ರಾಯಚೂರು:ಕೋವಿಡ್​ ಕರಿಛಾಯೆ ನಡುವೆಯೂ ಸಾಂಪ್ರದಾಯಿಕ ಮಣ್ಣೆತ್ತಿನ ಅಮಾವಾಸ್ಯೆ ಅದ್ದೂರಿಯಾಗಿಯೇ ನಡೆಯುತ್ತಿದ್ದು, ಮಣ್ಣೆತ್ತಿನ ಖರೀದಿ ಭರಾಟೆ ಕೂಡ ಜೋರಾಗಿದೆ. ಇಂದು ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸಂಭ್ರಮ ಮೂಡಿದ್ದು, ಅದರಲ್ಲೂ ರಾಯಚೂರು ಜಿಲ್ಲೆಯಲ್ಲಿ ಮಣ್ಣೆತ್ತಿನ ಖರೀದಿ ಚೆನ್ನಾಗಿಯೇ ನಡೆದಿದೆ.
ಭಾರತೀಯ ಸಂಸ್ಕೃತಿಯಲ್ಲಿನ ವಿಶೇಷ ಹಬ್ಬವಾಗಿರುವ ಮಣ್ಣೆತ್ತಿನ ಅಮಾವಾಸ್ಯೆಗೆ ಮಹತ್ವವಿದೆ. ಅದರಲ್ಲೂ ಕೆಲವೇ ದಿನಗಳ ಹಿಂದೆ ಅನ್​ಲಾಕ್​-3.0 ನಡೆದಿರುವುದರಿಂದ ಬಿಗಿಯ ವಾತಾವರಣ ಮರೆಯಾಗಿರುವುದು ಕೂಡ ಜನರು ಹೀಗೆ ಮುಕ್ತವಾಗಿ ಆಚರಣೆಯಲ್ಲಿ ತೊಡಗಲು ಸಾಧ್ಯವಾಗಿರುವುದು ಕೂಡ ಇದಕ್ಕೆ ಒಂದು ಕಾರಣ ಎನ್ನಲಾಗಿದೆ.
ಇದನ್ನೂ ಓದಿ:ಯೋಗೀಶ್​ ಗೌಡ ಕೊಲೆ ಪ್ರಕರಣ: ಪತ್ನಿಯ ಮುಖದಲ್ಲಿ ನಗು, ಅಳುತ್ತಿದ್ದ ಅಧಿಕಾರಿ..
ಕರೊನಾ ಹಾವಳಿ ಇದ್ದರೂ ಈ ಸಲ ಮಣ್ಣೆತ್ತಿಗೆ ಬೇಡಿಕೆ ಇದ್ದು, ಜನರು ತಂಡೋಪತಂಡವಾಗಿ ಆಗಮಿಸಿ ಮಣ್ಣೆತ್ತನ್ನು ಖರೀದಿ ಮಾಡುತ್ತಿರುವುದು ಕಂಡುಬಂದಿದೆ. ಮತ್ತೊಂದೆಡೆ ಮಣ್ಣೆತ್ತು ತಯಾರಿಸುವವರ ಕೊರತೆ ಇರುವುದರಿಂದ ಬೇಡಿಕೆ ಪೂರೈಸುವಷ್ಟರ ಮಟ್ಟಿಗೆ ಅದರ ಸರಬರಾಜು ಇಲ್ಲದಿರುವುದು ಕೂಡ ಗೋಚರಿಸಿದೆ. ವಿವಿಧ ರೀತಿಯ ಮಣ್ಣೆತ್ತುಗಳು ಬಜಾರಿನಲ್ಲಿ ಕಂಡುಬಂದಿದ್ದು, ಜನರು ಈ ಮಣ್ಣೆತ್ತುಗಳನ್ನು ತಯಾರಿಸಿ ಮನೆಯಲ್ಲಿ ಪೂಜಿಸಿ ಹಬ್ಬವನ್ನು ಆಚರಣೆ ಮಾಡುತ್ತಾರೆ.
ರೈತಮಿತ್ರ ಬಸವನ ಆರಾಧನೆ: ಇಂದು ಮಣ್ಣೆತ್ತಿನ ಅಮಾವಾಸ್ಯೆ..

ದೇಶದ ಒಟ್ಟು ಕೋವಿಡ್​ ಪ್ರಕರಣಗಳಲ್ಲಿ ಅರ್ಧಕ್ಕೂ ಹೆಚ್ಚು ಇವೆರಡು ರಾಜ್ಯಗಳಲ್ಲೇ ಇವೆ!

ಪ್ರಾಣಿಗಳ ಥರ ಕಾಡಿದ್ರು, ಒಬ್ರೂ ನೆರವಿಗೆ ಬರಲಿಲ್ಲ; ಇದು ಕೋಟ್ಯಧಿಪತಿ ಉದ್ಯಮಿಯ ಸಂಕಟದ ಕಥೆ..

ಪ್ರವಾಸಿಗರೇ ಎಚ್ಚರ.. ಇಲ್ಲಿ ಮಾಸ್ಕ್​ ಧರಿಸದಿದ್ದರೆ 5 ಸಾವಿರ ರೂ. ದಂಡ ಇಲ್ಲವೇ 8 ದಿನ ಜೈಲುಶಿಕ್ಷೆ!

Sign in to your account
Please enter an answer in digits:8 − 8 =
Remember me
