| ಮೃತ್ಯುಂಜಯ ಕಪಗಲ್, ಬೆಂಗಳೂರು
ಎನ್​ಡಿಆರ್​ಎಫ್​ನಡಿ ಬರ ನೆರವಿನ ಮೊತ್ತ ಬಿಡುಗಡೆಗೆ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಹೇರಿದ್ದ ಒತ್ತಡ ತಂತ್ರವೇ ತಿರುಗುಬಾಣವಾಗುವ ಲಕ್ಷಣಗಳಿವೆ. ನಿಯಮಾವಳಿ ಸಡಿಲಿಕೆ, ದುಪ್ಪಟ್ಟು ಪರಿಹಾರಕ್ಕೆ ಅನ್ನದಾತರ ಆಗ್ರಹ ಹೆಚ್ಚತೊಡಗಿದೆ.
ರೈತರ ಕೂಗಿಗೆ ಬಿಜೆಪಿ, ಜೆಡಿಎಸ್ ಧ್ವನಿಗೂಡಿಸಿವೆ. ಬಿಜೆಪಿ ಆಡಳಿತಾವಧಿಯಲ್ಲಿ ದುಪ್ಪಟ್ಟು ಬೆಳೆ ಪರಿಹಾರ ಮೊತ್ತ ನೀಡಿದ್ದನ್ನು ರೈತಾಪಿ ವರ್ಗಕ್ಕೆ ಮತ್ತೆ ಮತ್ತೆ ನೆನಪಿಸುತ್ತಿವೆ. ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿರುವ ಬೆಳೆ ಪರಿಹಾರ ಮೊತ್ತ ತೃಪ್ತಿ ತಂದಿಲ್ಲ. ಜೋಳ, ಹತ್ತಿ ಬೆಳೆ ಕೈಬಿಟ್ಟಿರುವುದು, ಆಗಸ್ಟ್ ನಂತರದ ನಷ್ಟವನ್ನು ಗಣನೆಗೆ ತೆಗೆದುಕೊಂಡಿಲ್ಲ. ನಿಯಮದ ವ್ಯಾಪ್ತಿಗೆ ಬರುವುದಿಲ್ಲವೆಂದು ಬೆಳೆ ಬೆಳೆಯದ ಪ್ರದೇಶ ಕಡೆಗಣಿಸಿರುವುದು ರೈತರ ಕೆಂಗಣ್ಣಿಗೆ ಕಾರಣವಾಗಿದೆ.
ನೆರವಿನ ನಿರೀಕ್ಷೆ:ಬರಗಾಲದಿಂದ ಬೆಳೆ ನಷ್ಟ ಮಾತ್ರವಲ್ಲ, ಕೃಷಿ ಅವಲಂಬಿತರ ಜೀವನೋಪಾಯಕ್ಕೆ ಕಷ್ಟವಾಗಿದೆ. ಬರ ಬಾಧಿತ ಕುಟುಂಬಗಳು ಹೆಚ್ಚಿನ ನೆರವು ನಿರೀಕ್ಷೆಯಲ್ಲಿವೆ. ಈ ನಡುವೆ ಮುಂಗಾರು ಜತೆಗೆ ಹಿಂಗಾರು ಬೆಳೆ ಹಾನಿ ಪರಿಹಾರಕ್ಕೆ ಪರಿಗಣಿಸಬೇಕೆಂಬ ಧ್ವನಿ ಎದ್ದಿದೆ. ಹಿಂಗಾರು ಹಂಗಾಮಿನ ಬೆಳೆ ಬೆಳೆಯುವ ಪ್ರಮಾಣ, ಪ್ರದೇಶ ಉತ್ತರ ಕರ್ನಾಟಕದಲ್ಲಿ ಹೆಚ್ಚಿದೆ.
ಎಸ್​ಡಿಆರ್​ಎಫ್ ಮಾರ್ಗಸೂಚಿ ಪ್ರಕಾರ ಗರಿಷ್ಠ ಎರಡು ಹೆಕ್ಟೇರ್ ಬೆಳೆ ನಷ್ಟಕ್ಕೆ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರತಿ ಹೆಕ್ಟೇರ್​ಗೆ ಖುಷ್ಕಿ ಜಮೀನಿಗೆ 8,300 ರೂ. ನೀರಾವರಿಗೆ 17,000 ರೂ.ತೋಟಗಾರಿಕೆಗೆ 22,500 ರೂ. ನಿಗದಿಪಡಿಸಿದೆ. ಕೇಂದ್ರ ಸರ್ಕಾರದ ಈ ಮೊತ್ತದ ಜತೆಗೆ ರಾಜ್ಯ ಸರ್ಕಾರ ಸಮಾನ ಮೊತ್ತ ಸೇರಿಸಿ ನೀಡಬೇಕು ಎನ್ನುವುದು ರೈತರ ಒತ್ತಾಯವಾಗಿದೆ.
ಎನ್​ಡಿಆರ್​ಎಫ್ ಮಾರ್ಗಸೂಚಿಯಲ್ಲಿ ಬೆಳೆ ನಷ್ಟಕ್ಕೆ ಇನ್ಪುಟ್ ಸಬ್ಸಿಡಿ ಜತೆಗೆ ಬರದಿಂದ ನೊಂದ ಕುಟುಂಬಗಳ ಜೀವನೋಪಾಯಕ್ಕೆ ಪರಿಹಾರದ ಪಾಲಿದೆ. ಬೆಳೆ ನಷ್ಟ ನೆರವು ಪಾವತಿಸಿದ ನಂತರ ತಮಗೂ ಜೀವನಾಧಾರಕ್ಕೆ ಸರ್ಕಾರ ಆಸರೆಯಾಗಬಲ್ಲದು ಎಂದು ಕುಟುಂಬಗಳು ಕಾಯುತ್ತಿವೆ.
ಕೇಂದ್ರಕ್ಕೆ ಸಲ್ಲಿಸಿದ್ದ ನೆರವಿನ ಪ್ರಸ್ತಾವನೆಯಲ್ಲಿ ನಿರಂತರ 90 ದಿನಗಳ ಬರದಿಂದ ಬಾಧಿತ ಕುಟುಂಬಗಳ ಜೀವನೋಪಾಯಕ್ಕೆ ಸಹಾಯವಾಗಲು 12,577.90 ಕೋಟಿ ರೂ. ಬೇಕೆಂದು ರಾಜ್ಯ ಸರ್ಕಾರ ಕೇಳಿದ್ದನ್ನು ಉಲ್ಲೇಖಿಸಬಹುದು.
ಜಿಲ್ಲಾವಾರು ಮರು ಪರಿಶೀಲನೆ:ಬೆಳೆ ನಷ್ಟ ಸಮೀಕ್ಷೆ ಅವೈಜ್ಞಾನಿಕ, ಪರಿಹಾರ ವಿತರಣೆಯೂ ಅಸಮರ್ಪಕವಾಗಿದೆ ಎಂದು ರೈತರು ನೀಡಿದ ದೂರನ್ನು ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿ, ನೀಡಿದ ಸೂಚನೆಯಂತೆ ಜಿಲ್ಲಾವಾರು ಮರು ಪರಿಶೀಲನೆ ಕಾರ್ಯ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಜತೆಗೆ ಸಿಎಂ ಸಿದ್ದರಾಮಯ್ಯ ನಡೆಸಿದ ಅನೌಪಚಾರಿಕ ಸಭೆಯಲ್ಲಿ ರಾಜ್ಯದ 20.13 ಲಕ್ಷ ರೈತ ಕುಟುಂಬಗಳಿಗೆ ತಲಾ 2,400 ರೂ.ನಂತೆ 476.40 ಕೋಟಿ ರೂ.ಗಳನ್ನು ಜೀವನೋಪಾಯ ನಷ್ಟಕ್ಕೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಫ್ರೂಟ್ಸ್ ಆಪ್​ನಲ್ಲಿ ರೈತರು ದಾಖಲಿಸಿದ ದತ್ತಾಂಶದಲ್ಲಿ ವ್ಯತ್ಯಾಸಗಳಿವೆ ಎಂದು ಇನ್ನೂ ಎರಡು ಲಕ್ಷ ರೈತರಿಗೆ ಬೆಳೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಬೆಳೆ ನಷ್ಟ ಪರಿಹಾರ ಪಾವತಿಸಿದ ರೈತರಿಗೆ ಜೀವನೋಪಾಯಕ್ಕೆ ನೆರವು ಎಂದು ತಲಾ 2,400 ರೂ. ಹೆಚ್ಚುವರಿ ನೀಡುವರೆ? ಎಂಬ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಮೂಲಗಳು ಹೇಳಿವೆ.
ಬೆಳೆ ನಷ್ಟಕ್ಕೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಬೇಕು. ಜೀವನೋಪಾಯಕ್ಕೂ ನೆರವು ನೀಡುವ ಜತೆಗೆ ಬೆಳೆ ಬೆಳೆಯದ ಪ್ರದೇಶವನ್ನು ನಷ್ಟವೆಂದು ಪರಿಗಣಿಸಬೇಕು. ಪರಿಹಾರ ರೂಪದಲ್ಲಿ ಅಲ್ಪ ಮೊತ್ತ ಜಮೆ ಮಾಡಿರುವುದನ್ನು ಸರ್ಕಾರ ಮರುಪರಿಶೀಲಿಸಿ ಕ್ರಮವಹಿಸಬೇಕು.
| ಕುರುಬೂರು ಶಾಂತಕುಮಾರ್ ರಾಜ್ಯಾಧ್ಯಕ್ಷ, ರೈತ ಸಂಘಟನೆಗಳ ಒಕ್ಕೂಟ
ಆರ್​ಸಿಬಿ ಗೆಲುವಿಗೆ ಅಲ್ಲಿಂದಲೇ ಶುಭಕೋರಿದ ವಿಜಯ್​​ ಮಲ್ಯ! ದಯವಿಟ್ಟು ಫೈನಲ್​ಗಾದ್ರೂ ಭಾರತಕ್ಕೆ ಬನ್ನಿ…

ಇದೇ ನಮ್ಮ ಸೋಲಿಗೆ ಮುಖ್ಯ ಕಾರಣ… ತಂಡದ ಸಹ ಆಟಗಾರರನ್ನು ದೂರಿದ ರುತುರಾಜ್ ಗಾಯಕ್ವಾಡ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + eleven =
Remember me
