ಬೆಳಗಾವಿ:‘ಯಜಮಾನ್ರು ಇಲ್ಲದೆ ಮನೆಯೊಳಗೆ ಹೇಗೆ ಹೋಗಲಿ.. ಅತ್ತೆಗೆ ಏನಂತ ಸಮಾಧಾನ ಪಡಿಸಲಿ.. ದೆಹಲಿಯಿಂದ ಬರಿಗೈಯಲ್ಲಿ ಬಂದಿಯಾ.. ಅಂತ ಕೇಳಿದರೆ ಏನೂ ಹೇಳಲಿ.. ಎಂದು ದಿ. ಸುರೇಶ ಅಂಗಡಿ ಅವರ ಪತ್ನಿ ಮಂಗಲ ಅಂಗಡಿ ಅವರು ಮನೆಯ ಬಾಗಿಲಲ್ಲಿ ನಿಂತು ಬಿಕ್ಕಿಬಿಕ್ಕಿ ಅಳುತ್ತಿದ್ದರು.
ದೆಹಲಿಯಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಅಂತ್ಯಕ್ರಿಯೆ ನೇರವೇರಿಸಿದ ಬಳಿಕ ಕುಟುಂಬ ಸದಸ್ಯರು ಶುಕ್ರವಾರ ಬೆಳಗಾವಿ ನಿವಾಸಕ್ಕೆ ಬರುತ್ತಿದ್ದಂತೆ ಆಕ್ರಂದನ ಮುಗಿಲುಮುಟ್ಟಿತು.ಇದನ್ನೂ ಓದಿರಿನನ್ನ ಮಗ ಬಂದೇ ಬರುತ್ತಾನೆ… ಎಂದು ಗೋಳಾಡಿದ ಸುರೇಶ್​ ಅಂಗಡಿ ತಾಯಿ ಸೋಮವ್ವ
ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ನಿವಾಸದಲ್ಲಿ ಕುಟುಂಬ ಸದಸ್ಯರು, ಸಂಬಂಧಿಕರು, ಸಿಬ್ಬಂದಿ, ವಾಹನಗಳ ಚಾಲಕರು ಸುರೇಶ್​ ಅಂಗಡಿ ಅವರನ್ನು ನೆನೆದು ಬಿಕ್ಕಿ-ಬಿಕ್ಕಿ ಅತ್ತರು.
ಕರೊನಾ ಸೋಂಕಿನಿಂದ ಬಳಲುತ್ತಿದ್ದ ಸುರೇಶ್​ ಅಂಗಡಿ ಅವರನ್ನು ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಬುಧವಾರ ರಾತ್ರಿ ನಿಧನರಾದರು. ಅವರ ಅಂತ್ಯಕ್ರಿಯೆಯನ್ನು ದೆಹಲಿಯ ದ್ವಾರಕಾ ಸೆಕ್ಟರ್​ 24ರಲ್ಲಿರುವ ವೀರಶೈವ-ಲಿಂಗಾಯತ ಸಮುದಾಯದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಮಗನ ಸಾವಿನ ಸುದ್ದಿ ಕೇಳಿದ ಅವರ ತಾಯಿ ಸೋಮವ್ವ, ‘ನನ್ನ ಮಗ ವಾಪಸ್​ ಬಂದೇ ಬರ್ತಾನಾ…’ ಎಂದು ಬೆಳಗಾವಿ ನಿವಾಸಕ್ಕೇ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಆಸ್ಪತ್ರೆಗೆ ಹೋಗುವ ಮುನ್ನ ಈ ಪುಟ್ಟ ಕಂದಮ್ಮನ ಜತೆಯಲ್ಲಿ ಆಟವಾಡಿದ್ದ ಸುರೇಶ್​ ಅಂಗಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
