ಬೆಳಗಾವಿ:ಕೇಂದ್ರ ಸಚಿವ ಸುರೇಶ ಅಂಗಡಿ ಅವರು ಎಷ್ಟೇ ಒತ್ತಡದ ಕೆಲಸದಲ್ಲಿದ್ದರೂ ಆ ಮಗುವಿನ ಮುಖ ಕಂಡಾಕ್ಷಣ ತಾವು ಮಗುವಿನಂತೆ ಆಟವಾಡುತ್ತಿದ್ದ. ಅನಾರೋಗ್ಯ ನಿಮಿತ್ತ ದೆಹಲಿಯ ಏಮ್ಸ್​ ಆಸ್ಪತ್ರೆಗೆ ಹೋಗುವ ಮುನ್ನವೂ ಕೊನೆಯದಾಗಿ ಆ ಪುಟ್ಟ ಕಂದಮ್ಮನ ಜತೆ ಕೆಲಕಾಲ ಕಳೆದಿದ್ದರು…
ಹೌದು, ಸುರೇಶ್​ ಅಂಗಡಿ ಅವರಿಗೆ ಮೊಮ್ಮಗಳು 2 ವರ್ಷದ ರಿದ್ದಿಶಾ ಅಂದ್ರೆ ಅಚ್ಚು ಮೆಚ್ಚು. ರಾಜಕೀಯ ಬಿಡುವಿನ ವೇಳೆ ಮನೆಯಲ್ಲಿ ಮೊಮ್ಮಗಳೊಂದಿಗೆ ಹೆಚ್ಚಾಗಿ ಕಾಲಕಳೆಯುತ್ತಿದ್ದರು. ಸುರೇಶ್ ಅಂಗಡಿಗೆ ಇಬ್ಬರು ಹೆಣ್ಣು ಮಕ್ಕಳು. ಈ ಪೈಕಿ ಹಿರಿಯ ಮಗಳು ಸ್ಫೂರ್ತಿ ಅಂಗಡಿಯ ಪುತ್ರಿಯೇ ಈ ರಿದ್ದಿಶಾ. ಅಜ್ಜನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತನ್ನ ತಾಯಿ ಜೊತೆ ದೆಹಲಿಗೆ ರಿದ್ದಿಶಾ ಪ್ರಯಾಣ ಬೆಳೆಸಿದ್ದಾರೆ. ಆದರೆ, ಆ ಕಂದಮ್ಮನಿಗೆ ಅಜ್ಜನನ್ನು ನೋಡಲು ತಾನು ಹೋಗುತ್ತಿರುವುದು ಇದೇ ಕೊನೇ… ತಾತ ಬಾರದ ಲೋಕಕ್ಕೆ ಹೋಗಿದ್ದಾರೆ… ಮತ್ತೆಂದೂ ಬರಲ್ಲ… ಎಂಬುದ್ಯಾವುದೂ ಗೊತ್ತಿಲ್ಲ. ಏನೂ ಅರಿಯದ ಕಂದಮ್ಮ, ತಾತನ ನೋಡಲು ಪ್ರಯಾಣ ಬೆಳೆಸಿದೆ.ಇದನ್ನೂ ಓದಿರಿಪೋಷಕ ನಟ ರಾಕ್​ಲೈನ್​ ಸುಧಾಕರ್​ ನಿಧನ
ಇನ್ನು ಸುರೇಶ್​ ಅಂಗಡಿ ಅವರು ಸಂಜೆ ವೇಳೆ ಬಿಡುವು ಸಿಕ್ಕಾಗ ಮಿರ್ಚಿ ಬಜ್ಜಿ, ಚೂಡಾ ಮಂಡಕ್ಕಿಯನ್ನು ಇಷ್ಟಪಟ್ಟು ಸೇವಿಸುತ್ತಿದ್ದರು. ಬೆಳಗಾವಿಯ ಮಹಾವೀರ ಟೀ ಸ್ಟಾಲ್​ನ ಮಿರ್ಚಿ ಮಂಡಕ್ಕಿ, ಚೂಡಾ ಚಹಾ ಅಂದ್ರೆ ಅವರಿಗೆ ತುಂಬಾ ಇಷ್ಟವಾಗುತ್ತಿತ್ತು.
ನನ್ನ ಮಗ ಬಂದೇ ಬರುತ್ತಾನೆ… ಎಂದು ಗೋಳಾಡಿದ ಸುರೇಶ್​ ಅಂಗಡಿ ತಾಯಿ ಸೋಮವ್ವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
