ಬೆಂಗಳೂರು:ಲೋಡ್​ ಶೆಡ್ಡಿಂಗ್​ನಿಂದಾಗಿ ಬಳ್ಳಾರಿ ಜೀನ್ಸ್​ ಉದ್ಯಮ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ ಟೀಕಾ ಪ್ರಹಾರ ನಡೆಸಿದ್ದಾರೆ.
ಸುಳ್ಳು ಹೇಳುವುದು ಕಾಂಗ್ರೆಸಿಗರ “ಜೀನ್ಸ್”ನಲ್ಲೇ ಇದೆ ಎಂಬಂತೆ, ದೂರದೃಷ್ಟಿಯ ಯೋಚನೆ ಇಲ್ಲದೆ ಅರ್ಥಹೀನ ಯೋಜನೆ ಘೋಷಿಸಿ, ಅದನ್ನು ಪೂರೈಸಲಾಗದೆ ಇಂದು ಇಡೀ ಕರ್ನಾಟಕವನ್ನು ದಿವಾಳಿ ಮಾಡುವತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಸಾಗುತ್ತಿದೆ.
ಜೀನ್ಸ್ ಉದ್ಯಮವನ್ನೇ ಅವಲಂಬಿಸಿದ ರಾಜ್ಯದ 80,000ಕ್ಕೂ ಹೆಚ್ಚು ಕುಟುಂಬಗಳು ವಿದ್ಯುತ್ ಕೊರತೆಯಿಂದ ಬಳಲುತ್ತಿದೆ. ಬಿಟ್ಟಿ ಭಾಗ್ಯ ಪೂರೈಸಲಾಗದೆ ವಿದ್ಯುತ್ ಕಡಿತಗೊಳಿಸಿದ ಪರಿಣಾಮ ರಾಜ್ಯದ ಜನರ ಜೀವನವನ್ನೇ ನಾಶ ಮಾಡುತ್ತಿದೆ.
ಬಳ್ಳಾರಿಯಿಂದ ಗೆದ್ದ ಸೋನಿಯಾ ಗಾಂಧಿ ಬಳ್ಳಾರಿಯನ್ನು ಬಿಟ್ಟು ಹೋದರು. ಜೀನ್ಸ್ ಉದ್ಯಮಕ್ಕೆ ನೆರವು ನೀಡುವ ಭರವಸೆ ನೀಡಿದ ರಾಹುಲ್ ಗಾಂಧಿ, ಈ ಉದ್ಯಮವನ್ನೇ ರಾಜ್ಯ ಕಾಂಗ್ರೆಸ್ಸಿಗರ ಮೂಲಕ ಸರ್ವನಾಶ ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಬಿಟ್ಟಿ ಭಾಗ್ಯ ಘೋಷಿಸಿದ ಕಾಂಗ್ರೆಸ್, ಪಂಜಾಬ್ ರಾಜ್ಯದ ಸ್ಥಿತಿಯನ್ನೇ ರಾಜ್ಯಕ್ಕೂ ತರುವ ಸಂಕಲ್ಪ ಮಾಡಿದ್ದಾರೆಯೇ? ಎಂದು ಪ್ರಹ್ಲಾದ್​ ಜೋಶಿ ಅವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಸುಳ್ಳು ಹೇಳುವುದು ಕಾಂಗ್ರೆಸಿಗರ “ಜೀನ್ಸ್” ನಲ್ಲೇ ಇದೆ ಎಂಬಂತೆ, ದೂರದೃಷ್ಟಿಯ ಯೋಚನೆ ಇಲ್ಲದೆ ಅರ್ಥಹೀನ ಯೋಜನೆ ಘೋಷಿಸಿ ಅದನ್ನು ಪೂರೈಸಲಾಗದೆ ಇಂದು ಇಡೀ ಕರ್ನಾಟಕವನ್ನು ದಿವಾಳಿ ಮಾಡುವತ್ತ ಮುಖ್ಯಮಂತ್ರಿ@siddaramaiahಸರಕಾರ ಸಾಗುತ್ತಿದೆ
ಜೀನ್ಸ್ ಉದ್ಯಮವನ್ನೇ ಅವಲಂಬಿಸಿದ ರಾಜ್ಯದ 80,000 ಕ್ಕೂ ಹೆಚ್ಚು ಕುಟುಂಬಗಳು ವಿದ್ಯುತ್…
— Pralhad Joshi (@JoshiPralhad)October 25, 2023

ಆಫ್ಘಾನ್​ ವಿರುದ್ಧ ಸೋಲು: ಮೈದಾನದಲ್ಲಿ ಪಾಕ್​ ಆಲ್​ರೌಂಡರ್​ ಇಫ್ತಿಕರ್​ ನಡೆ ಕಂಡು ತಬ್ಬಿಬ್ಬಾದ ಫ್ಯಾನ್ಸ್​! ವಿಡಿಯೋ ವೈರಲ್​​
ಹುಲಿ ಉಗುರು ಪ್ರಕರಣ: ಪ್ರಭಾವಿಗಳಿಗೆ ಎದುರಾಯ್ತಾ ಸಂಕಷ್ಟ?
ಹುಲಿ ಉಗುರು ಪ್ರಕರಣ: ನಟ ದರ್ಶನ ಮನೆಯಲ್ಲಿ ಶೋಧ; ಅರೆಸ್ಟ್ ಆಗ್ತಾರಾ ಚಾಲೆಂಜಿಂಗ್ ಸ್ಟಾರ್?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 19 =
Remember me
