಇದು ಸಂಘಟಿತ ಪ್ರಯತ್ನದ ದೊಡ್ಡ ಸಾಧನೆಯಾಗಿದೆ ಎಂದು ಬಣ್ಣಿಸಿದರು. ಇದರ ಬೆನ್ನಲ್ಲೇ ಇಸ್ರೋ ಸಿಬ್ಬಂದಿ ಸಹಿ ಹಂಚಿ ಸಂಭ್ರಮಿಸಿದರು.
ಯೋಜನಾ ಕಾರ್ಯಚರಣಾ ನಿದೇರ್ಶಕ ಪಿ. ವೀರ ಮುತ್ತುವೇಲ್, ಮಿಷನ್ ನಿರ್ದೇಶಕ ಶ್ರೀಕಾಂತ್, ಯು.ಆರ್.ರಾವ್ ಉಪಗ್ರಹ ಕೇಂದ್ರದ ಮುಖ್ಯಸ್ಥ ಎಂ.ಶಂಕರನ್, ಕಲ್ಪನಾ, ರಿತು ಕರಿದಾಳ್, ಎಸ್.ಉನ್ನಿಕೃಷ್ಣನ್, ಎ.ರಾಜರಂಜನ್ ಇದ್ದರು. ಯೋಜನಾ ತಂಡದ ಮಾರ್ಗದರ್ಶಕ, ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ಕುಮಾರ್, ಹಿರಿಯ ವಿಜ್ಞಾನಿಗಳಾದ ಕೋಟೇಶ್ವರ ರಾವ್, ಕಮಲನಾಥ್ ಕೂಡ ಹಾಜರಿದ್ದರು.
ಅಯ್ಯಪ್ಪಸ್ವಾಮಿ ಮೊರೆ ಹೋದ ಇಸ್ರೋ ಅಧ್ಯಕ್ಷ!
ಚಂದ್ರಯಾನ-3ರ ಲ್ಯಾಂಡರ್ ವಿಕ್ರಮ್ ಸ್‌ಟಾ ಲ್ಯಾಂಡಿಂಗ್‌ಗಾಗಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅಯ್ಯಪ್ಪಸ್ವಾಮಿ ಮೊರೆಹೋದರು. ಜಾಲಹಳ್ಳಿ ಕ್ರಾಸ್‌ನ ಸುಬ್ರತೋ ಬ್ಯಾನರ್ಜಿ ರಸ್ತೆಯಲ್ಲಿ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಂಗಳವಾರ ಸಂಜೆ ತೆರಳಿದ್ದ ಸೋಮನಾಥ್ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಚಂದ್ರಯಾನ-3ರ ಗಗನೌಕೆ ಉಡಾವಣೆ ಮುನ್ನ ಇಸ್ರೋ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಚಂದ್ರಯಾನದ ಪ್ರತಿಕೃತಿಯನ್ನು ತೆಗೆದುಕೊಂಡು ಹೋಗಿ ವಿಶೇಷ ಪೂಜೆ ಮಾಡಿಸಿಕೊಂಡು ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಇಸ್ರೋ ಅಧ್ಯಕ್ಷರ ಹೆಸರಲ್ಲೇ ಚಂದ್ರ !
ಚಂದ್ರಯಾನ-3ರ ಯಶಸ್ಸಿನಲ್ಲಿ ಮುಳುಗಿರುವ ಇಸ್ರೋ ಅಧ್ಯಕ್ಷ ಸೋಮನಾಥ್ ಅವರ ಹೆಸರಿನಲ್ಲೇ ಚಂದ್ರ ಇದ್ದಾನೆ. ಚಂದ್ರನಿಗೆ ಹಲವು ಹೆಸರು ಇದ್ದು, ಅವುಗಳಲ್ಲಿ ‘ಸೋಮ’ ಕೂಡ ಒಂದೆನಿಸಿದೆ. ಇದು ಇಸ್ರೋ ಅಧ್ಯಕ್ಷರಿಗೆ ಚಂದ್ರಯಾನದ ಯಶಸ್ಸಿನ ಇನ್ನೊಂದು ಕೋಡು ಮೂಡಿಸಿದೆ.
ಪೀಣ್ಯದಲ್ಲಿ ಪೊಲೀಸ್ ಸರ್ಪಗಾವಲು:
ಚಂದ್ರಯಾನದ ಲ್ಯಾಂಡರ್ ವಿಕ್ರಮ್ ಸ್‌ಟಾ ಲ್ಯಾಂಡಿಂಗ್ ಕಾರ್ಯಾಚರಣೆ ನಡೆಸುವ ಪೀಣ್ಯದ ಇಸ್ರೋ ಟೆಲಿಮೆಟ್ರಿಕ್ ಟ್ರ್ಯಾಕಿಂಗ್ ಆ್ಯಂಡ್ ಕಮಾಂಡ್ ಸೆಂಟರ್ (ಐ-ಸ್ಟ್ರಾಕ್) ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಜಾಲಹಳ್ಳಿ ಕ್ರಾಸ್, ಪೀಣ್ಯ ಕೈಗಾರಿಕೆ ಪ್ರದೇಶ, ನೆಲಗೆದರನಹಳ್ಳಿ ಸುತ್ತಮುತ್ತ ದೊಡ್ಡ ಸಂಖ್ಯೆಯಲ್ಲಿ ಮಫ್ತಿ ಪೊಲೀಸರು ಪಹರೆ ನಡೆಸಿದರು. ಈ ಪ್ರದೇಶದಲ್ಲಿ ಸಂಚಾರದ ಮೇಲೂ ಟ್ರಾಫಿಕ್ ಪೊಲೀಸ್ ವಿಭಾಗ ನಿಗಾ ಇಟ್ಟಿತ್ತು.
40 ದಿನಗಳ ಕಾಲ ಇಸ್ರೋದ ಎಲ್ಲರ ಸತತ ಪರಿಶ್ರಮ ಸ್‌ಟಾ ಲ್ಯಾಂಡಿಂಗ್ ಮೂಲಕ ಯಶಸ್ಸಿ ಕಾಣಲಾಗಿದೆ. ಈ ಪ್ರಕ್ರಿಯೆಯಲ್ಲಿ ವಿಶ್ವದ 4ನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದ್ದರೂ, ದಕ್ಷಿಣ ಧೃವ ಮುಟ್ಟಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ನಮ್ಮ ಹೆಚ್ಚಿನ ಖುಷಿ ನೀಡಿದೆ. ಚಂದ್ರಯಾನ ಯೋಜನೆಯಲ್ಲಿ ದುಡಿದಿರುವ ಎಲ್ಲರಿಗೂ ಕೃತಜ್ಞತೆಗಳು.– ಶ್ರೀಕಾಂತ್, ಮಿಷನ್ ನಿರ್ದೇಶಕ
ಚಂದ್ರಯಾನ-3ರ ಲ್ಯಾಂಡರ್ ವಿಕ್ರಮ್ ಸ್‌ಟಾ ಲ್ಯಾಂಡಿಂಗ್ ಸಕ್ಸಸ್ ಭವಿಷ್ಯದಲ್ಲಿ ಚಂದ್ರನಲ್ಲಿಗೆ ಮಾನವಸಹಿತ ಯೋಜನೆ ಕೈಗೊಳ್ಳಲು ಪ್ರೇರಣೆ ನೀಡಿದೆ. ಜತೆಗೆ ಶುಕ್ರ ಹಾಗೂ ಇನ್ನಿತರ ಗ್ರಹಗಳ ಅನ್ವೇಷಣೆಗೆ ಇಸ್ರೋ ದೃಷ್ಟಿ ಹರಿಸಿದೆ. ಹಾಲಿ ಯಶಸ್ಸು ನಮ್ಮ ಮೇಲೆ ಹೆಚ್ಚಿನ ಹೊಣೆಗಾರಿಕೆಯನ್ನು ವಹಿಸಿದಂತಾಗಿದೆ. ಸಂಸ್ಥೆಯ ಎಲ್ಲ ವಿಜ್ಞಾನಿಗಳು ಹಾಗೂ ಇತರ ವಿಭಾಗಗಳ ಪ್ರತಿಯೊಬ್ಬರ ಪರಿಶ್ರಮದಿಂದ ಯಶಸ್ಸು ಸಿಕ್ಕಿದೆ.– ಎಂ.ಶಂಕರನ್, ಯು.ಆರ್.ರಾವ್ ಉಪಗ್ರಹ ಕೇಂದ್ರದ ಮುಖ್ಯಸ್ಥ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + sixteen =
Remember me
