ಯಳಂದೂರು:ಮೃತರ ಶವ ಸಂಸ್ಕಾರ ಮಾಡಬೇಕೆಂದರೆ ಇವರು ಜೀವಭಯದಲ್ಲೇ ನದಿ ದಾಟಿ ಹೋಗಬೇಕು. ಇಲ್ಲಿನ ನಡಿಗೆ ಸ್ವಲ್ಪ ಆಯ ತಪ್ಪಿದರೂ ನೂರಾರು ಜನರು ಜೀವಂತ ಜಲಸಮಾಧಿ ಆಗುವುದು ಗ್ಯಾರಂಟಿ!
ಅಂದಹಾಗೆ ಇಂತಹ ದುಸ್ಥಿತಿಗೆ ಸಿಲುಕಿರುವುದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ದಲಿತ ಸಮುದಾಯದವರು. ಹೌದು, ಇಲ್ಲಿನ ದಲಿತ ಸಮುದಾಯಕ್ಕೆ ಸೇರಿದ ಸಮಾಧಿಗೆ ಹೋಗಬೇಕೆಂದರೆ ನದಿ ದಾಟಬೇಕು. ಅದಕ್ಕಾಗಿ ಗ್ರಾಮಸ್ಥರೇ ಹಲಗೆಯಿಂದ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಹೆಗಲ ಮೇಲೆ ಶವಹೊತ್ತು ಈ ಸೇತುವೆ ಮೂಲಕ ನದಿ ದಾಟುವುದೇ ಅವರಿಗೆ ಸರ್ಕಸ್. ತೂಗುಯ್ಯಾಲೆಯಂತೆ ಅಲುಗಾಡುವ ಈ ಸೇತುವೆ ಮೇಲೆ ಕಾಲಿಡುತ್ತಿದ್ದಂತೆ ಎದೆ ಢವಢವ ಅನ್ನೋಕೆ ಶುರು ಮಾಡುತ್ತೆ.ಇದನ್ನೂ ಓದಿರಿದೇವರಿಗೆ ಕೈಮುಗಿಯುತ್ತಿದ್ದಾಗಲೇ ವ್ಯಕ್ತಿಯ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ!
ಇಂತಹ ದುರ್ಗಮ ಹಾದಿಯಲ್ಲೇ ಸಂಬಂಧಿಕರು ಮತ್ತು ಕುಟುಂಬಸ್ಥರು ಮೃತದೇಹ ಎತ್ತಿಕೊಂಡು ಹೋಗಿ ಅಂತ್ಯಸಂಸ್ಕಾರ ನೆರವೇರಿಸುವ ದುಸ್ಥಿತಿಯ ವಿಡಿಯೋ ವೈರಲ್​ ಆಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಿದೆ.
ಸ್ಮಶಾನಕ್ಕೆಂದು ಸರ್ಕಾರ ನಿಗದಿಪಡಿಸಿದ ‌ಜಮೀನನ್ನು ಖಾಸಗಿ ವ್ಯಕ್ತಿಗಳಿಂದ ಒತ್ತುವರಿ‌ ಮಾಡಿಕೊಳ್ಳಲಾಗಿದೆ. ಈ‌ ವಿವಾದ ಕೋರ್ಟ್ ಮೆಟ್ಟಿಲೇರಿದೆ. ವಿವಾದ ಬಗೆಹರಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
https://www.facebook.com/VVani4U/videos/401695117466414
ಮಿಸ್ಟರ್ ಡಿಕೆಶಿ, ನೀವು ಜಾಮೀನಿನ ಮೇಲೆ ಹೊರಗಿದ್ದೀರಿ ಎಂಬುದನ್ನ ಅರಿತುಕೊಳ್ಳಿ; ಪ್ರಹ್ಲಾದ್ ಜೋಶಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − ten =
Remember me
